ಸಾರಾಂಶ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೋನದಾಸಪುರದಲ್ಲಿ ಆಯೋಜಿಸಿದ್ದ ‘ಫ್ಲಾಟ್ ಮೇಳ’ಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೂರಕ್ಕೂ ಹೆಚ್ಚು ಜನರು ಮುಂಗಡ ಪಾವತಿಸಿ ಫ್ಲಾಟ್ ಕಾಯ್ದಿರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೋನದಾಸಪುರದಲ್ಲಿ ಆಯೋಜಿಸಿದ್ದ ‘ಫ್ಲಾಟ್ ಮೇಳ’ಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೂರಕ್ಕೂ ಹೆಚ್ಚು ಜನರು ಮುಂಗಡ ಪಾವತಿಸಿ ಫ್ಲಾಟ್ ಕಾಯ್ದಿರಿಸಿದ್ದಾರೆ.ಶನಿವಾರ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನಡೆದ ಫ್ಲಾಟ್ ಮೇಳದಲ್ಲಿ ಸುಮಾರು 700ಕ್ಕೂ ಹೆಚ್ಚು ಸಾರ್ವಜನಿಕರು ಭೇಟಿ ನೀಡಿದ್ದು, 100ಕ್ಕೂ ಅಧಿಕ ಮಂದಿ ಠೇವಣಿ ಮೊತ್ತವನ್ನು ಪಾವತಿಸಿ ಕಾಯ್ದಿರಿಸಿದ್ದಾರೆ. 50 ಹಂಚಿಕೆದಾರರಿಗೆ ಸ್ಥಳದಲ್ಲಿಯೇ ಹಂಚಿಕೆ ಪತ್ರವನ್ನು ಬಿಡಿಎ ವಿತರಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೌತ್ ಇಂಡಿಯನ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರತಿನಿಧಿಗಳು ಸ್ಥಳದಲ್ಲಿ ಹಾಜರಿದ್ದರು. ಬಿಡಿಎ ಅಭಿಯಂತರ ಅಧಿಕಾರಿಯಾದ ಮಲ್ಲಿಕಾರ್ಜುನಸ್ವಾಮಿ, ಮುಖ್ಯ ಲೆಕ್ಕಾಧಿಕಾರಿಯಾದ ಶ್ರೀನಿವಾಸಮೂರ್ತಿ, ಉಪ ಕಾರ್ಯದರ್ಶಿಯವರಾದ ದೇವರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಇಂಬವಳ್ಳಿ, ಅರವಿಂದ್, ಸುನೀಲ್, ಬಸವರೆಡ್ಡಿ ಉಪಸ್ಥಿತರಿದ್ದರು.