ಸಾರಾಂಶ
ಧರ್ಮ ಕೇಳಿ ಸಿಂದೂರ ಅಳಿಸಿದ ಕೀಚಕರಿಗೆ ಆಪರೇಷನ್ ಸಿಂದೂರ ಹೆಸರಿನಲ್ಲಿ ಪ್ರಧಾನಿ ಮೋದಿಜಿ ತಕ್ಕ ಪಾಠ ಕಲಿಸುತ್ತಿದ್ದಾರೆ. ಇಂಥ ಶ್ರೇಷ್ಠ ಕಾರ್ಯದಲ್ಲಿ ಸರ್ವ ತ್ಯಾಗಕ್ಕೂ ಸಿದ್ಧರಾಗಿ ಸೇವೆಗೈಯುತ್ತಿರುವ ನಮ್ಮ ಪ್ರತಿಯೊಬ್ಬ ಸೈನಿಕರ ಜೊತೆ ಭಾರತದ 140 ಕೋಟಿ ಜನರಿದ್ದಾರೆ ಎಂದು ವಿಜಯಲಕ್ಷ್ಮಿ ಕುಳ್ಳೊಳ್ಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಧರ್ಮ ಕೇಳಿ ಸಿಂದೂರ ಅಳಿಸಿದ ಕೀಚಕರಿಗೆ ಆಪರೇಷನ್ ಸಿಂದೂರ ಹೆಸರಿನಲ್ಲಿ ಪ್ರಧಾನಿ ಮೋದಿಜಿ ತಕ್ಕ ಪಾಠ ಕಲಿಸುತ್ತಿದ್ದಾರೆ. ಇಂಥ ಶ್ರೇಷ್ಠ ಕಾರ್ಯದಲ್ಲಿ ಸರ್ವ ತ್ಯಾಗಕ್ಕೂ ಸಿದ್ಧರಾಗಿ ಸೇವೆಗೈಯುತ್ತಿರುವ ನಮ್ಮ ಪ್ರತಿಯೊಬ್ಬ ಸೈನಿಕರ ಜೊತೆ ಭಾರತದ 140 ಕೋಟಿ ಜನರಿದ್ದಾರೆ ಎಂದು ವಿಜಯಲಕ್ಷ್ಮಿ ಕುಳ್ಳೊಳ್ಳಿ ಹೇಳಿದರು.ಸ್ಥಳೀಯ ಎಪಿಎಂಸಿಯ ಆವರಣದಲ್ಲಿ ತರಬೇತುದಾರ ಅಶೋಕ ಪವಾರ ನೇತೃತ್ವದಲ್ಲಿ ದಿ. ಡ್ರೀಮ್ ಡ್ಯಾನ್ಸ್ ಆಂಡ್ ಫಿಟ್ನೆಸ್ ಅಕಾಡೆಮಿಯಲ್ಲಿ ಪಾಪಿ ಪಾಕಿಸ್ತಾನದ ವಿರುದ್ಧ ಹೋರಾಡುತ್ತಿರುವ ನಮ್ಮ ಸೈನಿಕರಿಗೆ ವಿಜಯ ಒಲಿಯಲಿ ಎಂದು ನಿತ್ಯ ಪೂಜೆ ಸಲ್ಲಿಸಲಾಗುತ್ತಿದ್ದು, ಪೂಜೆ ಬಳಿಕ ಮಾತನಾಡಿದ ಅವರು, ಮಹಿಳಾ ಸೇನಾಧಿಕಾರಿಗಳಿಂದ ಪತ್ರಿಕಾಗೋಷ್ಠಿ ನಡೆಸಿ ಭಾರತೀಯ ಮಹಿಳೆ ದೈವ ಸ್ವರೂಪಿಣಿ, ಅವಳಿಗೆ ಕಂಟಕ ತರುವುದು ವಿನಾಶದ ದಾರಿಯಾಗುತ್ತದೆ ಎಂಬ ಸಂದೇಶವನ್ನು ಜಗತ್ತಿಗೆ ಸಾರುವ ಮೂಲಕ ಪಾಪಿ ಪಾಕಿಸ್ತಾನದ ದುಷ್ಕೃತ್ಯವನ್ನು ವಿಶ್ವದೆದುರು ಬಯಲು ಮಾಡಿ ಭಾರತದ ಶೌರ್ಯ, ಪರಾಕ್ರಮ, ಸಂಸ್ಕೃತಿ, ಸಂಸ್ಕಾರದ ಕೀರ್ತಿ ಪತಾಕೆ ಜಗದಲ್ಲೆಡೆ ಹಾರಿಸುತ್ತಿರುವ ಈ ಕ್ಷಣ ಪ್ರತಿಯೊಬ್ಬ ಭಾರತೀಯನಿಗೂ ಅವಿಸ್ಮರಣೀಯ ಘಳಿಗೆ ಎಂದರು.
ಡಾ.ಮೀನಾಕ್ಷಿ ಹುಬ್ಬಳ್ಳಿ, ಡಾ.ಸುರೇಖಾ ಚನ್ನಾಳ, ಸವಿತಾ ಕಲ್ಯಾಣಿ, ಸುಶೀಲಾ ಹೆಗ್ಗಳಗಿ, ರೇಖಾ ಚೆನ್ನಾಳ, ಅಕ್ಷತಾ ಹಿಟ್ಟಿನಮಠ, ಸಂಜನಾ ಹಿಟ್ಟಿನಮಠ, ದೀಪ್ತಿ ಪಾಶ್ಚಾಪುರ, ಸುಚೇತಾ ಅವರಾದಿ ಇತರರಿದ್ದರು.