ಸಾರಾಂಶ
‘ನಮ್ಮ ಬೆಂಗಳೂರು ನಮ್ಮ ಕೊಡುಗೆ’ ಯೋಜನೆಯಡಿ ನಗರದ ಉದ್ಯಾನವನ, ರಸ್ತೆ ವಿಭಜಕ, ವೃತ್ತ ಹಾಗೂ ಐಲ್ಯಾಂಡ್ ನಿರ್ವಹಣೆ ಮತ್ತು ಅಭಿವೃದ್ಧಿ ಮಾಡಲು 33 ಸಂಸ್ಥೆ ಮುಂದೆ ಬಂದಿವೆ.
ಬೆಂಗಳೂರು : ‘ನಮ್ಮ ಬೆಂಗಳೂರು ನಮ್ಮ ಕೊಡುಗೆ’ ಯೋಜನೆಯಡಿ ನಗರದ ಉದ್ಯಾನವನ, ರಸ್ತೆ ವಿಭಜಕ, ವೃತ್ತ ಹಾಗೂ ಐಲ್ಯಾಂಡ್ ನಿರ್ವಹಣೆ ಮತ್ತು ಅಭಿವೃದ್ಧಿ ಮಾಡಲು 33 ಸಂಸ್ಥೆ ಮುಂದೆ ಬಂದಿವೆ.
ಬಿಬಿಎಂಪಿಯ ತೋಟಗಾರಿಕೆ ವಿಭಾಗದಿಂದ ನಿರ್ವಹಣೆ ಮಾಡಲಾಗುತ್ತಿದ್ದು ರಸ್ತೆ ವಿಭಜಕ, ಉದ್ಯಾನವನ, ವೃತ್ತ ಹಾಗೂ ಐಲ್ಯಾಂಡ್‌ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆ ಮತ್ತು ಅಭಿವೃದ್ಧಿ ಪಡಿಸುವುದಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು.
ಅದರಂತೆ ನಗರದ ಒಟ್ಟು 33 ಸಂಘ ಸಂಸ್ಥೆಗಳು ಹಾಗೂ ವಿವಿಧ ಕಂಪನಿಗಳು ಅಭಿವೃದ್ಧಿ ಮತ್ತು ನಿರ್ವಹಣೆಗೆ ಮುಂದೆ ಬಂದಿವೆ. ಕೆಲವು ಸಂಸ್ಥೆಗಳು ಒಂದೊಂದು ರಸ್ತೆ ಮತ್ತು ಜಂಕ್ಷನ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಆಸಕ್ತಿ ವ್ಯಕ್ತಪಡಿಸಿದರೆ, ಮತ್ತೆ ಕೆಲವು ಸಂಸ್ಥೆಗಳು ಹಲವು ರಸ್ತೆ, ವೃತ್ತ, ಐಲ್ಯಾಂಡ್ ನಿರ್ವಹಣೆ ಮತ್ತು ಅಭಿವೃದ್ಧಿ ಆಸಕ್ತಿ ವ್ಯಕ್ತಪಡಿಸಿದ್ದು, ಬಿಬಿಎಂಪಿ ಈ ಸಂಘ-ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ತೀರ್ಮಾನಿಸಿದೆ.
ನಿರ್ವಹಣೆ ಮತ್ತು ಅಭಿವೃದ್ಧಿಗೆ ಮುಂದೆ ಬಂದಿರುವ ಸಂಘ ಸಂಸ್ಥೆಗಳಿಗೆ ಬಿಬಿಎಂಪಿಯು, ಅನುಮತಿ ಹಸ್ತಾಂತರಿಸಬಾರದು,ಭದ್ರತಾ ಸಿಬ್ಬಂದಿ ನಿಯೋಜಿಸಬೇಕು, ಕುಂದು ಕೊರತೆ ಹಾಗೂ ದೂರುಗಳಿಗೆ ತಕ್ಷಣ ಪರಿಹಾರ ಮಾಡಬೇಕು, 11 ತಿಂಗಳ ನಿರ್ವಹಣೆಗೆ ಅವಕಾಶ ನೀಡಲಾಗುತ್ತಿದೆ ಹೀಗೆ ಒಟ್ಟು ಒಟ್ಟು 14 ಷರತ್ತುಗಳನ್ನು ಬಿಬಿಎಂಪಿ ವಿಧಿಸಿದೆ.