ಕರಡಿ ದಾಳಿ: ರೈತನಿಗೆ ಗಾಯ

| Published : Jul 30 2024, 01:35 AM IST

ಸಾರಾಂಶ

ಖಾನಾಪುರ ತಾಲೂಕಿನ ದೇವರಾಯಿ ಗ್ರಾಮದ ಬಳಿ ಸೋಮವಾರ ಸಂಜೆ ದನ ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಕರಡಿ ದಾಳಿಗೆ ವೃದ್ಧ ರೈತನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲ್ಲೂಕಿನ ದೇವರಾಯಿ ಗ್ರಾಮದ ಬಳಿ ಸೋಮವಾರ ಸಂಜೆ ದನ ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಕರಡಿ ದಾಳಿಗೆ ವೃದ್ಧ ರೈತನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ನಾರಾಯಣ ಚೌರಿ (65) ಗಾಯಗೊಂಡವರು. ಹಿಂದಿನಿಂದ ದಾಳಿ ನಡೆಸಿದ ಕರಡಿ ಬೆನ್ನು ಮತ್ತು ಮೈಮೇಲೆ ಪರಚಿ ಗಾಯಗೊಳಿಸಿದೆ. ನಾಗರಗಾಳಿ ಅರಣ್ಯ ವ್ಯಾಪ್ತಿಯ ದೇವರಾಯಿ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ನಾರಾಯಣ ಅವರ ಚೀರಾಟ ಕೇಳಿದ ಗ್ರಾಮದ ಜನರು ಬರುತ್ತಿರುವುದನ್ನು ಗಮನಿಸಿದ ಕರಡಿ ಬಿಟ್ಟು ಅರಣ್ಯದಲ್ಲಿ ಮರೆಯಾಗಿದೆ. ಗಾಯಗೊಂಡ ನಾರಾಯಣ ಅವರನ್ನು ಗ್ರಾಮಸ್ಥರು ನಂದಗಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಮಾಹಿತಿ ಪಡೆದ ಎ.ಸಿ.ಎಫ್ ಸುನೀತಾ ನಿಂಬರಗಿ ಮತ್ತು ಆರ್.ಎಫ್.ಒ ನಾಗರಾಜ ಬಾಳೆಹೊಸೂರ ನಂದಗಡ ಆಸ್ಪತ್ರೆಗೆ ಭೇಟಿ ನೀಡಿ, ಮುಂದಿನ ಚಿಕಿತ್ಸೆಗಾಗಿ ನಾರಾಯಣ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.