ವೈದ್ಯಕೀಯ ಸೇವೆಗೆ ಜಯದೇವ ಆಸ್ಪತ್ರೆ ಮಾದರಿ

| N/A | Published : Jul 01 2025, 01:26 PM IST

Jayadeva Hospital

ಸಾರಾಂಶ

ಡಾ. ಬಿದನ್‌ಚಂದ್ರ ರಾಯ್ ಅವರ ಜನ್ಮದಿನ ಮತ್ತು ಮರಣಿಸಿದ ದಿನದ ಸ್ಮರಣಾರ್ಥವಾಗಿ ಜು. 1ರಂದು ಡಾಕ್ಟರ್ ಡೇಯನ್ನು ಆಚರಿಸಲಾಗುತ್ತಿದೆ.  

ಕೆ.ಎಸ್.ರವೀಂದ್ರನಾಥ್

ಡಾ. ಬಿದನ್‌ಚಂದ್ರ ರಾಯ್ ಅವರ ಜನ್ಮದಿನ ಮತ್ತು ಮರಣಿಸಿದ ದಿನದ ಸ್ಮರಣಾರ್ಥವಾಗಿ ಜು. 1ರಂದು ಡಾಕ್ಟರ್ ಡೇಯನ್ನು ಆಚರಿಸಲಾಗುತ್ತಿದೆ. ಅವರು ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ದ ವೈದ್ಯರು ಹಾಗೂ ಮುಖ್ಯ ಮಂತ್ರಿಯಾಗಿದ್ದರು. ಕಾರ್ಡಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಸ್ಥಾಪಕರು ಕೂಡ ಆಗಿದ್ದರು. 

ದೇಶಕ್ಕೆ ಆರೋಗ್ಯ ವೃತ್ತಿಪರರ ಕ್ಷೇತ್ರದಲ್ಲಿ ಇವರ ಕೊಡುಗೆ ಅಪಾರ. ಇದರ ಪ್ರತಿಫಲವಾಗಿ ಈ ದಿನವನ್ನು ದೇಶದ್ಯಾಂತ ಡಾಕ್ಟರ್ ಡೇ ಯನ್ನು ಅರ್ಥಗರ್ಭಿತವಾಗಿ ಆಚರಿಸಲಾಗುತ್ತಿದೆ. ದೇಶವು ಅನೇಕ ಬಗೆಯ ಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳ ಉಲ್ಬಣಗೊಳ್ಳುತ್ತಾ ಇರುತ್ತದೆ ಇದರ ವಿರುದ್ಧ ಸವಾಲುಗಳನ್ನೊಡ್ಡಿ ವೈದ್ಯರು ಮಾಡುವ ಕಾರ್ಯ ಅದ್ಭುತವೇ ಸರಿ. ಕೋವಿಡ್-19 ನಂತಹ ಸಾಂಕ್ರಾಮಿಕ ರೋಗವು ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಪದೇ ಪದೇ ಪರೀಕ್ಷಿಸುತ್ತನೇ ಇದೆ.

ಇದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಿನ ಯುಗ ಆಗಿ ಪರಿಣಮಿಸಿತ್ತು. ಭಾರತದಂತಹ ಬೃಹತ್ ದೇಶದಲ್ಲಿ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವುದು ಆಸ್ಪತ್ರೆಗಳಲ್ಲಿನ ವೈದ್ಯರು ತಮ್ಮ ಜೀವವನ್ನು ಪಣಕ್ಕಿಟ್ಟು ನಿರ್ವಹಿಸಬಹುದಾದ ನಿಜವಾದ ಕೆಲಸವಾಗಿತ್ತು. ವೈದ್ಯರು ಕೂಡ ನಮ್ಮ ರಕ್ಷಣೆಯ ಕಾರ್ಯದಲ್ಲಿ ಯೋಧರಂತೆ ಕೆಲಸ ಮಾಡಿ, ಕೋವಿಡ್ ಸಮಯದಲ್ಲಿ ಅನೇಕ ಜೀವಗಳು ವೈದ್ಯರ ಸಾಂತ್ವನದ ಆರೈಕೆಯಿಂದ ಬದುಕುಳಿದ ನಿದರ್ಶನಗಳಿವೆ. ರೋಗಿಗಳ ಆರೈಕೆಯಿಂದ ಜೊತೆಗೆ ಸೋಂಕಿನಿಂದ ಅನೇಕ ಸಮರ್ಪಿತ ವೈದ್ಯ ಯೋಧರನ್ನೂ ಕಳೆದುಕೊಂಡಿದ್ದೇವೆ. ಯಶಸ್ವಿ ಆರೋಗ್ಯ ರಕ್ಷಣಾ ವೃತ್ತಿಪರತೆಯನ್ನು ಹೊಂದಲು ವೈದ್ಯರು ನಿರಂತರ ವೈದ್ಯಕೀಯ ಶಿಕ್ಷಣದ ಜ್ಞಾನವನ್ನು ಹೊಂದಲೇಬೇಕಾಗುತ್ತದೆ ಮತ್ತು ಇತ್ತೀಚಿನ ಪ್ರಗತಿಗಳಿಗೆ ತಕ್ಕಂತೆ ಕಲಿಕೆ ಜ್ಞಾನವನ್ನು ಮುಂದುವರಿಸುತ್ತಲೇ ಇರಬೇಕಾಗುತ್ತದೆ.

ಬಿಡುವಿಲ್ಲದ ಯೋಧರಂತೆ ವೈದ್ಯರು ಈ ಕ್ಷೇತ್ರದಲ್ಲಿ ಜ್ಞಾನ ಸಂಪಾದನೆ ಸಂಶೋಧನೆ ಮಾಡುತ್ತಲೇ ಇರಬೇಕಾಗುತ್ತದೆ. ಜಯದೇವ ಆಸ್ಪತ್ರೆಯಂತಹ ಆರೋಗ್ಯ ರಕ್ಷಣಾ ಸಂಸ್ಥೆಗಳು ಭವಿಷ್ಯದಲ್ಲಿ ವೈದ್ಯಕೀಯ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಇಲ್ಲಿ ಬಡ ರೋಗಿಗಳು ಎಲ್ಲಾ ರೀತಿಯ ವೈದ್ಯಕೀಯ ಆರೈಕೆಯ ಲಭ್ಯತೆಯ ವಿಶ್ವಾಸದೊಂದಿಗೆ ತಂತ್ರಜ್ಞಾನವನ್ನು ಬಳಸಿ ನಡೆಸಬಹುದಾದದ ಎಲ್ಲಾ ತಂತ್ರಗಳನ್ನು ಇಲ್ಲಿನ ಸಂಸ್ಥೆ ರೂಪಿಸಿಕೊಂಡಿದೆ. ಈ ಸಂಸ್ಥೆ ಕೈಗೆಟುಕುವ ಆರೋಗ್ಯ ಸೇವೆಯೊಂದಿಗೆ ಎಲ್ಲರನ್ನೂ ತಲುಪಿದೆ. ಅನೇಕ ದೇಶಗಳು ಜಯದೇವ ಮಾದರಿಯನ್ನು ಅನುಸರಿಸಿ ಕಲಿಕೆಯ ಅಧ್ಯಯನವನ್ನು ಮಾಡುತ್ತಿವೆ. ಸಿಎಸ್‌ಐ ಎನ್‌ಐಸಿ ಡಾಟಾ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯ ಕೊರೊನರಿ ಇಂಟರ್‌ವೆನ್ಸನ್ಸ್ ನಡೆಸುತ್ತಿರುವುದಕ್ಕೆ ಈ ಸಂಸ್ಥೆಯ ಹೆಮ್ಮೆಯ ಸಂಗತಿಯಾಗಿದೆ.

ವಯಸ್ಕರ ಮತ್ತು ಮಕ್ಕಳ ಶಸ್ತ್ರಚಿಕಿತ್ಸೆಗಳು ಈ ಸಂಸ್ಥೆಯ ತಂತ್ರಜ್ಞಾನ ವಿಧಾನಗಳಲ್ಲಿ ಬಹು ಅಪರೂಪದ ಸವಾಲಿನಲ್ಲಿ ಯಶಸ್ಸು ಕಂಡಿದೆ. ಜಯದೇವ ಸಂಸ್ಥೆ ಯಾವಾಗಲೂ ಪ್ರಪಂಚದಾದ್ಯಂತದ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸುತ್ತಾ ವಿಶೇಷ ಶಸ್ತ್ರಚಿಕಿತ್ಸಾ ತಂತ್ರಜ್ಞಾನದಲ್ಲಿ ಭಾರಿ ಯಶಸ್ಸನ್ನು ಕಂಡ ಸಂಸ್ಥೆಯಾಗಿದೆ. ಕೋವಿಡ್ ಸಮಯದಲ್ಲಿ ಇಸಿಜಿ ಮೂಲಕ ಕೋವಿಡ್ ಅನ್ನು ಪತ್ತೆ ಹಚ್ಚಲು ಅಲ್ಲೋರಿತಮ್ ಅನ್ನು ಉಪಯೋಗಿಸಿಕೊಂಡು ಅದರ ಯಶಸ್ಸನ್ನು ಕಂಡ ಅಧ್ಯಯನ ಜ್ಞಾನವೂ ನಮ್ಮದೇ ಸಂಸ್ಥೆಯದ್ದು ಆಗಿದೆ.ಡಿಎಂ ಕಾರ್ಡಿಯೋಲಜಿ 25 ವಿದ್ಯಾರ್ಥಿಗಳು ಪ್ರತಿ ವರ್ಷ ಜಯದೇವ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ದೇಶದಲ್ಲಿಅತಿ ಹೆಚ್ಚು ಡಿಎಂ ಕಾರ್ಡಿಯೋಲಜಿ ವಿದ್ಯಾರ್ಥಿಗಳನ್ನು ಟ್ರೈನಿಂಗ್ ಮಾಡುವ ಹೆಗ್ಗಳಿಕೆ ಇದೆ.

ಎಲ್ಲಾ ರಾಜ್ಯಗಳಿಂದಲೂ ಹಾಗೂ ಬಾಂಗ್ಲಾದೇಶ, ನೈಜಿರಿಯಾ, ಇತಿಓಪಿಯಾದಂತಹ ವಿದೇಶಗಳಿಂದಲೂ ಚಿಕಿತ್ಸೆಗೆ ಬರುತ್ತಾರೆ. ಜಯದೇವ ಆಸ್ಪತ್ರೆ ವಿಶ್ವಖ್ಯಾತಿಯನ್ನು ಪಡೆದಿದೆ. ಜಯದೇವ ಸಂಸ್ಥೆ ಪ್ರತಿ ವರ್ಷ ಅಂತರರಾಷ್ಟ್ರೀಯ, ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಹಲವಾರು ಯಶಸ್ವಿಚಿಕಿತ್ಸಾಕ್ರಮಗಳ ವರದಿಗಳನ್ನು ಪ್ರಕಟಣೆಗಳನ್ನು ಮಾಡುತ್ತಾ ಬಂದಿದೆ. ಸಂಶೋಧನಾ ವಿಭಾಗದ ಅಡಿಯಲ್ಲಿ ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿ ಸಾಗುತ್ತಲೇ ಬಂದಿದೆ. ಸ್ನಾತಕೋತ್ತರ ಪದವೀಧರರಿಗೆ ಇತ್ತೀಚಿನ ಜರ್ನಲ್ ಕ್ಲಬ್, ಪ್ರಕರಣ ಪ್ರಸ್ತುತಿಗಳು, ವಿಚಾರ ಸಂಕಿರಣಗಳು, ಸುಧಾರಿತ ಕಾರ್ಯವಿಧಾನಗಳಲ್ಲಿ ಪ್ರಾಯೋಗಿಕ ಅನುಭವದೊಂದಿಗೆ ತರಬೇತಿ ನೀಡಲಾಗುತ್ತದೆ, ಮತ್ತು ಅವುಗಳು ತುಂಬಾ ಅತ್ಯುತ್ತಮವಾಗಿವೆ.

ಜಯದೇವ ಸಂಸ್ಥೆಗಳು 

ಜಯದೇವ ಸಂಸ್ಥೆಯು ಬೆಂಗಳೂರು, ಇಎಸ್‌ಐ, ಕೆಸಿಜಿ, ಮೈಸೂರು, ಕಲ್ಬುರ್ಗಿಯಲ್ಲಿ ಶಾಖೆಯನ್ನು ಹೊಂದಿದೆ. ಜಯದೇವ ಸಂಸ್ಥ ಹುಬ್ಬಳ್ಳಿಯಲ್ಲಿ ಹೃದ್ರೋಗ ಕೇಂದ್ರಕ್ಕೆ ಸಹಾಯ ಮಾಡುತ್ತಿದ್ದಾರೆ. ನಾವು STEMI ಕಾರ್ಯಕ್ರಮ, ABARK, SAST ಮತ್ತು ಹೈ ಕಾಸ್ಟ್, ಅಪರೂಪದ ಕಾಯಿಲೆಗಳಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕಾರ ಸಮನ್ವಯಗೊಳಿಸುತ್ತಿದೆ. ಯುವ ವೈದ್ಯರಿಗೆ ಈ ಸಂಸ್ಥೆಯ ಸಲಹೆ ಕಿವಿಮಾತು ಏನೇಂದರೆ ಆರೋಗ್ಯ ರಕ್ಷಣೆಯು ದೊಡ್ಡ ಮೊತ್ತವಿಲ್ಲದೆ ವೃತ್ತಿಪರ ತೃಪ್ತಿಯೊಂದಿಗೆ ಮಾಡುವ ಜನೋಪಯೋಗಿ 24/7 ಅಗತ್ಯವಿರುವ ಸೇವಾ ವಲಯದ ಸೇವೆಯಾಗಿದೆ ಎಂಬುವುದೇ ಈ ಸಂಸ್ಥೆಯ ಧೈಯವಾಕ್ಯ. ಧ್ಯಾನ, ದೈಹಿಕ ವ್ಯಾಯಾಮ ಕೆಲಸದ ಒತ್ತಡದಲ್ಲಿಯೂ ಜೀವನ ಸಮತೋಲನವನ್ನು ಹೊಂದಲು ಸಹಾಯ ಮಾಡುತ್ತದೆ. ನಿಮ್ಮ ಆರೋಗ್ಯ, ಕುಟುಂಬ ಮತ್ತು ಮಕ್ಕಳನ್ನು ನೋಡಿಕೊಳ್ಳಿ ಎಂಬುದೇ ಈ ದಿನದ ವಿಶೇಷ ವೈದ್ಯರ ಕಿವಿಮಾತು.

Read more Articles on