ಅಡಿಕೆ, ಬಾಳೆ ಕಡಿದ ಕಿಡಿಗೇಡಿಗಳು

| Published : Oct 04 2024, 01:01 AM IST

ಸಾರಾಂಶ

ತಾಲೂಕಿನ ತಳಕು ಹೋಬಳಿಯ ಪರಶುರಾಮಪುರ ಠಾಣಾ ವ್ಯಾಪ್ತಿಯ ಸಿರಿವಾಳ ಓಬಳಾಪುರದ ಗ್ರಾಮಕ್ಕೆ ಹೊಂದಿಕೊಂಡಿರುವ ಕೋಡಿಹಟ್ಟಿಯ ಜಿ.ಎಂ. ಚಂದ್ರಪ್ಪ ಎಂಬುವವರು 7 ಎಕರೆ ಜಮೀನಿನಲ್ಲಿ 3ಸಾವಿರ ಬಾಳೆ, 5600 ಅಡಿಕೆ ಗಿಡ ಬೆಳೆದಿದ್ದರು. ಬುಧವಾರ ರಾತ್ರಿ ಯಾರೋ ಕಿಡಿಗೇಡಿಗಳು ತೋಟಕ್ಕೆ ನುಗ್ಗಿ ನೀರು ಹಾಯಿಸುವ ಪೈಪ್, ಅಡಿಕೆ ಮತ್ತು ಬಾಳೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಗುರುವಾರ ಬೆಳಗ್ಗೆ ಜಮೀನಿಗೆ ಬಂದ ಮಾಲೀಕ ಜಿ.ಎಂ. ಚಂದ್ರಪ್ಪ ಪ್ರತಿದಿನದಂತೆ ಜಮೀನಿನಲ್ಲಿ ಸುತ್ತಾಡುವ ಸಂದರ್ಭದಲ್ಲಿ ನೀರಿನ ಪೈಪ್ ತುಂಡು ಮಾಡಿದ್ದು ಕಂಡುಬಂದಿದೆ. ಅಲ್ಲದೇ ಫಸಲಿಗೆ ಬಂದಿದ್ದ ಸುಮಾರು 12 ಅಡಿಕೆ, 6 ಬಾಳೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಕೂಡಲೇ ರೈತ ಚಂದ್ರಪ್ರ ಪೊಲೀಸ್ ಠಾಣೆಗೆ ತೆರಳಿ ನನ್ನ ಜಮೀನಿನಲ್ಲಿ ಅಡಿಕೆ, ಬಾಳೆ ನಾಶಪಡಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಚಳ್ಳಕೆರೆ: ತಾಲೂಕಿನ ತಳಕು ಹೋಬಳಿಯ ಪರಶುರಾಮಪುರ ಠಾಣಾ ವ್ಯಾಪ್ತಿಯ ಸಿರಿವಾಳ ಓಬಳಾಪುರದ ಗ್ರಾಮಕ್ಕೆ ಹೊಂದಿಕೊಂಡಿರುವ ಕೋಡಿಹಟ್ಟಿಯ ಜಿ.ಎಂ. ಚಂದ್ರಪ್ಪ ಎಂಬುವವರು 7 ಎಕರೆ ಜಮೀನಿನಲ್ಲಿ 3ಸಾವಿರ ಬಾಳೆ, 5600 ಅಡಿಕೆ ಗಿಡ ಬೆಳೆದಿದ್ದರು. ಬುಧವಾರ ರಾತ್ರಿ ಯಾರೋ ಕಿಡಿಗೇಡಿಗಳು ತೋಟಕ್ಕೆ ನುಗ್ಗಿ ನೀರು ಹಾಯಿಸುವ ಪೈಪ್, ಅಡಿಕೆ ಮತ್ತು ಬಾಳೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಗುರುವಾರ ಬೆಳಗ್ಗೆ ಜಮೀನಿಗೆ ಬಂದ ಮಾಲೀಕ ಜಿ.ಎಂ. ಚಂದ್ರಪ್ಪ ಪ್ರತಿದಿನದಂತೆ ಜಮೀನಿನಲ್ಲಿ ಸುತ್ತಾಡುವ ಸಂದರ್ಭದಲ್ಲಿ ನೀರಿನ ಪೈಪ್ ತುಂಡು ಮಾಡಿದ್ದು ಕಂಡುಬಂದಿದೆ. ಅಲ್ಲದೇ ಫಸಲಿಗೆ ಬಂದಿದ್ದ ಸುಮಾರು 12 ಅಡಿಕೆ, 6 ಬಾಳೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಕೂಡಲೇ ರೈತ ಚಂದ್ರಪ್ರ ಪೊಲೀಸ್ ಠಾಣೆಗೆ ತೆರಳಿ ನನ್ನ ಜಮೀನಿನಲ್ಲಿ ಅಡಿಕೆ, ಬಾಳೆ ನಾಶಪಡಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

------೩ಸಿಎಲ್‌ಕೆ೪: ಚಳ್ಳಕೆರೆ ತಾಲೂಕಿನ ಕೋಡಿಹಟ್ಟಿ ಗ್ರಾಮದ ರೈತ ಜಿ.ಎಂ. ಚಂದ್ರಪ್ಪ ಎಂಬುವವರ ಜಮೀನಿನಲ್ಲಿದ್ದ ಅಡಿಕೆ, ಬಾಳೆ ಗಿಡಗಳನ್ನು ಕತ್ತರಿಸಿರುವ ಕಿಡಿಗೇಡಿಗಳು.