ಸಾಮಾಜಿಕ ಜಾಲತಾಣಗಳ ಬಗ್ಗೆ ಜಾಗೃತಿ ವಹಿಸಿ: ಉಪನ್ಯಾಸಕಿ ವಿಭಚಕ್ರಲಾ

| Published : Jul 31 2024, 01:03 AM IST

ಸಾಮಾಜಿಕ ಜಾಲತಾಣಗಳ ಬಗ್ಗೆ ಜಾಗೃತಿ ವಹಿಸಿ: ಉಪನ್ಯಾಸಕಿ ವಿಭಚಕ್ರಲಾ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಜಾಗೃತಿ ವಹಿಸಬೇಕು. ಸಾಮಾಜಿಕ ಜಾಲತಾಣಗಳ ಹೆಚ್ಚು ಬಳಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಕ್ಷೇತ್ರದ ಒಲವು ಕಡಿಮೆಯಾಗಿದೆ. ಯುವಜನಾಂಗ ಸಾಮಾಜಿಕ ಜಾಲತಾಣ ಹಾಗೂ ದಶ್ಯ ಮಾಧ್ಯಮಗಳ ಮೋಡಿಗೆ ಸಿಲುಕಿ ಪುಸ್ತಕ, ಸಾಹಿತ್ಯ ಓದುವ ಅಭಿರುಚಿಯನ್ನು ಕಳೆದುಕೊಳ್ಳುತ್ತಿದ್ದಾರೆ, ಈ ನಿಟ್ಟಿನಲ್ಲಿ ಯುವಜನಾಂಗ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಸಲಹೆ ನೀಡಿದರು.

ದಾಬಸ್‌ಪೇಟೆ: ಸಾಮಾಜಿಕ ಜಾಲತಾಣಗಳಿಂದ ಸದುಪಯೋಗ ಒಂದು ಕಡೆಯಾದರೆ, ಇನ್ನೊಂದೆಡೆಗೆ ಅದರಿಂದ ತಪ್ಪು ದಾರಿ ಹಿಡಿಯುವ ಸಮಾಜವನ್ನು ನಾವು ನೋಡುತ್ತಿದ್ದು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು ಎಂದು ಉಪನ್ಯಾಸಕಿ ವಿಭಚಕ್ರಲಾ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಶಾಲೆಯಲ್ಲಿ ರೋಟರಿ ತುಮಕೂರು, ಬೆಂಗಳೂರು ನಾರ್ಥ್ ವೆಸ್ಟ್ ರೋಟರಿ, ಇನ್ನರ್ ವೀಲ್ ಕ್ಲಬ್ ಆಫ್ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಟರಿಣಾಮದ ಬಗ್ಗೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಜಾಗೃತಿ ವಹಿಸಬೇಕು. ಸಾಮಾಜಿಕ ಜಾಲತಾಣಗಳ ಹೆಚ್ಚು ಬಳಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಕ್ಷೇತ್ರದ ಒಲವು ಕಡಿಮೆಯಾಗಿದೆ. ಯುವಜನಾಂಗ ಸಾಮಾಜಿಕ ಜಾಲತಾಣ ಹಾಗೂ ದಶ್ಯ ಮಾಧ್ಯಮಗಳ ಮೋಡಿಗೆ ಸಿಲುಕಿ ಪುಸ್ತಕ, ಸಾಹಿತ್ಯ ಓದುವ ಅಭಿರುಚಿಯನ್ನು ಕಳೆದುಕೊಳ್ಳುತ್ತಿದ್ದಾರೆ, ಈ ನಿಟ್ಟಿನಲ್ಲಿ ಯುವಜನಾಂಗ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಸಲಹೆ ನೀಡಿದರು.

ತುಮಕೂರು ರೋಟರಿ ಸೆಂಟ್ರಲ್ ಅಧ್ಯಕ್ಷೆ ಸರೋಜಮ್ಮ ಮಾತನಾಡಿದರು.

ತುಮಕೂರು ರೋಟರಿ ಕಾರ್ಯದರ್ಶಿ ಹೇಮಲತಾ, ಮುಖ್ಯಶಿಕ್ಷಕ ಚಿಕ್ಕಣ್ಣ ಸೇರಿ ಶಿಕ್ಷಕರು, ವಿದ್ಯಾರ್ಥಿಗಳು, ರೋಟರಿ ಪಧಾಧಿಕಾರಿಗಳು ಉಪಸ್ಥಿತರಿದ್ದರು.