ಬೆಳಕೆ ವ್ಯವಸಾಯ ಸಹಕಾರಿ ಸಂಘಕ್ಕೆ ₹82.35 ಲಕ್ಷ ಲಾಭ: ಮಾದೇವ ನಾಯ್ಕ

| Published : Sep 29 2025, 03:02 AM IST

ಬೆಳಕೆ ವ್ಯವಸಾಯ ಸಹಕಾರಿ ಸಂಘಕ್ಕೆ ₹82.35 ಲಕ್ಷ ಲಾಭ: ಮಾದೇವ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಬೆಳಕೆಯ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ೭೩ನೇ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ಮಾದೇವ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.

ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷರ ಮಾಹಿತಿಕನ್ನಡಪ್ರಭ ವಾರ್ತೆ ಭಟ್ಕಳತಾಲೂಕಿನ ಬೆಳಕೆಯ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ೭೩ನೇ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ಮಾದೇವ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಶೇರುದಾರರನ್ನುದ್ದೇಶಿಸಿ ಮಾತನಾಡಿದ ಅವರು, ಸಂಘವು ಪೈಪೋಟಿ ಮಧ್ಯೆಯೂ ಉತ್ತಮ ವ್ಯವಹಾರ ನಡೆಸಿ ೨೦೨೪-೨೫ನೇ ಸಾಲಿನಲ್ಲಿ ₹೮೨.೩೫ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.

೨೦೨೪-೨೫ನೇ ಸಾಲಿನ ಅಂತ್ಯಕ್ಕೆ ಸಂಘವು ಒಟ್ಟೂ ೮,೩೮೫ ಸದಸ್ಯರನ್ನು ಹೊಂದಿದ್ದು, ಸಂಘದ ಶೇರು ಬಂಡವಾಳ ₹೬ ಕೋಟಿ ೪ ಲಕ್ಷ, ಸಂಘದ ಕಾಯ್ದಿಟ್ಟ ನಿಧಿ ಹಾಗೂ ಇತರ ನಿಧಿಗಳು ಸೇರಿ ₹೧೧ ಕೋಟಿ ೬೬ ಲಕ್ಷ ಇದೆ. ಠೇವಣಿ ಸಂಗ್ರಹಣೆ ₹೭೪ ಕೋಟಿ ೬೯ ಲಕ್ಷದಷ್ಟಿರುತ್ತದೆ. ಸಂಘದ ಸದಸ್ಯರಿಂದ ಬರತಕ್ಕ ಹೊರ ಬಾಕಿ ಸಾಲ ₹೧೦೦ ಕೋಟಿ ೮೬ ಲಕ್ಷ ಇರುತ್ತದೆ. ಸಂಘದ ದುಡಿಯುವ ಬಂಡವಾಳ ₹೧೧೦ ಕೋಟಿ ೨ ಲಕ್ಷ ಇರುತ್ತದೆ ಎಂದ ಅವರು, ಸಂಘವು ೨೦೫ ಸ್ವ-ಸಹಾಯ ಸಂಘಗಳನ್ನು ಹೊಂದಿದ್ದು, ಅವುಗಳಿಂದ ₹೫೪.೦೭

ಲಕ್ಷದಷ್ಟು ಠೇವಣಿ ಸಂಗ್ರಹಿಸಿದೆ ಮತ್ತು ಪ್ರಸಕ್ತ ವರ್ಷದಲ್ಲಿ ₹೮೩ ಲಕ್ಷ ಸಾಲ ವಿತರಿಸಿದ್ದು, ವರ್ಷಾಂತ್ಯಕ್ಕೆ ೪೫ ಸ್ವಸಹಾಯ ಸಂಘಗಳಿಂದ ₹೧ ಕೋಟಿ ೫೭ ಲಕ್ಷದಷ್ಟು ಸಾಲ ಬರತಕ್ಕ ಹೊರಬಾಕಿ ಇರುತ್ತದೆ ಎಂದು

ತಿಳಿಸಿದರು.

ಸಭೆಯಲ್ಲಿ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸಂಘದ ಕಾರ್ಯಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಉಪಾಧ್ಯಕ್ಷ ಪಾಂಡು ಗೋವಿಂದ ನಾಯ್ಕ, ನಿರ್ದೇಶಕರಾದ ಲಕ್ಷ್ಮೀನಾರಾಯಣ ನಾಯ್ಕ, ನಾಗೇಶ ಡಿ. ನಾಯ್ಕ, ದಾಮೋದರ ನಾಯ್ಕ, ಲೋಕೇಶ ನಾಯ್ಕ, ರವಿರಾಜ ಜೈನ್, ಮಂಜು ಮೊಗೇರ, ಭಾಸ್ಕರ ನಾರಾಯಣ ಗೊಂಡ, ಲಲಿತಾ ನಾಯ್ಕ, ಶಾರದಾ ನಾಯ್ಕ, ಭಾರತಿ ರವಿ ನಾಯ್ಕ ಮೊದಲಾದವರಿದ್ದರು. ಸಂಘದ ಮುಖ್ಯ

ಕಾರ್ಯನಿರ್ವಾಹಕ ಅಣ್ಣಪ್ಪ ಎನ್. ನಾಯ್ಕ ಸ್ವಾಗತಿಸಿ, ವರದಿ ಮಂಡಿಸಿದರು. ಶಾಖಾ ವ್ಯವಸ್ಥಾಪಕ ನಾಗೇಶ ನಾಯ್ಕ ವಂದಿಸಿದರು.