ಬೆಂಗಳೂರು : ಬೊಮ್ಮನಹಳ್ಳಿ ವಲಯದಲ್ಲಿ24 ಗಂಟೆಯೂ ರಸ್ತೆ ಗುಂಡಿ ಮುಚ್ಚುವ ಕಾರ್ಯಾಚರಣೆ

| Published : Sep 17 2024, 07:34 AM IST

patholes

ಸಾರಾಂಶ

ಬೊಮ್ಮನಹಳ್ಳಿ ವಲಯದಲ್ಲಿ ದಿನದ 24 ಗಂಟೆಯೂ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದ್ದು, ಜೆಪಿ ನಗರದಲ್ಲಿ ಸೋಮವಾರ ಗುಂಡಿ ಮುಚ್ಚಲಾಗಿದೆ.  

ಬೆಂಗಳೂರು :  ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಿ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲಾಗುತ್ತಿದ್ದು, ಸೋಮವಾರ ಜೆಪಿ ನಗರ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿನ ಗುಂಡಿ ಮುಚ್ಚಲಾಗಿದೆ ಎಂದು ವಲಯ ಆಯುಕ್ತೆ ರಮ್ಯಾ ತಿಳಿಸಿದರು.

ಜೆಪಿ ನಗರದ ನಂದಿನಿ ಹೋಟೆಲ್‌ ಬಳಿಯ ರಸ್ತೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿ ಮಾತನಾಡಿದ ಅವರು, ಉಪಮುಖ್ಯಮಂತ್ರಿಗಳ ಆದೇಶದಂತೆ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಹಗಲು ಮತ್ತು ರಾತ್ರಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುತ್ತಿದೆ. ವಲಯ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆ ಗುಂಡಿಯನ್ನು ಮುಚ್ಚಲಾಗಿದೆ. ಮುಂದಿನ ಕೆಲ ದಿನಗಳಲ್ಲಿ ವಲಯವನ್ನು ರಸ್ತೆ ಗುಂಡಿ ಮುಕ್ತವಾಗಿಸಲಾಗುವುದು ಎಂದರು.

ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ 1,775.67 ಕಿಮೀ ವಾರ್ಡ್‌ ರಸ್ತೆಗಳಿದ್ದು, 134.7 ಕಿಮೀ ಉದ್ದದ ಪ್ರಮುಖ ರಸ್ತೆಗಳಿವೆ. ಒಟ್ಟು 1,910 ಕಿಮೀ ಉದ್ದದ ರಸ್ತೆಗಳಿದ್ದು, ಗುಂಡಿಗಳನ್ನು ಪತ್ತೆ ಮಾಡಿ ಮುಚ್ಚಲಾಗುತ್ತಿದೆ ಎಂದು ಹೇಳಿದರು.