ಸಾರಾಂಶ
believe on government hospitals
ಕನ್ನಡಪ್ರಭ ವಾರ್ತೆ ಹಿರಿಯೂರು:
ಸರ್ಕಾರ ಸಾವಿರಾರು ಕೋಟಿ ರು. ಜನರ ಆರೋಗ್ಯ ರಕ್ಷಣೆಗೆ ವ್ಯಯ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.ಕೆಆರ್ ಹಳ್ಳಿ ಗ್ರಾಮದಲ್ಲಿ ಜವಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಆಯುಷ್ಮಾನ್ ಆರೋಗ್ಯ ಮಂದಿರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಸಕಲ ಆರೋಗ್ಯದ ಸೌಲಭ್ಯಗಳನ್ನು ಒದಗಿಸುತ್ತಿದ್ದರೂ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ಹೆಚ್ಚುತ್ತಿವೆ. ಜನರಲ್ಲಿ ಸರ್ಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಗುಣಮಟ್ಟದ್ದಾಗಿರುತ್ತದೆ ಎಂಬ ಭಾವನೆ ಇದೆ. ಈ ಭಾವನೆ ಹೋಗಲಾಡಿಸಬೇಕು ಎಂದರು.ಸರ್ಕಾರಿ ಆಸ್ಪತ್ರೆಗಳತ್ತ ಜನರು ಒಲವು ತೋರುವಂತಹ ವಾತಾವರಣ ಸೃಷ್ಟಿಸಬೇಕಿದೆ. ಹೆದ್ದಾರಿಗೆ ಹತ್ತಿರವಿರುವ ಊರಲ್ಲಿ ಈ ಆರೋಗ್ಯ ಮಂದಿರ ಉದ್ಘಾಟನೆಯಾಗಿದ್ದು ಅನುಕೂಲವಾಗಲಿದೆ. ಈಗಾಗಲೇ 25 ಕೋಟಿ ವೆಚ್ಚದ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ತಾಯಿ ಮಕ್ಕಳ ಆಸ್ಪತ್ರೆಯನ್ನು ಅಲ್ಲಿಗೆ ವರ್ಗಾಯಿಸುವ ಯೋಜನೆ ಇದೆ. ಸಿಬ್ಬಂದಿಗೆ ಅಲ್ಲಿಯೇ ವಸತಿ ಗೃಹ ನಿರ್ಮಿಸಿಕೊಡಲು ಆರೋಗ್ಯ ಸಚಿವರ ಜೊತೆ ಚರ್ಚಿಸಲಾಗಿದೆ. ಹಾಗಾಗಿ, ಆರೋಗ್ಯಕ್ಕೆ ಸಂಬಂಧಪಟ್ಟ ಸೌಲಭ್ಯ ಒದಗಿಸಿಕೊಡಲು ಸರ್ಕಾರ ಸದಾ ಸಿದ್ದವಿದೆ ಎಂದರು.
ಗ್ರಾ.ಪಂ ಅಧ್ಯಕ್ಷ ಸುರೇಶ್, ಮುಖಂಡರಾದ ಮೂರ್ತಿ, ವೆಂಕಟೇಶ್ ಹಾಗೂ ವೈದ್ಯರು, ಆಶಾ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.-----
ಫೋಟೊ: 1,2ಕೆಆರ್ ಹಳ್ಳಿ ಗ್ರಾಮದಲ್ಲಿ ಜವಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆಯುಷ್ಮಾನ್ ಆರೋಗ್ಯ ಮಂದಿರದ ನೂತನ ಕಟ್ಟಡವನ್ನು ಸಚಿವ ಡಿ. ಸುಧಾಕರ್ ಉದ್ಘಾಟಿಸಿದರು.
-----