ಸಾರಾಂಶ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ (ಕೆಎಸ್ಆರ್ ಮೆಜೆಸ್ಟಿಕ್) ಯಾರ್ಡ್‌ನಲ್ಲಿ ಮೂಲಸೌಕರ್ಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 15ರಿಂದ 2026ರ ಜನವರಿ 15ರವರೆಗೆ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಬೆಂಗಳೂರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ (ಕೆಎಸ್ಆರ್ ಮೆಜೆಸ್ಟಿಕ್) ಯಾರ್ಡ್‌ನಲ್ಲಿ ಮೂಲಸೌಕರ್ಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 15ರಿಂದ 2026ರ ಜನವರಿ 15ರವರೆಗೆ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
153 ದಿನಗಳ ಕಾಲ ಹಲವು ರೈಲುಗಳ ಸಂಚಾರ ಎಸ್ಎಂವಿಟಿ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ಕೊನೆಯಾಗಲಿವೆ ಹಾಗೂ ಈ ನಿಲ್ದಾಣದಿಂದ ಸಂಚಾರ ಪ್ರಾರಂಭಿಸಲಿವೆ. ಅಲ್ಲದೆ, ಈ ರೈಲುಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ.
ಆಗಸ್ಟ್ 15 ರಿಂದ ಜನವರಿ 15, 2026ರವರೆಗೆ ಎರ್ನಾಕುಲಂನಿಂದ ಹೊರಡುವ ರೈಲು (12678) ಎರ್ನಾಕುಲಂ–ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ ರೈಲು, ಕೆಎಸ್ಆರ್ ಬೆಂಗಳೂರಿಗೆ ಬರುವುದಿಲ್ಲ. ಬದಲಾಗಿ ಎಸ್ಎಂವಿಟಿ ಬೆಂಗಳೂರಿನಲ್ಲಿ (ರಾತ್ರಿ 9ಗಂಟೆ) ತನ್ನ ಪ್ರಯಾಣ ಕೊನೆಗೊಳಿಸಲಿದೆ. ಈ ರೈಲು ಕಾರ್ಮೆಲರಾಮ್, ಬೈಯಪ್ಪನಹಳ್ಳಿ, ಎಸ್ಎಂವಿಟಿ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದ್ದು, ಬೆಂಗಳೂರು ಕ್ಯಾಂಟ್ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣಗಳಲ್ಲಿ ನಿಲುಗಡೆ ಆಗುವುದಿಲ್ಲ.
ಅದೇ ರೀತಿ ಹಿಂದಿರುಗುವ ಈ ರೈಲು (12677) ಕೆಎಸ್ಆರ್ ಬದಲಾಗಿ ಎಸ್ಎಂವಿಟಿ ಬೆಂಗಳೂರಿನಿಂದ (ಬೆಳಗ್ಗೆ 6.10) ಸಂಚಾರ ಪ್ರಾರಂಭಿಸಲಿದೆ. ಈ ರೈಲು ಎಸ್ಎಂವಿಟಿ ಬೆಂಗಳೂರು, ಬೈಯಪ್ಪನಹಳ್ಳಿ ಮತ್ತು ಕಾರ್ಮೆಲರಾಮ್ ಮಾರ್ಗವಾಗಿ ಸಂಚರಿಸಲಿದ್ದು, ಕೆಎಸ್ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ನಾಂದೇಡ್ ನಿಲ್ದಾಣದಿಂದ ಹೊರಡುವ ನಾಂದೇಡ್–ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ (16594) ಕೆಎಸ್ಆರ್ ಬದಲಾಗಿ ಯಶವಂತಪುರದಲ್ಲಿ (ಬೆಳಗ್ಗೆ 4.15) ತನ್ನ ಪ್ರಯಾಣ ಕೊನೆಗೊಳಿಸಲಿದೆ. ಯಲಹಂಕ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ ಮಾರ್ಗವಾಗಿ ಸಂಚರಿಸಲಿದ್ದು, ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣಗಳಲ್ಲಿ ನಿಲ್ಲಲಾರದು.
ಹಿಂದಿರುಗುವ ಈ ರೈಲು (16593) ಕೆಎಸ್ಆರ್ ಬೆಂಗಳೂರಿಗೆ ಬದಲಾಗಿ ಯಶವಂತಪುರದಿಂದ (ರಾತ್ರಿ 11.15) ಸಂಚಾರ ಪ್ರಾರಂಭಿಸಲಿದೆ. ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ ಮತ್ತು ಯಲಹಂಕ ಮಾರ್ಗವಾಗಿ ಸಂಚರಿಸಲಿದ್ದು, ಕೆಎಸ್ಆರ್ ಬೆಂಗಳೂರು ಮತ್ತು ಬೆಂಗಳೂರು ಕ್ಯಾಂಟ್ ನಿಲ್ದಾಣಗಳಲ್ಲಿ ನಿಲ್ಲಲಾರದು.
ಕಣ್ಣೂರಿನಿಂದ ಹೊರಡುವ ಕಣ್ಣೂರು–ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ (16512) ಕೆಎಸ್ಆರ್ ಬದಲಾಗಿ ಎಸ್ಎಂವಿಟಿ ಬೆಂಗಳೂರಿನಲ್ಲಿ (ಬೆಳಗ್ಗೆ 7.45) ತನ್ನ ಪ್ರಯಾಣ ಕೊನೆಗೊಳಿಸಲಿದೆ. ಈ ರೈಲು ಕುಣಿಗಲ್, ಚಿಕ್ಕಬಾಣಾವರ, ಯಶವಂತಪುರ, ಹೆಬ್ಬಾಳ, ಬಾಣಸವಾಡಿ ಮತ್ತು ಎಸ್ಎಂವಿಟಿ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದ್ದು, ಕೆಎಸ್ಆರ್ ನಿಲ್ದಾಣದಲ್ಲಿ ನಿಲ್ಲುವುದಿಲ್ಲ.
ಹಿಂದಿರುಗುವ ಕೆಎಸ್ಆರ್ ಬೆಂಗಳೂರು–ಕಣ್ಣೂರು ಡೈಲಿ ಎಕ್ಸ್ ಪ್ರೆಸ್ (16511) ಕೆಎಸ್ಆರ್ ನಿಲ್ದಾಣದ ಬದಲು ಎಸ್ಎಂವಿಟಿ ಬೆಂಗಳೂರಿನಿಂದ (ರಾತ್ರಿ 8ಕ್ಕೆ) ತನ್ನ ಪ್ರಯಾಣ ಪ್ರಾರಂಭಿಸಲಿದೆ. ಎಸ್ಎಂವಿಟಿ ಬೆಂಗಳೂರು, ಬಾಣಸವಾಡಿ, ಹೆಬ್ಬಾಳ, ಯಶವಂತಪುರ, ಚಿಕ್ಕಬಾಣಾವರ ಮತ್ತು ಕುಣಿಗಲ್ ಮಾರ್ಗವಾಗಿ ಸಂಚರಿಸಲಿದ್ದು, ಕೆಎಸ್ಆರ್ ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.