ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸ್ಥಾಪಿಸಿರುವ ಖ್ಯಾತ ಬ್ಯೂಟೀಶಿಯನ್ ಉಮಾ ಜಯಕುಮಾರ್ (ವನ್ ಮಿನಿಟ್ ಉಮಾ) ಇವರಿಂದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ವಿಶೇಷ ಬ್ಯೂಟೀಶಿಯನ್ ಕಾರ್ಯಾಗಾರ
ಬೆಳ್ತಂಗಡಿ: ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸ್ಥಾಪಿಸಿರುವ ಖ್ಯಾತ ಬ್ಯೂಟೀಶಿಯನ್ ಉಮಾ ಜಯಕುಮಾರ್ (ವನ್ ಮಿನಿಟ್ ಉಮಾ) ಇವರಿಂದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ವಿಶೇಷ ಬ್ಯೂಟೀಶಿಯನ್ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಎನ್. ಜನಾರ್ದನ್ ಉದ್ಘಾಟಿಸಿದರು. ರುಡ್ ಸೆಟ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಉಪನ್ಯಾಸಕಿ ಮಾಧವಿ ರೈ ಉಪಸ್ಥಿತರಿದ್ದರು. ರುಡ್ ಸೆಟ್ ಸಂಸ್ಥೆಯ ಕೇಂದ್ರ ಕಚೇರಿಯ ಹಿರಿಯ ಉಪನ್ಯಾಸಕಿ ಅನಸೂಯಾ, ಉಪನ್ಯಾಸಕರಾದ ಲೋಹಿತ್ ಜೈನ್ ಮತ್ತಿತರರಿದ್ದರು.ಆಸಂಸ್ಥೆಯ ನಿರ್ದೇಶಕ ಅಜೇಯ ಸರ್ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ನಿರೂಪಿಸಿದರು. ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ವಂದಿಸಿದರು.