ಶ್ರವಣದ ಬಗ್ಗೆ ಜಾಗೃತಿ ವಹಿಸಿ

| Published : Feb 17 2025, 12:35 AM IST

ಸಾರಾಂಶ

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾದ ಶ್ರವಣ ಜಾಗೃತಿ ಮತ್ತು ಸ್ತ್ರೀನಿಂಗ್ ಶಿಬಿರಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಚಾಲನೆ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸಲಹೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸ್ಕ್ರೀನಿಂಗ್ ಪರೀಕ್ಷೆಗಳನ್ನು ಕಾಲಕಾಲಕ್ಕೆ ಮಾಡಿಸಿಕೊಳ್ಳುವುದುರ ಮೂಲಕ ಕಿವಿ ಸಂರಕ್ಷಿಸಿಕೊಳ್ಳುವುದು ಅವಶ್ಯಕ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಹೇಳಿದರು.

ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಒರೆವಾ ಹಿಯರಿಂಗ್ ಸಲ್ಯೂಷನ್ ಸಹಯೋಗದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾದ ಶ್ರವಣ ಜಾಗೃತಿ ಮತ್ತು ಸ್ತ್ರೀನಿಂಗ್ ಶಿಬಿರದಲ್ಲಿ ಅವರು ಮಾತನಾಡಿದರು.

ಪೊಲೀಸರು ತಮ್ಮ ದೈನಂದಿನ ಕರ್ತವ್ಯ ನಿರ್ವಹಣೆ ಸಮಯದಲ್ಲಿ ಶಬ್ದ ಮಾಲಿನ್ಯದಿಂದ ಹೆಚ್ಚು ತೊಂದರೆ ಒಳಗಾಗುತ್ತಿದ್ದಾರೆ. ಶಬ್ದಮಾಲಿನ್ಯ ಇರುವ ಸ್ಥಳದಲ್ಲಿ ಸ್ವಲ್ಪ ಅಂತರ ಇಟ್ಟುಕೊಂಡು ಕರ್ತವ್ಯ ನಿರ್ವಹಿಸುವುದು ಹಾಗೂ ಕಿವಿಯ ಬಳಿ ಮೊಬೈಲ್ ಪೋನ್ ಬಳಕೆ ಕಡಿಮೆ ಮಾಡುವಂತೆ ಸಲಹೆ ನೀಡಿದರು.

ಶ್ರವಣ ಸಂರಕ್ಷಣಾ ಸಂಪನ್ಮೂಲ ವ್ಯಕ್ತಿ ನಿಸಾರ್ ಅಹಮ್ಮದ್ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಶ್ರವಣ ದೋಷ ಪತ್ತೆ ಹಚ್ಚಿಕೊಳ್ಳುವುದು ಒಳಿತು. ಕಿವಿ ಕೇಳದಿರುವ ಸಮಸ್ಯೆ ನಾನಾ ಕಾರಣಗಳಿಂದ ಬರುತ್ತದೆ. ಕಿವಿಯ ಒಳಭಾಗದಲ್ಲಿ ಗಾಯವಾದಾಗ ವಯಸ್ಸಾದಂತೆ ಶ್ರವಣ ಸಂಬಂಧಿತ ಸಮಸ್ಯೆ ಕಂಡು ಬರುತ್ತಿದ್ದು, ಆಗಾಗ್ಗೆ ಶ್ರವಣ ತಪಾಸಣೆ ಮಾಡಿಸಿಕೊಳ್ಳಿ ಎಂದರು. ಇದೇ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಶ್ರವಣ ತಪಾಸಣೆ ಮಾಡಿಸಲಾಯಿತು. ರೆಡ್‍ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಅರುಣ್ ಕುಮಾರ್, ಕಾರ್ಯದರ್ಶಿ ಮಜಹರ್ ಉಲಾ, ನಿರ್ದೇಶಕರಾದ ಡಾ.ಮಧುಸೂದನ್ ರೆಡ್ಡಿ, ಒರಿವಾ ಹಿಯರಿಂಗ್ ಸೆಲ್ಯೂಷನ್ ಬ್ರಾಂಚ್ ಹೆಡ್ ಫಾತಿಮಾ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.