ಸಾರಾಂಶ
ನಾಡಿನಲ್ಲಿ ಮಣ್ಣಿನ ಹರಕೆಗೆ ಪ್ರಖ್ಯಾತ ಕ್ಷೇತ್ರವಾದ ನಡ ಗ್ರಾಮದ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಸಂಭ್ರಮ,
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ನಾಡಿನಲ್ಲಿ ಮಣ್ಣಿನ ಹರಕೆಗೆ ಪ್ರಖ್ಯಾತ ಕ್ಷೇತ್ರವಾದ ನಡ ಗ್ರಾಮದ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ವೇದಮೂರ್ತಿ ಶ್ರೀನಿವಾಸ ಹೊಳ್ಳ ತಂತ್ರಿ ಹಾಗೂ ಅರ್ಚಕ ಅನಂತರಾಮ ಮಯ್ಯ ಅವರ ನೇತೃತ್ವದಲ್ಲಿ ದರ್ಶನ ಬಲಿ, ಉತ್ಸವ, ಮಹಾಪೂಜೆ, ಪುಷ್ಪರಥೋತ್ಸವ, ನಿತ್ಯ ಬಲಿ, ಉತ್ಸವ, ಕೆರೆಕಟ್ಟೆ ಪೂಜೆ, ಭೂತಬಲಿ, ಶಯನೋತ್ಸವ ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.ಸುರ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸುರ್ಯಗುತ್ತು ಮತ್ತು ಕುಟುಂಬಸ್ಥರು, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಧನಂಜಯ ಅಜ್ರಿ ನಡಗುತ್ತು, ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ರಾಜಶೇಖರ ಅಜ್ರಿ,ಬಿ.ಮುನಿರಾಜ ಅಜ್ರಿ ಮೊದಲಾದವರು ಉಪಸ್ಥಿತರಿದ್ದರು.ಇಂದು ಧ್ವಜಾವರೋಹಣ: ಮಾ.23ರಂದು ಶನಿವಾರ ಬೆಳಗ್ಗೆ ಕವಾಟೋದ್ಘಾಟನೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ,ಅನ್ನ ಸಂತರ್ಪಣೆ, ಸಂಜೆ 6ರಿಂದ ಯಾತ್ರಾಹೋಮ, ಅವಭೃತ ಸ್ನಾನಕ್ಕೆ ಹೊರಡುವುದು, ರಾತ್ರಿ 10.30ಕ್ಕೆ ಧ್ವಜಾವರೋಹಣ ಹಾಗೂ 11 ಗಂಟೆಗೆ ದೈವಗಳ ನೇಮ ಜರುಗಲಿದೆ,