ಸಾರಾಂಶ
ಬೆಂಗಳೂರು ಅಂತಾರಾಷ್ಟ್ರೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್ಸ್ ಟೂರ್ನಿ ‘ಬಿ’ ವಿಭಾಗದಲ್ಲಿ ತಮಿಳುನಾಡಿನ ಸೆಲ್ವಮುರುಗನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಬೆಂಗಳೂರು: ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್ಸ್ ಟೂರ್ನಿ ‘ಬಿ’ ವಿಭಾಗದಲ್ಲಿ ತಮಿಳುನಾಡಿನ ಸೆಲ್ವಮುರುಗನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪುದುಚೇರಿದ ಮಾದೇಶ್ ಕುಮಾರ್ ದ್ವಿತೀಯ, ತಮಿಳುನಾಡಿದ ಜೈದಂಬರೀಶ್ ತೃತೀಯ ಸ್ಥಾನ ಗಿಟ್ಟಿಸಿಕೊಂಡರು. ಟೂರ್ನಿ 3 ವಿಭಾಗಗಳಲ್ಲಿ ನಡೆಯುತ್ತಿದ್ದು, ‘ಎ’ ಮತ್ತು ‘ಸಿ’ ವಿಭಾಗದ ಸ್ಪರ್ಧೆಗಳು ಜ.26ಕ್ಕೆ ಕೊನೆಗೊಳ್ಳಲಿದೆ.