ಸಾರಾಂಶ
ಡಿ.೧ರಂದು ನಡೆಯುವ ಪುಸ್ತಕ ಹಬ್ಬದ ಸಮಾರೋಪ ಸಮಾರಂಭದಲ್ಲಿ ಪುರಸ್ಕಾರ ಗೌರವ ಪ್ರದಾನ ಮಾಡಲಾಗುತ್ತದೆ. ರಾಷ್ಟ್ರೋತ್ತಾನ ಪರಿಷತ್‌ನ ಅಧ್ಯಕ್ಷ ಎಂ.ಪಿ. ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಮನೋವೈದ್ಯ ಸಿ.ಆರ್. ಚಂದ್ರಶೇಖರ್ ಅತಿಥಿಯಾಗಿ ಭಾಗವಹಿಸುವರು.
ಕನ್ನಡಪ್ರಭ ವಾರ್ತೆ ಪುತ್ತೂರು
ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ನ.೨೬ರಿಂದ ಡಿ.೧ರ ತನಕ ನಡೆಯುವ ‘ಕನ್ನಡ ಪುಸ್ತಕ ಹಬ್ಬ’ದ ವಿಶೇಷ ಗೌರವ ಪುರಸ್ಕಾರಕ್ಕೆ ಪುತ್ತೂರಿನ ಸಾಹಿತ್ಯ ಪರಿಚಾರಕ ‘ಜ್ಞಾನಗಂಗಾ ಪುಸ್ತಕ ಮಳಿಗೆ’ಯ ಪ್ರಕಾಶ್ ಕುಮಾರ್ ಕೊಡೆಂಕಿರಿ ಆಯ್ಕೆಯಾಗಿದ್ದಾರೆ.ಡಿ.೧ರಂದು ನಡೆಯುವ ಪುಸ್ತಕ ಹಬ್ಬದ ಸಮಾರೋಪ ಸಮಾರಂಭದಲ್ಲಿ ಪುರಸ್ಕಾರ ಗೌರವ ಪ್ರದಾನ ಮಾಡಲಾಗುತ್ತದೆ. ರಾಷ್ಟ್ರೋತ್ತಾನ ಪರಿಷತ್‌ನ ಅಧ್ಯಕ್ಷ ಎಂ.ಪಿ. ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಮನೋವೈದ್ಯ ಸಿ.ಆರ್. ಚಂದ್ರಶೇಖರ್ ಅತಿಥಿಯಾಗಿ ಭಾಗವಹಿಸುವರು.
ಪ್ರಕಾಶ್ ಕುಮಾರ್ ಕೊಡೆಂಕಿರಿ: ತಮ್ಮ ಮೂಲಕ ಸದಭಿರುಚಿಯ ಪುಸ್ತಕಗಳನ್ನು ಓದುಗರ ಕೈಗೆ ನೀಡಿದವರು. ‘ಭೀಷ್ಮಾರ್ಜುನ, ಸುಭದ್ರಾರ್ಜುನ, ಕುಮಾರವಿಜಯ’ ಯಕ್ಷಗಾನ ಪ್ರಸಂಗಗಳು; ರಾಮರಾಜ್ಯದ ರೂವಾರಿ, ಸಾಮಗ ಪಡಿದನಿ, ಕಡಂಬಿಲ ಅಡುಗೆ, ಶಿಕ್ಷಣ ನೋಟ, ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳು, ಬಣ್ಣದ ಬದುಕಿನ ಸ್ವಗತ, ಸಾವಿರಾರು ಗಾದೆಗಳು, ಅನ್ನದ ಮರ, ಮಣ್ಣಿಗೆ ಮಾನ, ಕಥಾಕಿರಣ, ಚಿಂತನಗಾಥಾ ಸೇರಿದಂತೆ ಮೊದಲಾದ ಅರವತ್ತಕ್ಕೂ ಕೃತಿಗಳಿಗೂ ಮಿಕ್ಕಿ ಪುಸ್ತಕಗಳನ್ನು ಪ್ರಕಾಶಿಸಿದ್ದಾರೆ. ರಸಋಷಿ ದೇರಾಜೆ ಸೀತಾರಾಮಯ್ಯನರ ‘ದೇರಾಜೆ ಭಾರತ’ ಹಾಗೂ ‘ದೇರಾಜೆ ರಾಮಾಯಣ’ ಪುಸ್ತಕಗಳನ್ನು ಪ್ರಕಾಶನ ಮಾಡಿದ್ದಾರೆ. ದಿ. ಬೋಳಂತಕೋಡಿ ಈಶ್ವರ ಭಟ್ಟರ ‘ಶೋಭಾ ಪುಸ್ತಕ ಭಂಡಾರ’ದಲ್ಲಿ ಸಹಾಯಕನಾಗಿದ್ದ ಪ್ರಕಾಶ್ ಕೊಡಂಕಿರಿ ಅವರು ಬಳಿಕ ಶಾಲೆ, ಮನೆ, ಸಮಾರಂಭಗಳಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಡೆಸುತ್ತಿದ್ದರು.