ಕಡೂರುಎರಡನೆ ಅವಧಿಗೆ ರಾಜ್ಯ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಮಾಜಿ ಶಾಸಕ ಬೆಳ್ಳಿಪ್ರಕಾಶ್‌ ಅವರನ್ನು ಪಟ್ಟಣದ ಹಿಂದೂ ಮಹಾಗಣಪತಿ ಭೋವಿ ಕಾಲೋನಿ ಯುವಕರು ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ಎರಡನೆ ಅವಧಿಗೆ ರಾಜ್ಯ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಮಾಜಿ ಶಾಸಕ ಬೆಳ್ಳಿಪ್ರಕಾಶ್‌ ಅವರನ್ನು ಪಟ್ಟಣದ ಹಿಂದೂ ಮಹಾಗಣಪತಿ ಭೋವಿ ಕಾಲೋನಿ ಯುವಕರು ಸನ್ಮಾನಿಸಿದರು. ಪಟ್ಟಣದಲ್ಲಿರುವ ಬೆಳ್ಳಿಪ್ರಕಾಶ್ ಅವರ ನಿವಾಸದಲ್ಲಿ ಯುವಕರ ತಂಡ, ಪುರಸಭೆ ಸದಸ್ಯರು, ಕೊರಮ ಸಮಾಜದ ಅಧ್ಯಕ್ಷರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ಮುಖಂಡ ಕಡೂರು ಎ.ಮಣಿ ಮಾತನಾಡಿ, ಬೆಳ್ಳಿಪ್ರಕಾಶ್ ಅವರು ಶಾಸಕರಾಗಿ ಕಡೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕಾರ್ಯ ಮಾಡಿದ್ದು, ಜೊತೆಗೆ ರಾಜ್ಯ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಮತ್ತೊಮ್ಮೆ ಜಿಲ್ಲಾ ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಅವಿರೋಧ ಆಯ್ಕೆಗೊಂಡು ರಾಜ್ಯ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿ ಪುನರಾಯ್ಕೆಯಾಗಿರುವುದು ಸಂತಸ ತಂದಿದೆ. ಗ್ರಾಮೀಣ ಭಾಗದ ರೈತರ ಬೆನ್ನೆಲುಬಾದ ಅವರ ಸಂಕಷ್ಟ ಅರಿತು ಸಹಕಾರ ಕ್ಷೇತ್ರದ ಸಮಸ್ಯೆ ಬಗೆಹರಿಸಲಿದ್ದಾರೆ ಎಂದರು. ಕೊರಮ ಸಮಾಜದ ಕಡೂರು ತಾಲೂಕು ಅಧ್ಯಕ್ಷ ಗಿರೀಶ್ ಮಾತನಾಡಿ. ಕ್ಷೇತ್ರದಲ್ಲಿ ಸಣ್ಣ ಸಮುದಾಯ ಗುರುತಿಸಿ ಅವರ ಶ್ರೇಯೋಭಿವೃದ್ದಿಗೆ ಸಹಾಯ ಮಾಡಿರುವುದು ಅನೇಕ ಸಮಾಜದವರು ಬೆಳ್ಳಿ ಪ್ರಕಾಶ್ ಅವರನ್ನು ಸ್ಮರಿಸುತ್ತಾರೆ. ಇವರ ಸೇವೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರಿಗೆ ಅವಶ್ಯಕತೆ ಇದ್ದು ಅವರ ಪರವಾಗಿ ಯುವಕರು ಎಂದಿಗೂ ಇರುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಗೋವಿಂದರಾಜ್, ಮೋಹನ್‌ಕುಮಾರ್, ಭೋವಿ ಸಮಾಜದ ಮುಖಂಡರಾದ ಜಯಕುಮಾರ್, ಪ್ರಶಾಂತ್, ಕಾರ್ತೀಕ್, ದೀಕ್ಷಿ, ಸಂತೋಷ್ ಮತ್ತಿತರರು ಇದ್ದರು. 3ಕೆಕೆಡಿಯು2.ಕಡೂರಿನ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅವರು ರಾಜ್ಯ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿ ಪುನರಾಯ್ಕೆಯಾದ್ದರಿಂದ ಕಡೂರು ಪಟ್ಟಣದ ವಿವಿದ ಸಂಘಟನೆಗಳ ಮತ್ತು ಸಮಾಜದ ಯುವಕರು ಬೆಳ್ಳಿಪ್ರಕಾಶ್ ಅವರನ್ನು ಸನ್ಮಾನಿಸಿದರು.