ಸಾರಾಂಶ
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ಮುಧೋಳ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ಮುಧೋಳ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದರು.ಮುಧೋಳ ಬಳಿ ಹರಿದಿರುವ ಘಟಪ್ರಭ ನದಿಗೆ ನಿರ್ಮಿಸಲಾದ ಸೇತುವೆಗೆ ಭೇಟಿ ನೀಡಿ ತುಂಬಿ ಹರಿಯುತ್ತಿರುವ ನದಿಯನ್ನು ವೀಕ್ಷಿಸಿದರಲ್ಲದೇ ನದಿ ದಂಡೆಯ ಹೊಲಗದ್ದೆಗಳು ಜಲಾವೃತವಾಗಿರುವದನ್ನು ನೋಡಿ ಪ್ರವಾಹದಿಂದಾಗಿ ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರ ಒತ್ತಾಯಿಸಿದರು.
ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ಬಿಜೆಪಿ ಯುವ ಧುರೀಣ ಅರುಣ ಗೋವಿಂದ ಕಾರಜೋಳ, ರಾಜು (ನಾರಾಯಣ) ಯಡಹಳ್ಳಿ, ನಾಗಪ್ಪ ಅಂಬಿ ಸೇರಿದಂತೆ ಇತರರು ಇದ್ದರು.