ಸಾರಾಂಶ
ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸುವುದರಿಂದ ಹಕ್ಕಿಜ್ವರ ರೋಗ ಬರುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅವೈಜ್ಞಾನಿಕ ಮಾಹಿತಿಗೆ ಯಾರೂ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
- ಅಂಗಡಿ, ಫಾರಂ ಕಾರ್ಮಿಕರು ನಂಜುನಾಶಕ ದ್ರಾವಣ ಬಳಸಲು ಸಲಹೆ- - - ದಾವಣಗೆರೆ: ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸುವುದರಿಂದ ಹಕ್ಕಿಜ್ವರ ರೋಗ ಬರುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅವೈಜ್ಞಾನಿಕ ಮಾಹಿತಿಗೆ ಯಾರೂ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಕೋಳಿ ಫಾರಂ ಹಾಗೂ ಮಾಂಸದ ಕೋಳಿ ಅಥವಾ ಮೊಟ್ಟೆ ಕೋಳಿ ಫಾರಂ ಹಾಗೂ ಕೋಳಿ ಅಂಗಡಿ ಸುತ್ತಮುತ್ತ ಕಚ್ಚಾ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಸುತ್ತಮುತ್ತ ಸೋಂಕು ನಿವಾರಕಗಳೊಂದಿಗೆ ಆಗಾಗ ಸ್ವಚ್ಛಗೊಳಿಸಬೇಕು. ಕೋಳಿತ್ಯಾಜ್ಯವನ್ನು ಆಗಿಂದಾಗ್ಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರಬೇಕು ಎಂದಿದ್ದಾರೆ.ಕೋಳಿ ಫಾರಂಗಳಲ್ಲಿ ಕೆಲಸ ಮಾಡುತ್ತಿರುವವರ ಆರೋಗ್ಯದ ಬಗ್ಗೆ ನಿಗಾವಹಿಸಿ, ಬಟ್ಟೆ, ಶೂ, ಕೈ- ಕಾಲುಗಳಿಗೆ ನಂಜುನಾಶಕ ದ್ರಾವಣ ಕಡ್ಡಾಯವಾಗಿ ಬಳಸಬೇಕು. ಕಾರ್ಮಿಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಪಿಪಿಇ ಕಿಟ್‌ಗಳನ್ನು ಧರಿಸುವಂತೆ ಕ್ರಮ ವಹಿಸಬೇಕು. ಕೋಳಿ ಶೀತಜ್ವರ ಕಂಡುಬಂದ ಜಿಲ್ಲೆಗಳಿಂದ ಯಾವುದೆ ಕೋಳಿ, ಕೋಳಿ ಉತ್ಪನ್ನಗಳನ್ನು ಖರೀದಸಬಾರದು ಎಂದು ಸೂಚಿಸಿದ್ದಾರೆ.
ಅಡಕೆ ಬೆಳೆಗಾರರು ಸದ್ಯಕ್ಕೆ ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಕೋಳಿ ಗೊಬ್ಬರ ಖರೀದಿಸಿ ಸಾಗಾಣೆ ಮಾಡಬಾರದು. ಕೋಳಿ ಫಾರಂ, ಇತರೆ ಪಕ್ಷಿಗಳು ಹಾಗೂ ಕೋಳಿ ಉತ್ಪನ್ನಗಳೊಂದಿಗೆ ಸಂಪರ್ಕದಲ್ಲಿ ಇರುವವರು ಮಾಸ್ಕ್ ಮತ್ತು ಗ್ಲೌಸ್‌ಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು. ಆರೋಗ್ಯವಂತ ಕೋಳಿ, ಶಂಕಾಸ್ಪದವಾಗಿ ಮರಣ ಹೊಂದಿದ ಪಕ್ಷಿಗಳು ಗಮನಕ್ಕೆ ಬಂದ ತಕ್ಷಣವೇ ಸಂಬಂಧಿಸಿದ ಇಲಾಖೆಯ ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದ್ದಾರೆ.- - - --6ಕೆಡಿವಿಜಿ43.ಜೆಪಿಜಿ: ಜಿ.ಎಂ.ಗಂಗಾಧರ ಸ್ವಾಮಿ