- ಶಾಸಕ ಬಿ.ಪಿ.ಹರೀಶ್ ಸಲಹೆ । ವಿವಿಧ ಚಟುವಟಿಕೆಗಳ ಸಮಾರೋಪ
- - -ಕನ್ನಡಪ್ರಭ ವಾರ್ತೆ ಹರಿಹರ
ಆಧುನಿಕ ಯುಗದಲ್ಲಿ ಯುವಜನತೆಯಲ್ಲಿ ಡಿಜಿಟಲ್ ಜ್ಞಾನ ಆವರಿಸುತ್ತಿದ್ದು, ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳದ ತಂತ್ರಜ್ಞಾನ ವಿದ್ಯಾರ್ಥಿಗಳಲ್ಲಿನ ಕ್ರಿಯಾಶೀಲತೆ ಕುಗ್ಗಿಸುತ್ತಿದೆ ಎಂದು ಶಾಸಕ ಬಿ.ಪಿ ಹರೀಶ್ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2025-26ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್., ಸ್ಕೌಟ್ ಮತ್ತು ಗೈಡ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ಶಿಕ್ಷಣ ಪಡೆದರೆ, ವಿದ್ಯಾರ್ಥಿಗಳಿಗೆ ಲಾಭ. ಆ ಹಿನ್ನೆಲೆಯಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುಲು ಪ್ರಯತ್ನಿಸಲು ಸಲಹೆ ನೀಡಿದರು.
ದಾವಣಗೆರೆಯ ವಿನ್ನರ್ಸ್ ಸಮೂಹ ಸಂಸ್ಥೆ ಸಂಸ್ಥಾಪಕ ಡಾ.ಶಿವರಾಜ್ ಕಬ್ಬೂರ್ ಮಾತನಾಡಿ, ಪದವಿಮಟ್ಟದ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಪ್ರತಿಭೆಗಳು ಅರಳಲು, ಬೆಳವಣಿಗೆ ಹೊಂದಲು ಮತ್ತು ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಇದೆ. ಶ್ರದ್ಧೆ, ನಿಷ್ಠೆ, ತಾಳ್ಮೆ, ಬದ್ಧತೆ ಹಾಗೂ ಸಂಯಮ ಸಾಧನೆಗೆ ರಹದಾರಿಯಾಗಿವೆ ಎಂದರು.
ಪ್ರಾಂಶುಪಾಲ ಡಾ.ರಮೇಶ್ ಎಂ.ಎನ್. ಅಧ್ಯಕ್ಷತೆ ವಹಿಸಿ ಮಾತನಾಡಿದರು. 2024-25 ನೇ ಶೈಕ್ಷಣಿಕ ಸಾಲಿನಲ್ಲಿ 10ನೆಯ ರ‍್ಯಾಂಕ್ ಗಳಿಸಿದ ಬಿಎಸ್ಸಿ ವಿದ್ಯಾರ್ಥಿನಿ ಮಾನಸ ಉತ್ತಿಗಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾಲೇಜಿನ 2 ವರ್ಷದ ವಾರ್ಷಿಕ ವರದಿಯನ್ನು ಶಾಸಕ ಬಿ.ಪಿ. ಹರೀಶ್ ಬಿಡುಗಡೆ ಮಾಡಿದರು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೂ ಗೌರವಿಸಲಾಯಿತು.
ದೈಹಿಕ ಶಿಕ್ಷಣ ನಿರ್ದೇಶಕ ಡಾ.ಚಂದ್ರಶೇಖರ್ ಸಿ., ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಯೋಗೇಶ್ ಕೆ.ಜೆ., ಯುವ ರೆಡ್ ಕ್ರಾಸ್‌ನ ಸಂಚಾಲಕ ಡಾ.ಗಂಗರಾಜು ಎಸ್., ಸ್ಕೌಟ್ಸ್ ಅಂಡ್ ಗೈಡ್ಸ್ ರೇಂಜರ್ಸ್‌ಗಳಾದ ಡಾ. ಜಿ.ಎನ್. ದಾಕ್ಷಾಯಿಣಿ, ಡಾ.ಗೌರಮ್ಮ.ಎಸ್.ಎಂ, ರೋವರ್ಸ್ ಲೀಡರ್ ಮನೋಹರ ಕೆ.ಎಸ್., ಐ.ಕ್ಯೂ.ಎಸ್.ಸಿ. ಸಹ ಸಂಯೋಜಕ ಅಬ್ದುಲ್ ಬಷೀರ್, ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ವೀರೇಶ್ ಅಜ್ಜಣ್ಣವರ್, ಶಶಿನಾಯ್ಕ ಉಪಸ್ಥಿತರಿದ್ದರು.ಬಿ.ಎ. ವಿದ್ಯಾರ್ಥಿನಿ ಅರ್ಪಿತಾ ಪ್ರಾರ್ಥಿಸಿ, ಬಿ.ಕಾಂ. ವಿದ್ಯಾರ್ಥಿನಿ ಆಶ್ಲೇಷ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕ ಹಾಗೂ ಐ.ಕ್ಯೂ.ಎಸ್.ಸಿ ಸಂಯೋಜಕ ಡಾ. ಎಚ್.ಪಿ. ಅನಂತನಾಗ್ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ತಿಪ್ಪೇಸ್ವಾಮಿ ಎಚ್. ಪ್ರಾಸ್ತಾವಿವಾಗಿ ಮಾತನಾಡಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವೆಂಕಪ್ಪನವರ ಬಸವರಾಜ್ ಅತಿಥಿಗಳನ್ನು ಪರಿಚಯಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಹನುಮಂತಪ್ಪ ವೈ. ಕಾರ್ಯಕ್ರಮ ನಿರ್ವಹಿಸಿದರು.
- - --19HRR.01 -1a:
ಸಮಾರಂಭವನ್ನು ಶಾಸಕ ಬಿ.ಪಿ. ಹರೀಶ್ ಉದ್ಘಾಟಿಸಿದರು.