- ಬೇಡಗಂಪಣ ಸಮುದಾಯದಿಂದ ಪ್ರಾರ್ಥನೆ, ಸೇವೆ
--ಕನ್ನಡಪ್ರಭ ವಾರ್ತೆ ಹನೂರು
ಬೇಡಗಂಪಣ ಸಮುದಾಯದಿಂದ ಬೇಡರ ಕಣ್ಣಪ್ಪ ಜಯಂತಿ ಆಚರಣೆ, ಮಾದಪ್ಪನಿಗೆ ಮಹಾರುದ್ರಾಭಿಷೇಕ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿತು.ಮಲೆ ಮಹದೇಶ್ವರ ಬೆಟ್ಟದಲ್ಲಿ ಬೇಡಗಂಪಣ ಸಮುದಾಯದಿಂದ ಮಾದಪ್ಪನಿಗೆ ಬೇಡರ ಕಣ್ಣಪ್ಪ ಜಯಂತಿ ಆಚರಣೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಬುಡಕಟ್ಟು ಸಮುದಾಯದಂತೆ ಧಾರ್ಮಿಕವಾಗಿ ನಡೆಸಲಾಯಿತು. ಸಾಲೂರು ಬೃಹನ್ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನಿಧ್ಯದಲ್ಲಿ ಸಮುದಾಯದ ಅರ್ಚಕರು ಹಾಗೂ ಮುಖಂಡರುಗಳ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು.
ವಿಶೇಷ ಸ್ಥಾನಮಾನಕ್ಕಾಗಿ ಪೂಜೆ:
ಬುಡಕಟ್ಟು ಸಮುದಾಯದ ಬೇಡಗಂಪಣರ ಸಮುದಾಯವನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಂಡು ಅವರಿಗೆ ಸವಲತ್ತು ನೀಡಲು ಗಮನಹರಿಸಿ ಹಾಗೂ ಮಲೆ ಮಾಹದೇಶ್ವರ ಬೆಟ್ಟದ ಸುತ್ತ ವಾಸಿಸುವ ಬೇಡಗಂಪಣರ ಸಮುದಾಯದವರೇ ಹೆಚ್ಚಾಗಿರುವುದರಿಂದ ಮಳೆ ಬೆಳೆ ಆಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದ ಬೇಡಗಂಪಣರ ಹಿರಿಯ ಮುಖಂಡ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟಣ್ಣ ಬೇಡರ ಕಣ್ಣಪ್ಪ, ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಮುಖಂಡರಾದ ಮುರುಗೇಶ್, ಪುಟ್ಟಸ್ವಾಮಿ, ಕೆ.ವಿ. ಮಾದೇಶ್, ಪಾರುಪಾತ್ತೆಗಾರ ಮಹದೇವಸ್ವಾಮಿ, ಹಿರಿಯ ಅರ್ಚಕರ ತಂಡ ಸೇರಿದಂತೆ ವಿವಿಧ ಗ್ರಾಮದ ಮುಖಂಡರುಗಳು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
---