16ರವರೆಗೆ ಬೀರಲಿಂಗೇಶ್ವರ, ಕಾಡಸಿದ್ದೇಶ್ವರ ಜಾತ್ರೆ

| Published : Apr 15 2024, 01:16 AM IST

ಸಾರಾಂಶ

ಮುದ್ದೇಬಿಹಾಳ: ತಾಲೂಕಿನ ಕಿಲಾರಹಟ್ಟಿ ಗ್ರಾಮದಲ್ಲಿ ಏ.೧೪ರಿಂದ ೧೬ರವರೆಗೆ ಭೀರಲಿಂಗೇಶ್ವರ ಹಾಗೂ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ಜರುಗಲಿದೆ ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು

ಮುದ್ದೇಬಿಹಾಳ: ತಾಲೂಕಿನ ಕಿಲಾರಹಟ್ಟಿ ಗ್ರಾಮದಲ್ಲಿ ಏ.೧೪ರಿಂದ ೧೬ರವರೆಗೆ ಭೀರಲಿಂಗೇಶ್ವರ ಹಾಗೂ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ಜರುಗಲಿದೆ ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಗಾದ ಹಬ್ಬದ ನಿಮಿತ್ತ ಭೀರಲಿಂಗೇಶ್ವರ ಹಾಗೂ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ. ೧೫ ರಂದು ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ, ರಾತ್ರಿ ೧೦ ಗಂಟೆಗೆ ವೀರೇಶ್ವರ ನಾಟ್ಯ ಸಂಘ ನಾಲತವಾಡ ಇವರಿಂದ ಹಳ್ಳಿ ಹುಡುಗಿ ಮೊಸರ ಗಡಿಗಿ ಎಂಬ ನಾಟಕ ಪ್ರದರ್ಶನ, ೧೬ರಂದು ರಸಪ್ರಶ್ನೆ ಕಾರ್ಯಕ್ರಮ, ತೇರಬಡಿ ಸ್ಪರ್ಧೆ, ೨ ಹಲ್ಲಿನ ಟಗರಿನ ಕಾಳಗ, ೪ ಹಲ್ಲಿನ ಟಗರಿನ ಕಾಳಗ ನಡೆಯಲಿವೆ ಎಂದು ಮಾಹಿತಿ ನೀಡಿದರು.