ವ್ಯಕ್ತಿಯ ವೈಯಕ್ತಿಕ ಮಾಹಿತಿ ಕದಿಯುವುದು, ಹಣದ ವಂಚನೆ ಅಥವಾ ಆನ್‌ಲೈನ್ ಮೂಲಕ ಕಿರುಕುಳ ನೀಡುವುದನ್ನು ಒಳಗೊಂಡಿದೆ.

ಸಿರುಗುಪ್ಪ: ಕಂಪ್ಯೂಟರ್, ಮೊಬೈಲ್ ಅಥವಾ ಇಂಟರ್ನೆಟ್ ಸಂಪರ್ಕವನ್ನು ಬಳಸಿಕೊಂಡು ಮಾಡುವ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಸೈಬರ್ ಅಪರಾಧವಾಗುತ್ತದೆ ಎಂದು ನಗರದ ಹೊನ್ನೂರಮ್ಮಎಂ ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ನರೇಶ್ ತಿಳಿಸಿದರು.

ನಗರದ ಡ್ರೈವರ್ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತೆಕ್ಕಲಕೋಟೆ ಎಂ. ಸಿದ್ದಪ್ಪ ಹೊನ್ನೂರಮ್ಮ ಎಂ ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಎ ಮತ್ತು ಬಿ ಘಟಕಗಳಿಂದ ಹಮ್ಮಿಕೊಂಡಿದ್ದ ವಿಶೇಷ ವಾರ್ಷಿಕ ಶಿಬಿರದಲ್ಲಿ ಸೈಬರ್ ಕ್ರೈಂ ಮತ್ತು ಸೈಬರ್ ಕ್ರೈಮ್ ತಡೆಯುವ ಬಗ್ಗೆ ಉಪನ್ಯಾಸ ನೀಡಿದರು.

ವ್ಯಕ್ತಿಯ ವೈಯಕ್ತಿಕ ಮಾಹಿತಿ ಕದಿಯುವುದು, ಹಣದ ವಂಚನೆ ಅಥವಾ ಆನ್‌ಲೈನ್ ಮೂಲಕ ಕಿರುಕುಳ ನೀಡುವುದನ್ನು ಒಳಗೊಂಡಿದೆ. ಜಾಗತೀಕರಣದ ಪ್ರಭಾವದಿಂದ ಸಾರ್ವಜನಿಕರು ತಂತ್ರಜ್ಞಾನದ ಬಳಕೆ ಮಾಡುವುದು ಹೆಚ್ಚಾಗಿದೆ. ಡಿಜಿಟಲ್ ಲೋಕದಲ್ಲಿ ಒಂದು ಕ್ಷಣ ಅಜಾಗ್ರತೆಯಿಂದ ಮೈಮರೆತರೆ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಸೈಬರ್ ಜಾಗೃತಿ ಮೂಲಕ ನಮ್ಮ ಭದ್ರತೆಯನ್ನು ನಾವೇ ಕಾಪಾಡಿಕೊಳ್ಳಬೇಕಾಗಿದೆ. ನಾವು ಯಾವುದೇ ಕಾರಣಕ್ಕೆ ವೈಯಕ್ತಿಕ ಮಾಹಿತಿಗಳನ್ನ ಅಪರಿಚಿತರಿಗೆ ಹಂಚಿಕೊಳ್ಳಬಾರದು. ಒಟಿಪಿ ಸಂಖ್ಯೆಯನ್ನು ಸಹಿತ ಹೇಳಬಾರದು. ಯಾವುದೇ ಬ್ಯಾಂಕುಗಳು ಕರೆ ಮಾಡಿ ಒಟಿಪಿ ಸಂಖ್ಯೆ ಕೇಳುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೆ ಅನ್ಯ ಪ್ರದೇಶಗಳಲ್ಲಿ ಅಪರಿಚಿತ ಪ್ರದೇಶಗಳಲ್ಲಿ ವೈಫೈಗಳನ್ನು ಬಳಸಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಚಾರ್ಜಿಂಗ್ ಸಹಿತ ಇಡಬಾರದು. ಇದರಿಂದ ಕೆಲವೊಮ್ಮೆ ನಿಮ್ಮ ಮೊಬೈಲ್ ಗಳಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗಿ ನಿಮಗೆ ಆತಂಕ ತರುವ ಸಂದರ್ಭ ಸೃಷ್ಟಿಯಾಗಬಹುದು. ಸೈಬರ್ ಕ್ರೈಂ ಬಗ್ಗೆ ಜಾಗೃತರಾಗಿ ಇರಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಉಪನ್ಯಾಸಕ ರಾಮಣ್ಣ ಪೂಜಾರಿ ವಹಿಸಿಕೊಂಡಿದ್ದರು. ಶಿಬಿರ ಅಧಿಕಾರಿಗಳಾದ ಡಾ. ಕೆ.ಎಂ ಚಂದ್ರಕಾಂತ್, ಬಕಾಡೆ ಪಂಪಾಪತಿ, ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರಾರ್ಥಿಗಳು ಪ್ರಾಥಮಿಕ ಶಾಲೆಯ ಆವರಣದ ಸ್ವಚ್ಛತೆಯನ್ನು ನೆರವೇರಿಸಿದರು.

ಸಿರುಗುಪ್ಪ ನಗರದ ಡ್ರೈವರ್ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ಸೈಬರ್ ಕ್ರೈಮ್ ತಡೆಯುವ ಬಗ್ಗೆ ಉಪನ್ಯಾಸಕ ನರೇಶ್ ಉಪನ್ಯಾಸ ನೀಡಿದರು.