ವಿದ್ಯುತ್‌ ಅವಘಡದ ಬಗ್ಗೆ ಇರಲಿ ಎಚ್ಚರಿಕೆ: ಮೆಸ್ಕಾಂ

| Published : May 25 2024, 12:45 AM IST

ಸಾರಾಂಶ

ಮುಂಗಾರು ಅವಧಿಯಲ್ಲಿ ಮಳೆ, ಗಾಳಿ, ಗುಡುಗು, ಮಿಂಚು ಹೆಚ್ಚಾಗಿರುವುದರಿಂದ ಸಾರ್ವಜನಿಕರು ತುಂಡಾಗಿ ಬಿದ್ದಿರುವ ವಿದ್ಯುತ್ ಲೈನ್‌ಗಳನ್ನು ಮುಟ್ಟುವುದಾಗಲಿ, ವಿದ್ಯುತ್ ಕಂಬ ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಮುಟ್ಟುವುದಾಗಲಿ, ಜಾನುವಾರುಗಳನ್ನುವಿದ್ಯುತ್ ಕಂಬಕ್ಕೆ ಕಟ್ಟುವುದಾಗಲೀ, ಬಟ್ಟೆ ಒಣಗಲು ವಿದ್ಯುತ್ ಕಂಪನಿಯ ಸಾಮಗ್ರಿಗಳನ್ನು ಬಳಸಬಾರದು ಎಂದು ಮೆಸ್ಕಾಂ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಮುಂಗಾರು ಅವಧಿಯಲ್ಲಿ ಮಳೆ, ಗಾಳಿ, ಗುಡುಗು, ಮಿಂಚು ಹೆಚ್ಚಾಗಿರುವುದರಿಂದ ಸಾರ್ವಜನಿಕರು ತುಂಡಾಗಿ ಬಿದ್ದಿರುವ ವಿದ್ಯುತ್ ಲೈನ್‌ಗಳನ್ನು ಮುಟ್ಟುವುದಾಗಲಿ, ವಿದ್ಯುತ್ ಕಂಬ ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಮುಟ್ಟುವುದಾಗಲಿ, ಜಾನುವಾರುಗಳನ್ನುವಿದ್ಯುತ್ ಕಂಬಕ್ಕೆ ಕಟ್ಟುವುದಾಗಲೀ, ಬಟ್ಟೆ ಒಣಗಲು ವಿದ್ಯುತ್ ಕಂಪನಿಯ ಸಾಮಗ್ರಿಗಳನ್ನು ಬಳಸಬಾರದು ಎಂದು ಮೆಸ್ಕಾಂ ತಿಳಿಸಿದೆ. ವಿದ್ಯುತ್‌ ಅವಘಡದ ಬಗ್ಗೆ ಮುನ್ಸೂಚನೆ ಕಂಡುಬಂದಲ್ಲಿ ತಕ್ಷಣ ಗ್ರಾಹಕ ಸೇವಾಕೇಂದ್ರದ ಸಂಖ್ಯೆ ‘1912’ಗೆ ದೂರು ದಾಖಲಿಸಬೇಕು. ಹಾಗೆಯೇ ಗ್ರಾಹಕ ಸೇವಾಕೇಂದ್ರದ ವಾಟ್ಸಾಪ್‌ ನಂಬರ್ 9483041912ಗೆ ಸಂದೇಶ ಅಥವಾ ‘ನನ್ನ ಮೆಸ್ಕಾಂ’ ಆ್ಯಪ್‌ ಮುಖಾಂತರ ಮಾಹಿತಿ ನೀಡಬಹುದಾಗಿದೆ.ಮೆಸ್ಕಾಂ ಕುಂದಾಪುರ, ಉಡುಪಿ ಮತ್ತು ಕಾರ್ಕಳ ವಿಭಾಗಗಳ ವ್ಯಾಪ್ತಿಯಲ್ಲಿ ತುರ್ತು ಸಂದರ್ಭಕ್ಕೆ ಸೇವಾಕೇಂದ್ರಗಳನ್ನು ತೆರೆಯಲಾಗಿದ್ದು, ದೂರನ್ನು ದಾಖಲಿಸಿ ಸಮಸ್ಯೆ ಪರಿಹರಿಸ ಬಹುದಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸೇವಾಕೇಂದ್ರದ ದೂರವಾಣಿಸಂಖ್ಯೆ:

ಕುಂದಾಪುರ ವಿಭಾಗ:

ಕುಂದಾಪುರ 08254-230382, 9480833022, ಬೈಂದೂರು 08254-251328, 9480833012, ತಲ್ಲೂರು 08254-238282, 9480880578, ಶಂಕರನಾರಾಯಣ 08254-284280, ಕೋಟ 8277882908, ಕೊಲ್ಲೂರು 08254-258199.ಉಡುಪಿ ವಿಭಾಗ:

ಉಡುಪಿ 0820-2520313, ಮಣಿಪಾಲ 0820-2572168, ಕಾಪು 0820-2551036, ಬ್ರಹ್ಮಾವರ 0820-2561066.ಕಾರ್ಕಳ ವಿಭಾಗ: ಕಾರ್ಕಳ 9480833011, ನಿಟ್ಟೆ 8277882896, ಹೆಬ್ರಿ 9448289631.