ಕನ್ನಡಪ್ರಭ ವಾರ್ತೆ ಅಥಣಿ ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದಲ್ಲಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ವಿಚಾರವಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಹಾಗೂ ಅವರ ಬೆಂಬಲಿಗ ಶ್ರೀಕಾಂತ ಆಲಗೂರ ಸೇರಿದಂತೆ ಇನ್ನಿತರರು ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆನ್ನವರ ಹಲ್ಲೆ ನಡೆಸಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಅವರ ಮನೆಗೆ ತೆರಳಿದಾಗ ಶನಿವಾರ ಘಟನೆ ನಡೆದಿದೆ. ಹಲ್ಲೆಗೆ ಒಳಗಾಗಿರುವ ನಿಂಗಪ್ಪ ಕರೆನ್ನವರ ತಲೆಗೆ ಪೆಟ್ಟಾಗಿದ್ದು, ರಕ್ತಸ್ರಾವದಿಂದ ನರಳುತ್ತಿದ್ದ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಅಥಣಿ

ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದಲ್ಲಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ವಿಚಾರವಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಹಾಗೂ ಅವರ ಬೆಂಬಲಿಗ ಶ್ರೀಕಾಂತ ಆಲಗೂರ ಸೇರಿದಂತೆ ಇನ್ನಿತರರು ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆನ್ನವರ ಹಲ್ಲೆ ನಡೆಸಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಅವರ ಮನೆಗೆ ತೆರಳಿದಾಗ ಶನಿವಾರ ಘಟನೆ ನಡೆದಿದೆ. ಹಲ್ಲೆಗೆ ಒಳಗಾಗಿರುವ ನಿಂಗಪ್ಪ ಕರೆನ್ನವರ ತಲೆಗೆ ಪೆಟ್ಟಾಗಿದ್ದು, ರಕ್ತಸ್ರಾವದಿಂದ ನರಳುತ್ತಿದ್ದ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ನೌಕರರ ಸಂಘದ ವಿಚಾರವಾಗಿ ಚರ್ಚಿಸಲು ಶಾಸಕ ಲಕ್ಷ್ಮಣ ಸವದಿ ಅವರ ಮನೆಗೆ ತೆರಳಿದಾಗ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅವಾಚ್ಯ ನಿಂದಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಸಿಬ್ಬಂದಿ ಬಸವರಾಜ ಕಮತಗಿ ಎಂಬುವರನ್ನು ಅವಾಚ್ಯವಾಗಿ ನಿಂದಿಸುತ್ತಿದ್ದರು. ಅದನ್ನ ನಾನು ಪ್ರಶ್ನೆ ಮಾಡಿದಾಗ ಏಕಾಏಕಿ ಶಾಸಕರು ಅವರ ಪುತ್ರ ಸೇರಿ ೧೫ಕ್ಕೂ ಹೆಚ್ಚು ಜನರಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನೊಂದಿಗೆ ಇದ್ದ ಕೆಲ ೪ ಸಿಬ್ಬಂದಿ ಸಣ್ಣ ಪ್ರಮಾಣದ ಹಲ್ಲೆಯಾಗಿದೆ. ಇತ್ತೀಚೆಗೆ ಅವರ ಅಳಿಯ ಶಂಕರ ನಂದೇಶ್ವರ ಅಥಣಿ ಶಾಖೆಯಿಂದ ಬೆಳಗಾವಿ ಶಾಖೆಗೆ ವರ್ಗಾವಣೆಯಾಗಿದ್ದರು. ಆ ವರ್ಗಾವಣೆ ನಾನೇ ಮಾಡಿಸಿದ್ದೇನೆ ಎಂದು ನನ್ನ ಮೇಲೆ ಸಿಟ್ಟಾಗಿದ್ದರು. ಮತ್ತು ಜಾರಿಕಿಹೊಳಿ ಅವರೊಂದಿಗೆ ನನಗೆ ಒಳ್ಳೆಯ ಸಂಬಂಧವಿದೆ. ನನಗೆ ರಕ್ಷಣೆ ಬೇಕು, ನನ್ನ ಜೀವಕ್ಕೆ ಏನಾದರು ಆದರೆ ಶಾಸಕ ಲಕ್ಷ್ಮಣ ಸವದಿ ಅವರೆ ಕಾರಣ ಎಂದು ಅಥಣಿ ಆಸ್ಪತ್ರೆಯಲ್ಲಿ ಮಾಧ್ಯಮಗಳ ಮುಂದೆ ಹಲ್ಲೆಗೊಳಗಾದ ನಿಂಗಪ್ಪ ಕರೆನ್ನವರ ಆರೋಪಿಸಿದರು.ಸ್ಥಳಕ್ಕೆ ಅಥಣಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೆ ಹಲ್ಲೆ ಮಾಡಿದ ಆರೋಪಿಗಳನ್ನ ಬಂಧಿಸಬೇಕು. ಇಲ್ಲವಾದರೆ, ನಿಂಗಪ್ಪ ಕರೆಣ್ಣವರ ಬೆಂಬಲವಾಗಿ ವಿವಿಧೆಡೆಯ ಡಿಸಿಸಿ ಬ್ಯಾಂಕ್‌ಗಳನ್ನ ಬಂದ್‌ ಮಾಡಿ ಹಲ್ಲೆ ಮಾಡಿದ ಆರೋಪಿಗಳ ಮನೆಯ ಮುಂದೆ ಬ್ಯಾಂಕ್‌ಗಳನ್ನು ಬಂದ್‌ ಮಾಡಿ ಧರಣಿ ಸತ್ಯಾಗ್ರಹ ಮಾಡಲಾಗುವದು ಎಂದು ಎಚ್ಚರಿಸಿದರು.ಪೊಲೀಸ್ ಠಾಣೆಗೆ ಮುತ್ತಿಗೆ:ಬಿಡಿಸಿಸಿ ಬ್ಯಾಂಕ್ ನೌಕರರ ಅಧ್ಯಕ್ಷನ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥಣಿ ಪೊಲೀಸರು ಪ್ರಕರಣ ದಾಖಲಿಸಿದೆ ಇರುವುದನ್ನು ಖಂಡಿಸಿ ಬ್ಯಾಂಕ್ ನೌಕರರ ಸಂಘದ ಸದಸ್ಯರು ಅಥಣಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಲ್ಲೆಗೊಳಗಾಗಿರುವ ವ್ಯಕ್ತಿ ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವರಿಂದ ಮಾಹಿತಿ ಸಂಗ್ರಹಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುವುದಾಗಿ ಭರವಸೆ ನೀಡಿದ ನಂತರ ಬ್ಯಾಂಕ್ ನೌಕರರು ಪ್ರತಿಭಟನೆ ಹಿಂಪಡೆದರು.ಬಾಕ್ಸ್‌ಘಟನೆಗೂ ನಮಗೂ ಸಂಬಂಧವಿಲ್ಲ: ಲಕ್ಷ್ಮಣ ಸವದಿಈ ಘಟನೆಯ ಕುರಿತು ಶಾಸಕ ಲಕ್ಷ್ಮಣ ಸವದಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ್ದು, ಜಿಲ್ಲಾ ಮಧ್ಯವರ್ತಿಗಳ ನೌಕರರ ಸಂಘದಲ್ಲಿ ಸಮಸ್ಯೆ ಇತ್ತು. ಅವರು ಬೆಳಗ್ಗೆ ಚರ್ಚೆ ಮಾಡೋಕೆ ನನ್ನ ಬಳಿಯೇ ಬಂದಿದ್ದರು. ನಮ್ಮ ಸಂಘದಲ್ಲಿ ಕೆಲವು ಸಮಸ್ಯೆಗಳು ಬರುತ್ತಿವೆ, ಅಧ್ಯಕ್ಷರು ನಮಗೆ ಹಣ ಕೊಡಬೇಕೆಂದು ಕೇಳುತ್ತಿದ್ದಾರೆ ಎಂದರು. ಇದಕ್ಕೆ ನಾನು ನಮ್ಮ ಬಳಿ ಇದನ್ನು ಚರ್ಚೆ ಮಾಡಬೇಡಿ ಎಂದು ಹೇಳಿದೆ. ನೀವು ಹೊರಗಡೆ ಹೋಗಿ ಚರ್ಚೆ ಮಾಡುವಂತ ಅವರಿಗೆ ತಿಳಿಸಿದೆ. ಇದು ನಿಮ್ಮ ಸಮಸ್ಯೆ ನೀವೇ ಚರ್ಚೆ ಮಾಡಿ ಬಗೆಹರಿಸಿಕೊಳ್ಳುವಂತೆ ಹೇಳಿದ್ದೇನೆ. ಹೊರಗೆ ಹೋಗುತ್ತಿದ್ದಂತೆ ನಮ್ಮ‌ಬೆಂಬಲಿಗ ಶ್ರೀಕಾಂತ್ ಆಲಗೂರ ನೀವು ಈ ವಿಚಾರವನ್ನು ನಮ್ಮ ಶಾಸಕರ ಬಳಿಗೆ ಯಾಕೆ ತಂದಿರೆಂದು ಪ್ರಶ್ನೆ ಮಾಡಿದ, ಅದಕ್ಕೆ ಅವರು ಅವಾಚ್ಯ ಪದಗಳಿಂದ ಅವನನ್ನು ನಿಂದಿಸಿದರು. ಅವನಿಗೆ ಜಾತಿ ನಿಂದನೆ ಕೂಡ ಮಾಡಿದರು. ಅವರವರಲ್ಲಿ ನೂಕಲಾಟ ಪ್ರಾರಂಭ ಆಯ್ತು, ನೀವು ಜಗಳ ಮಾಡೋದಾದ್ರೆ ನಮ್ಮನೆಯಿಂದ ನಡೆಯಿರಿ ಎಂದು ಕಳಿಸಿದೆ. ಶ್ರೀಕಾಂತ ಅಲ್ಗೂರ ಮತ್ತು ಅವರ ಮಧ್ಯ ನಡೆದ ಜಗಳ ನಮಗೂ ಇದಕ್ಕೂ ಸಂಬಂಧವಿಲ್ಲ. ಯಾರೋ ರಾಜಕೀಯ ಮುಖಂಡರು ಇವರಿಗೆ ಏನು ಹೇಳಿ ಕಳಿಸಿದ್ದಾರೆ, ಅದಕ್ಕೆ ಬಂದು ನಮ್ಮನೆ ಹತ್ರ ದಾಂಧಲೆ ನಡೆಸಿದ್ದಾರೆ, ರಾಜಕಾರಣದಲ್ಲಿ ಇದೆಲ್ಲ ಸ್ವಾಭಾವಿಕ. ಎರಡೂವರೆ ವರ್ಷ ಕಳೆದಿದೆ ಇನ್ನು ಅರ್ಧ ಅವಧಿ ಹಂತದಲ್ಲಿ ನಡೆಯುವುದು ರಾಜಕೀಯದಲ್ಲಿ ಸ್ವಾಭಾವಿಕ. ಇಂಥ ಆರೋಪಗಳನ್ನು ನಾನು ಎದುರಿಸುತ್ತೇನೆ. ಇದರ ಹಿಂದೆ ಸಂಚು ರೂಪಿಸಲಾಗಿದ್ದು, ತನಿಖೆ ನಂತರ ಸತ್ಯಾಂಶ ಹೊರಗೆ ಬರುತ್ತದೆ ಎಂದರು.