ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮತ್ತು ಹಾಲಿ ಸದಸ್ಯರೂ ಆಗಿರುವ ಗೋವಿಂದರಾಜು ಅವರು ತಮ್ಮ ಕುಟುಂಬ 58.29 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 115.40 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 173.69 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಗೋವಿಂದರಾಜು ಅವರು 23 ಕೋಟಿ ರು, ಅವರ ಪತ್ನಿ 9.07 ಕೋಟಿ ರು, ಅವರ ಅವಿಭಕ್ತ ಕುಟುಂಬವು 26.22 ಕೋಟಿ ರು. ಮೌಲ್ಯದ ಚರಾಸ್ತಿ ಹೊಂದಿದೆ. ಅಂತೆಯೇ ಗೋವಿಂದರಾಜು ಅವರು 12.88 ಕೋಟಿ ರು, ಪತ್ನಿ 2.43 ಕೋಟಿ ರು. ಮತ್ತು ಅವಿಭಕ್ತ ಕುಟುಂಬವು 32.42 ಕೋಟಿ ರು. ಮೌಲ್ಯದ ಕೃಷಿ ಭೂಮಿ ಒಡೆಯರಾಗಿದ್ದಾರೆ.
ಗೋವಿಂದರಾಜು ಅವರು 28.61 ಕೋಟಿ ರು, ಅವರ ಪತ್ನಿ 19.96 ಕೋಟಿ ರು. ಮತ್ತು ಅವರ ಅವಿಭಕ್ತ ಕುಟುಂಬವು 66.83 ಕೋಟಿ ರು. ಮೌಲ್ಯದ ನಿವೇಶನಗಳು, ವಾಣಿಜ್ಯ ಕಟ್ಟಡಗಳು, ಕೃಷಿಯೇತರ ಭೂಮಿ ಸೇರಿ ಸ್ಥಿರಾಸ್ತಿ ಹೊಂದಿದೆ. ಇದರ ಜೊತೆಗೆ ಗೋವಿಂದರಾಜು ಅವರು 23.14 ಕೋಟಿ ರು. ಮತ್ತು ಅವರ ಅವಿಭಕ್ತ ಕುಟುಂಬವು 7.21 ಕೋಟಿ ರು. ಸಾಲ ಹೊಂದಿದೆ.
ಲಿಂಗರಾಜ್ ಪಾಟೀಲ್ ಆಸ್ತಿ 4.16 ಕೋಟಿ ರು.
ಬೆಂಗಳೂರು : ವಿಧಾನ ಪರಿಷತ್‌ಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಲಿಂಗರಾಜ್ ಪಾಟೀಲ್ ಅವರು ತಾವು 1.38 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 2.78 ಕೋಟಿ ರು. ಸ್ಥಿರಾಸ್ತಿ ಸೇರಿ ಒಟ್ಟು 4.16 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಲಿಂಗರಾಜ್ ಪಾಟೀಲ್ ಅವರು 18 ಲಕ್ಷ ರು. ಮೌಲ್ಯದ 120 ಗ್ರಾಂ ಚಿನ್ನಾಭರಣ, 1 ಕೆ.ಜಿ. ಬೆಳ್ಳಿವಸ್ತುಗಳು, ಠೇವಣಿಗಳು, 19 ಲಕ್ಷ ರು. ಮೌಲ್ಯದ ಕಾರು ಸೇರಿ 1.38 ಕೋಟಿ ರು. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 92.50 ಲಕ್ಷ ರು. ಮೌಲ್ಯದ ಸುಮಾರು 3 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಇನ್ನು ನಿವೇಶನಗಳು, ಮನೆ, ಕೃಷಿಯೇತರ ಭೂಮಿ ಸೇರಿ 2.78 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಒಡೆಯರಾಗಿದ್ದಾರೆ. 9.95 ಲಕ್ಷ ರು. ಸಾಲವೂ ಅವರ ಮೇಲಿದೆ.
ಪರಿಷತ್ ಬಿಜೆಪಿ ಅಭ್ಯರ್ಥಿ ಆರ್.ರಘು ಕುಟುಂಬ ಬಳಿ 28.23 ಕೋಟಿ ರು.ಆಸ್ತಿ
ಬೆಂಗಳೂರು : ವಿಧಾನ ಪರಿಷತ್‌ಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಆರ್.ರಘು (ಕೌಟಿಲ್ಯ ರಘು) ಅವರು ತಮ್ಮ ಕುಟುಂಬ 8.92 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 19.31 ಕೋಟಿ ರು. ಸ್ಥಿರಾಸ್ತಿ ಸೇರಿ ಒಟ್ಟು 28.23 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ರಘು ಅವರು 4.87 ಕೋಟಿ ರು. ಮತ್ತು ಅವರ ಪುತ್ರ 4.05 ಕೋಟಿ ರು. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಕ್ರಮವಾಗಿ 17.41 ಕೋಟಿ ರು. ಮತ್ತು 1.90 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ರಘು ಅವರು 5.77 ಕೋಟಿ ರು. ಮತ್ತು ಅವರ ಪುತ್ರ 3.68 ಕೋಟಿ ರು. ಸಾಲವನ್ನೂ ಹೊಂದಿದ್ದಾರೆ.
ರಘು ಅವರು ಯಾವುದೇ ಚಿನ್ನಾಭರಣ ಹೊಂದಿಲ್ಲ. ಅವರ ಪುತ್ರ 74.29 ಲಕ್ಷ ರು. ಮೌಲ್ಯದ 496 ಗ್ರಾಂ. ಚಿನ್ನಾಭರಣ ಹೊಂದಿದ್ದಾರೆ. ರಘು ಅವರ ಬಳಿ ಸ್ವಂತ ವಾಹನ ಇಲ್ಲ. ಮಗನ ಬಳಿ ಒಂದು ಕಾರಿದೆ. ತಂದೆ-ಮಗನ ಬಳಿ ಯಾವುದೇ ಕೃಷಿ ಜಮೀನು ಇಲ್ಲ. ಆದರೆ, ಕೋಟ್ಯಂತರ ರು. ಮೌಲ್ಯದ ನಿವೇಶನ, ಫ್ಲ್ಯಾಟ್, ಮನೆಗಳು ಸೇರಿ ಕೃಷಿಯೇತರ ಭೂಮಿ ಹೊಂದಿದ್ದಾರೆ.
ಬಿಜೆಪಿ ರಾಜ್ಯಸಭಾ ಅಭ್ಯರ್ಥಿ ನಾಗರಾಜ್ ಆಸ್ತಿ ₹15.79 ಕೋಟಿ
ಬೆಂಗಳೂರು: ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವ ಬಿಜೆಪಿ ಅಭ್ಯರ್ಥಿ ಎಂ.ನಾಗರಾಜ್ ಅವರು ತಮ್ಮ ಕುಟುಂಬ 4.51 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 11.28 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 15.79 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಎಂ.ನಾಗರಾಜ್ ಅವರು 3.07 ಕೋಟಿ ರು. ಮತ್ತು ಅವರ ಪತ್ನಿ 1.44 ಕೋಟಿ ರು. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಕ್ರಮವಾಗಿ 6.51 ಕೋಟಿ ರು. ಮತ್ತು 3.20 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ನಾಗರಾಜ್ ಯಾವುದೇ ಚಿನ್ನಾಭರಣ ಹೊಂದಿಲ್ಲ. ಅವರ ಪತ್ನಿ 11.21 ಲಕ್ಷ ರು. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ದಂಪತಿ ಲಕ್ಷಾಂತರ ರು. ಮೌಲ್ಯದ ಕಾರುಗಳನ್ನು ಹೊಂದಿದ್ದಾರೆ. ನಾಗರಾಜ್‌ರ ಕುಟುಂಬವು ಸುಮಾರು 48 ಎಕರೆ ಕೃಷಿ ಜಮೀನು, ಸೈಟ್, ಮನೆಗಳು ಸೇರಿ ಕೃಷಿಯೇತರ ಭೂಮಿ ಹೊಂದಿದೆ.
ಎಂ.ನಾಗರಾಜ್ ಅವರು 2.77 ಕೋಟಿ ರು. ಮತ್ತು ಅವರ ಪತ್ನಿ 45 ಲಕ್ಷ ರು. ಸಾಲ ಹೊಂದಿದ್ದಾರೆ.
- ನಾಗರಾಜ್‌ಗಿದೆ 2.77 ಕೋಟಿ ರು. ಸಾಲ
