ಸಾರಾಂಶ
ಹೊಸ ಯೋಜನೆಗಳು
ಬಿಬಿಎಂಪಿಯ 2024-25ನೇ ಸಾಲಿನ ಆಯವ್ಯಯದಲ್ಲಿ ಭಾರೀ ಮೊತ್ತದ ಹೊಸ ಯೋಜನೆಗಳನ್ನು ಕೈಗೊಳ್ಳುವುದಕ್ಕೆ ಬಿಬಿಎಂಪಿ ಮುಂದಾಗಿಲ್ಲ. ಆದರೆ, ತನ್ನ ಇತಿಮಿತಿಯಲ್ಲಿ ಕೆಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದೆ.*ನವ ದೆಹಲಿ ಮಾದರಿಯಲ್ಲಿ ಜಾಹೀರಾತು ನೀತಿ
ನವ ದೆಹಲಿ ಮಾದರಿಯಲ್ಲಿ ಜಾಹೀರಾತು ನೀತಿ ರಚನೆ ಮಾಡುತ್ತಿದೆ. ತರ್ಕಬದ್ಧ, ಪಾರದರ್ಶಕ ಮತ್ತು ನಿಯಂತ್ರಿತ ವ್ಯವಸ್ಥೆಗೆ ಅನುಮತಿ ನೀಡುವುದಕ್ಕೆ ನಿರ್ಧರಿಸಿದೆ. ಬಿಬಿಎಂಪಿಗೆ ವಾರ್ಷಿಕ ಸುಮಾರು ₹500 ಕೋಟಿ ಆದಾಯ ಸಂಗ್ರಹಿಸುವ ಅಂದಾಜು ಹೊಂದಿದೆ.*ಆನ್‌ಲೈನ್‌ನಲ್ಲಿ ಟಿಡಿಆರ್ ಮಾರಾಟ-ಖರೀದಿನಗರದಲ್ಲಿ ಸರ್ಕಾರ ಯೋಜನೆಗಳಿಗೆ ಸ್ವಾಧೀನಪಡಿಸಿಕೊಳ್ಳುವ ಆಸ್ತಿಗಳಿಗೆ ಡಿಆರ್‌ಸಿ ಅಥವಾ ಟಿಡಿಆರ್ ನೀಡುವ ವ್ಯವಸ್ಥೆ ಇದೆ. ಟಿಡಿಆರ್ ರಚನೆ ಮತ್ತು ವಿತರಣೆಗಾಗಿ ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯಡಿ ಡಿಆರ್‌ಸಿ ಮತ್ತು ಟಿಡಿಆರನ್ನು ಆನ್‌ಲೈನ್ ಮೂಲಕ ಮಾರಾಟ ಮತ್ತು ಖರೀದಿ ಮಾಡುವ ವ್ಯವಸ್ಥೆ ಇರಲಿದೆ. ಯಾರು ಬೇಕಾದರೂ ಆನ್‌ಲೈನ್‌ನಲ್ಲಿ ಭಾಗವಹಿಸಬಹುದಾಗಿದೆ.*ಶರಣೆ ಸತ್ಯಕ್ಕ
ನಿಷ್ಠೆ, ಪ್ರಮಾಣಿಕತೆಯಿಂದ ಕಾರ್ಯನಿವರ್ಹಿಸುವ ಮಹಿಳಾ ಪೌರಕಾರ್ಮಿಕರಿಗೆ ಶರಣ ಸತ್ಯಕ್ಕ ಪ್ರಶಸ್ತಿ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ವಲಯಕ್ಕೆ ಒಂದರಂತೆ ಎಂಟು ವಲಯಗಳಿಗೆ ಎಂಟು ಪ್ರಶಸ್ತಿ ನೀಡುವುದಾಗಿ ಘೋಷಿಸಲಾಗಿದೆ. ಪ್ರಶಸ್ತಿ ಮೌಲ್ಯ ₹50 ಸಾವಿರ ಆಗಿರಲಿದೆ. ಪೌರಕಾರ್ಮಿಕ ದಿನಾಚರಣೆಯಂದು ಪ್ರದಾನ ಮಾಡಲು ತೀರ್ಮಾನಿಸಲಾಗಿದೆ.*ಸಾರಿಗೆ ಆಧಾರಿತ ಅಭಿವೃದ್ಧಿ ಸ್ಕೈವಾಕ್ಬನಶಂಕರಿ ವೃತ್ತದಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿ ಸ್ಕೈವಾಕ್ (ಟಿಒಡಿ) ಅನ್ನು ಅಭಿವೃದ್ಧಿ ಪಡಿಸುವುದಕ್ಕೆ ಬಿಬಿಎಂಪಿ ಪ್ರಾರಂಭಿಕ ಮೊತ್ತವಾಗಿ ಬಜೆಟ್‌ನಲ್ಲಿ ₹50 ಕೋಟಿ ನೀಡಿದೆ. ಇದರಿಂದ ಬಿಎಂಟಿಸಿ, ಟಿಟಿಎಂಸಿ ಹಾಗೂ ಮೆಟ್ರೋ ನಿಲ್ದಾಣ ಜೋಡಣೆಯಾಗಲಿದ್ದು, ನೂತನ ವಿನ್ಯಾಸದಲ್ಲಿ ಪಾದಚಾರಿ ಮೇಲ್ಸೇತುವೆ ಇರಲಿದೆ. ಎಸ್ಕಲೇಟರ್ ವ್ಯವಸ್ಥೆ ಇರಲಿದೆ.*27 ಉಚಿತ ಫಿಸಿಯೋಥೆರಪಿ
ನಗರದಲ್ಲಿ 27 ಉಚಿತ ಫಿಸಿಯೋಥೆರಪಿ ಕೇಂದ್ರಗಳನ್ನು ಆರಂಭಿಸುವುದಾಗಿ ಬಿಬಿಎಂಪಿ ಬಜೆಟ್ ನಲ್ಲಿ ಘೋಷಣೆ ಮಾಡಿದೆ.*ಸಮಗ್ರ ಸದೃಢ ಆರೋಗ್ಯಈ ಹೆಸರಿನಲ್ಲಿ 3 ವರ್ಷದ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ 40 ಹೊಸ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, 81 ಆರೋಗ್ಯ ಕೇಂದ್ರ ನವೀಕರಣಕ್ಕೆ ಒಟ್ಟಾರೆ ₹64 ಕೋಟಿ ವೆಚ್ಚ ಮಾಡಲಾಗುತ್ತಿದೆ. ಜತೆಗೆ 24 ಹೆರಿಗೆ ಆಸ್ಪತ್ರೆ ಮತ್ತು ರೆಫರಲ್ ಘಟಕಗಳಲ್ಲಿ ಹೆಚ್ಚುವರಿ ಕೊಠಡಿಗೆ ₹24 ಕೋಟಿ ವ್ಯಯಿಸಲಾಗುತ್ತಿದೆ.
*ಆರೋಗ್ಯ ಸಾರಥಿಮನೆ ಬಾಗಿಲಿಗೆ ಚುಚ್ಚು ಮದ್ದು ನೀಡುವ ಕಾರ್ಯಕ್ರಮ ಇದಾಗಿದೆ. ಇದಕ್ಕಾಗಿ ಬಿಬಿಎಂಪಿಯ ಆರೋಗ್ ಸಿಬ್ಬಂದಿಗೆ ವಿದ್ಯುತ್ ಚಾಲಿತ ವಾಹನ ನೀಡಲಾಗುವುದು. 14 ಆ್ಯಂಬುಲೆನ್ಸ್ ಖರೀದಿಗೆ ₹24 ಕೋಟಿ ವೆಚ್ಚ ಮಾಡಲಾಗುತ್ತಿದೆ. (ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು.)*ಡೇಕೇರ್ ಸೆಂಟರ್ಪೊಬ್ಬತಿ ಹೆಸರಿಗೆ ಆಸ್ಪತ್ರೆಯ ಸುತ್ತಮುತ್ತಲಿನ 200 ಅಂಗವಿಕಲ ಮಕ್ಕಳಿಗೆ ₹1 ಕೋಟಿ ವೆಚ್ಚದಲ್ಲಿ ಡೇಕೇರ್ ಸೆಂಟರ್ ಆರಂಭ.*ಯೂಟ್ಯೂಬ್ ಚಾಲನ್ ಆರಂಭ
ಪಾಲಿಕೆ ಆಂತರಿಕ ವೈದ್ಯರ ತಂಡ ಮತ್ತು ಕ್ಷೇತ್ರ ತಜ್ಞರ ಸಹಾಯದಿಂದ ಮನೋಬಿಂಬ ಯೂಟ್ಯೂಬ್ ಚಾಲನ್ ಆರಂಭಿಸುವುದಕ್ಕೆ ತೀರ್ಮಾನಿಸಲಾಗಿದೆ. ಮಾನಸಿ ಒತ್ತಡ, ಕೌಟುಂಬಿಕ, ಉದ್ಯೋಗ ಸಮಸ್ಯೆ ಪರಿಹಾರ ಮಾರ್ಗಗಳನ್ನು ಪ್ರಸಾರ ಮಾಡಲು ನಿರ್ಧರಿಸಲಾಗಿದೆ.*ವೈದ್ಯಕೀಯ ಮಹಾ ವಿದ್ಯಾಲಯಮುಂಬೈ ನಗರ ಪಾಲಿಕೆ ಮಾದರಿಯಲ್ಲಿ ಬಿಬಿಎಂಪಿಯು ಹೊಸದಾಗಿ ವೈದ್ಯಕೀಯ ಮಹಾ ವಿದ್ಯಾಲಯ ಸ್ಥಾಪನೆ ಮಾಡುವುದಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದೆ. (ವಿಶೇಷ ವರದಿ ಪ್ರಕಟ)*ಭಾರತ್ ಆರೋಗ್ಯ ವಿಮಾ ಯೋಜನೆ
ಬಿಬಿಎಂಪಿ ಶಾಲೆಯ ಮಕ್ಕಳು ಮತ್ತು ಪೋಷಕರಿಗೆ ಉಚಿತ ವಿಮೆ ಮಾಡಿಸುವುದಾಗಿ ಘೋಷಣೆ ಮಾಡಿದೆ.*ಶಾಲಾ ತೋಟಶಾಲೆ ಆವರಣದಲ್ಲಿ ಶಿಕ್ಷಕರ ಮಾರ್ಗ ದರ್ಶನದಲ್ಲಿ ತರಕಾರಿ-ಹೂ ಬೆಳಯಲು ಪ್ರೋತ್ಸಾಹಿಸಲಿ ಶಾಲಾ ತೋಟ ಯೋಜನೆ ಆರಂಭಿಸಲಾಗುತ್ತಿದೆ. ಅದಕ್ಕಾಗಿ ₹5 ಕೋಟಿ*ಕೆಂಪೇಗೌಡ ಭವನ
ವಿಜಯನಗರದಲ್ಲಿ ಬೃಹತ್ ಕೆಂಪೇಗೌಡ ಭವನ ನಿರ್ಮಾಣ--ಹಳೇ ಯೋಜನೆ ಮರು ಘೋಷಣೆ
ಬಿಬಿಎಂಪಿಯ 2024-25ನೇ ಸಾಲಿನ ಆಯವ್ಯಯದಲ್ಲಿ ಕಳೆದ 2023-24ರಲ್ಲಿ ಘೋಷಣೆ ಮಾಡಿದ ಹಲವು ಯೋಜನೆಗಳನ್ನು ಮರು ಪ್ರಸ್ತಾಪಿಸಲಾಗಿದೆ.*ಸೊಸೈಟಿ ಸ್ಥಾಪನೆಬಿಬಿಎಂಪಿಯ ಕಳೆದ ವರ್ಷದ ಬಜೆಟ್‌ನಲ್ಲಿ ಬಿಬಿಎಂಪಿ ನಿವೃತ್ತ ಅಧಿಕಾರಿ ಸಿಬ್ಬಂದಿಯ ಮುಂದಿನ ಜೀವನಕ್ಕೆ ಅನುಕೂಲವಾಗುವಂತೆ ಬಿಬಿಎಂಪಿ ಪಿಂಚಣಿದಾರರ ಆರೋಗ್ಯ ಕಲ್ಯಾಣನಿಧಿ ಹೆಸರಿನಲ್ಲಿ ಸೊಸೈಟಿ ಸ್ಥಾಪಿಸಿ ಕಾರ್ಪಸ್ ಫಂಡ್ ಬೆಳೆಸಲು ಉದ್ದೇಶಿಸಲಾಗಿತ್ತು. ಈ ಮೂಲಕ ನಿವೃತ್ತ ಸಿಬ್ಬಂದಿಯ ಆರೋಗ್ಯ ರಕ್ಷಣೆ ಭದ್ರತೆ ಒದಗಿಸುವುದಾಗಿತ್ತು.*ಕೆಂಪೇಗೌಡ ಆವಿಷ್ಕಾರ ಪ್ರಶಸ್ತಿ ಅದೇ ರೀತಿ ಅಧಿಕಾರಿ ಸಿಬ್ಬಂದಿಯ ಹೊಸ ತಂತ್ರಜ್ಞಾನ, ಸಮಸ್ಯೆ ನಿವಾರಣೆ ಸೂತ್ರ ಅಥವಾ ಇನ್ನಿತರೆ ಆವಿಷ್ಕಾರ ಉತ್ತೇಜಿಸುವುದಕ್ಕೆ ₹2 ಲಕ್ಷ ಪುರಸ್ಕಾರ ಮೊತ್ತದೊಂದಿಗೆ ಕೆಂಪೇಗೌಡ ಆವಿಷ್ಕಾರ ಪ್ರಶಸ್ತಿ ನೀಡುವುದಾಗಿ ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.*ಶೀ ಟಾಯ್ಲೆಟ್: ಪಾಲಿಕೆ ವ್ಯಾಪ್ತಿಯಲ್ಲಿ ನೈರ್ಮಲ್ಯಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದ್ದು, 160 ಸಾರ್ವಜನಿಕ ಶೌಚಾಲಯಗಳನ್ನು ಉನ್ನತೀಕರಣದ ಜೊತೆಗೆ 204 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. ಜತೆಗೆ 100 ಮಹಿಳೆಯರಿಗಾಗಿಯೇ 100 ಶೀ ಟಾಯ್ಲೆಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಪೌರಕಾರ್ಮಿಕರ ವಿಶ್ರಾಂತಿಗಾಗಿ 50 ಕಡೆ ಶಾಶ್ವತ ವಿಶ್ರಾಂತಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.*ಶ್ರವಣ/ಸಾವಿತ್ರಿ ವಸತಿ ವೃದ್ಧಾಶ್ರಮವಲಯಕ್ಕೆ ಒಂದರಂತೆ ಎಂಟು ವಲಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಲ್ಲಿ ತಲಾ ಒಂದು ಶ್ರವಣ ವಸತಿ ವೃದ್ಧಾಶ್ರಮ ನಿರ್ಮಾಣ ಹಾಗೂ ಅದೇ ರೀತಿ 8 ವಲಯದಲ್ಲಿ ಹೆಣ್ಣು ಮಕ್ಕಳಿಗೆ ಸಾವಿತ್ರಿ ವಸತಿ ನಿಲಯ ಸ್ಥಾಪನೆ ಒಟ್ಟು ₹8 ಕೋಟಿ ಮರು ಘೋಷಣೆ ಮಾಡಲಾಗಿದೆ.