ಸಾರಾಂಶ
ವಾಯು ವಿಹಾರ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಅಗ್ಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದರಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಎಂಬುವವರು ಕರಡಿ ದಾಳಿಗೆ ಒಳಗಾದ ವ್ಯಕ್ತಿ. ಗಾಯಾಳುವನ್ನು ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಗ್ಗುಂದ, ಸಿದ್ದರಹಳ್ಳಿ, ಶಂಕರನಹಳ್ಳಿ, ಬೊಮ್ಮೇನಹಳ್ಳಿ,ಕಾರೆಹಳ್ಳಿ ಈ ಭಾಗಗಳಲ್ಲಿ ಕರಡಿ ದಾಳಿ ಹೆಚ್ಚಾಗಿದೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ವಾಯು ವಿಹಾರ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಅಗ್ಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದರಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಎಂಬುವವರು ಕರಡಿ ದಾಳಿಗೆ ಒಳಗಾದ ವ್ಯಕ್ತಿ. ಎಂದಿನಂತೆ ಇವರು ಬೆಳಗ್ಗೆ 6:30 ಸಮಯದಲ್ಲಿ ವಾಕಿಂಗ್ ಮಾಡುವಾಗ ಗ್ರಾಮದ ಸಮೀಪದಲ್ಲಿ ಕರಡಿ ದಾಳಿ ಮಾಡಿದೆ. ಗಾಯಾಳುವನ್ನು ತಕ್ಷಣವೇ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಗ್ಗುಂದ, ಸಿದ್ದರಹಳ್ಳಿ, ಶಂಕರನಹಳ್ಳಿ, ಬೊಮ್ಮೇನಹಳ್ಳಿ,ಕಾರೆಹಳ್ಳಿ ಈ ಭಾಗಗಳಲ್ಲಿ ಕರಡಿ ದಾಳಿ ಹೆಚ್ಚಾಗಿದ್ದು ರೈತರು ತಮ್ಮ ಜಮೀನು, ತೋಟಗಳಲ್ಲಿ ಕೃಷಿ ಚಟುವಟಿಕೆ ಮಾಡಲು ಭಯದ ವಾತಾವರಣ ಇದೆ ಎಂದು ಗ್ರಾಮಸ್ಥರು ಆತಂಕ ಹೊರಹಾಕಿದ್ದಾರೆ.