ಆತ್ಮ*ತ್ಯೆ ಮಾಡಿಕೊಂಡ ಗುತ್ತಿಗೆ ನೌಕರ ಪರಿಚಯ ಇಲ್ಲ : ಸುಧಾಕರ್‌

| N/A | Published : Aug 08 2025, 07:26 AM IST

Dr k sudhakar
ಆತ್ಮ*ತ್ಯೆ ಮಾಡಿಕೊಂಡ ಗುತ್ತಿಗೆ ನೌಕರ ಪರಿಚಯ ಇಲ್ಲ : ಸುಧಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಚಿವ, ಬಿಜೆಪಿ ಸಂಸದ ಸುಧಾಕರ್‌ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಯ ಕಾರು ಚಾಲಕ, ಎಂ. ಬಾಬು ಎಂಬುವರು ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ.

 ನವದೆಹಲಿ/ಚಿಕ್ಕಬಳ್ಳಾಪುರ :  ಗುತ್ತಿಗೆ ನೌಕರನ ಆತ್ಮಹ*ಗೂ ತಮಗೂ ಸಂಬಂಧ ಇಲ್ಲ ಎಂದು ಸಂಸದ ಡಾ। ಕೆ.ಸುಧಾಕರ್‌ ಅವರು ಹೇಳಿದ್ದಾರೆ. ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಬಾಬು ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿರುವ ಪ್ರಕರಣದ ಬಗ್ಗೆ ನವದೆಹಲಿಯಲ್ಲಿ ಸುಧಾಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಬಾಬು ಎಂಬ ವ್ಯಕ್ತಿ ನನಗೆ ಗೊತ್ತಿಲ್ಲ, ಆತನ ಮುಖವನ್ನೇ ನೋಡಿಲ್ಲ. ಈ ವ್ಯಕ್ತಿ ಯಾಕೆ ನನ್ನ ಹೆಸರು ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.

ಆ ವ್ಯಕ್ತಿ ಯಾಕೆ ನನ್ನ ಹೆಸರು ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ. ಬಾಬು ಅನ್ನೋ ವ್ಯಕ್ತಿ ಚಿಕ್ಕಬಳ್ಳಾಪುರ ನಿವಾಸಿ ಎಂದು ಗೊತ್ತಾಗಿದೆ. ಆತ್ಮ*ತ್ಯೆಗೆ ಶರಣಾಗಿರುವುದು ಜಿಲ್ಲಾ ಪಂಚಾಯಿತಿ ಆವರಣದಲ್ಲಿ. ಮೊದಲು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ. ನನಗೆ ಈ ಸಾವು ದುಃಖ ತಂದಿದೆ. ನನ್ನ ಸಾರ್ವಜನಿಕ ಜೀವನದಲ್ಲಿ ಈ ಬಾಬು ಅನ್ನೋ ವ್ಯಕ್ತಿಯನ್ನು ಭೇಟಿ ಆಗಿಲ್ಲ. ನಾನು ಎರಡು ಬಾರಿ ಸಚಿವ ಆಗಿದ್ದೇನೆ, ಶಾಸಕ ಆಗಿದ್ದೇನೆ. ಈ ಸಮಯದಲ್ಲಿ ಹಲವರಿಗೆ ಕೆಲಸ ಕೊಡಿಸಿದ್ದೇನೆ, ಆದರೆ ಈ ವ್ಯಕ್ತಿ ನಂಗೆ ಯಾರೂ ಅಂತ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕರು, ಉಸ್ತುವಾರಿ ಸಚಿವರ ರಾಜಕೀಯ:

ಬಾಬು ಕುಟುಂಬದವರು ದೂರು ಕೊಡಲು ಠಾಣೆಗೆ ಹೋದಾಗ ಅಲ್ಲಿನ ಪಿಎಸ್‌ಐ ಶರಣಪ್ಪ ಡೆತ್‌ನೋಟ್ ನಲ್ಲಿರುವಂತೆ ದೂರು ಕೊಡಿ ಎಂದಿದ್ದಾರೆ. ಶಾಸಕರು, ಉಸ್ತುವಾರಿ ಸಚಿವರ ರಾಜಕೀಯ ಇದೆ. ನನ್ನ ಒಳಗೊಂಡಂತೆ ಯಾರೇ ತಪ್ಪಿತಸ್ಥರು ಇದ್ದರೂ ಅವರಿಗೆ ಉಗ್ರ ಶಿಕ್ಷೆಯಾಗಲಿ. ಕಾನೂನು ಏನೇ ಇರಲಿ ತನಿಖೆ ಪಾರದರ್ಶಕವಾಗಿರಲಿ. ಇದು ಮಾಧ್ಯಮದ ಟ್ರಯಲ್ ಆಗೋದು ಬೇಡ. ಸರಿಯಾಗಿ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ.

ಮೃತ ಕುಟುಂಬ ಸದಸ್ಯರನ್ನು ನಾನು ಭೇಟಿ ಆಗುವೆ. ದೆಹಲಿಯಿಂದ ಹೋದಮೇಲೆ ಮೃತಪಟ್ಟ ಕುಟುಂಬಸ್ಥರನ್ನು ಭೇಟಿ ಮಾಡುತ್ತೇನೆ. ನನ್ನ ಕೈಲಾದ ಸಹಾಯವನ್ನು ಆ ಕುಟುಂಬಸ್ಥರಿಗೆ ನೀಡುವೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ. ಇದು ಜಗತ್ ಜಾಹೀರಾಗಿದೆ. ಕಾಂಗ್ರೆಸ್ ಶಾಸಕರ ಹೆಸರು ಬಂದರೆ ಒಂದು ಕಾನೂನು, ಬಿಜೆಪಿ ಶಾಸಕ, ಸಂಸದರು ಹೆಸರು ಬಂದರೆ ಬೇರೆ ಕಾನೂನು. ಬಾಬು ಸಾವನ್ನು ರಾಜಕೀಯ ಕಾರಣಕ್ಕೆ ಎಳೆದು ತರುವುದು ಸರಿ ಅಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

ನಾಗೇಶ್ ಅವರ ಮಾವ ಚಿಕ್ಕಾಡಗನಹಳ್ಳಿ ಕೃಷ್ಣಮೂರ್ತಿ ಪರಿಚಯ ಇದೆ. ಕೊಡಗು ಪ್ರಕರಣದಲ್ಲಿ ಶಾಸಕರು ಹೆಸರು ಯಾಕೆ ಹಾಕಿಲ್ಲ. ಇದರಲ್ಲಿ ರಾಜಕೀಯ ಇರೋದು ಎದ್ದು ಕಾಣುತ್ತಿದೆ. ನಾಗೇಶ್ ಹಾಗೂ ಮಂಜುನಾಥ್ ಎಂಬವವರು, ಕೆಲಸ ಕೊಡಿಸೋದಾಗಿ ಹೇಳಿ ₹15 ಲಕ್ಷ ತಗೊಂಡಿದ್ದಾರೆ ಅಂತ ಮಾಹಿತಿ ಬಂದಿದೆ. ನಾಗೇಶ್ ಅವರ ಮಾವ ಕೃಷ್ಣಮೂರ್ತಿ ನಮ್ಮ ಪಕ್ಷದಲ್ಲಿದ್ದರು. ಈ ಒಂದು ಆತ್ಮಹತ್ಯೆ ಪ್ರಕರಣವನ್ನು ರಾಜಕೀಯ ಮಾಡೋ ಪ್ರಯತ್ನವನ್ನು ಮಾಡಲಾಗುತ್ತಿದೆ. ದೇಶದಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತಿದೆ. ತನಿಖೆ ಪಾರದರ್ಶಕವಾಗಿ ಆಗಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಹೇಳಿದರು.

ಸಂಸದ ಕೆ.ಸುಧಾಕರ್‌ ಹೆಸರು ಬರೆದಿಟ್ಟು ಕಾರು ಚಾಲಕ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಮಾಜಿ ಸಚಿವ, ಬಿಜೆಪಿ ಸಂಸದ ಸುಧಾಕರ್‌ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಯ ಕಾರು ಚಾಲಕ, ಎಂ. ಬಾಬು ಎಂಬುವರು ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸುಧಾಕರ್‌ ಸೇರಿ ಮೂವರ ವಿರುದ್ಧ ಕೇಸ್‌ ದಾಖಲಾಗಿದೆ. ಚಿಕ್ಕಬಳ್ಳಾಪುರದ ಬಾಪೂಜಿನಗರದ ನಿವಾಸಿ ಎಂ.ಬಾಬು (33) ಆತ್ಮಹ*ಗೆ ಶರಣಾದವರು. ಜಿಲ್ಲಾ ಪಂಚಾಯತಿಯ ಲೆಕ್ಕ ಪರಿಶೋಧನೆ ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಇವರು ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಸಭಾಂಗಣದ ಹಿಂಭಾಗದಲ್ಲಿರುವ ಮರಕ್ಕೆ ನೇ* ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯರು ಇದನ್ನು ಗಮನಿಸಿ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದಾಗ ಅವರ ಜೇಬಿನಲ್ಲಿ 4 ಪುಟಗಳ ಡೆತ್ ನೋಟ್ ಸಿಕ್ಕಿದೆ.

ನನ್ನ ಸಾವಿಗೆ ಸಂಸದ ಡಾ.ಕೆ.ಸುಧಾಕರ್ ಕಾರಣ. ಎಂಪಿ ಅವರ ಬೆಂಬಲಿಗ ಚಿಕ್ಕಕಾಡಿಗಾನಹಳ್ಳಿ ನಾಗೇಶ್, ಜಿ.ಪಂ.ಲೆಕ್ಕ ಪರಿಶೋಧನೆ ವಿಭಾಗದ ನೌಕರ ಹಾಗೂ ಸುಧಾಕರ್ ಸಚಿವರಾಗಿದ್ದ ವೇಳೆ ಅವರ ಆಪ್ತ ಸಹಾಯಕರಾಗಿದ್ದ ಮಂಜುನಾಥ್ ಅವರ ಹೆಸರನ್ನು ಡೆತ್‌ನೋಟ್‌ಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಗುತ್ತಿಗೆ ಕೆಲಸ ಖಾಯಂ ಮಾಡಿಸಿಕೊಡುವುದಾಗಿ ಹೇಳಿ ಸುಧಾಕರ್ ಬೆಂಬಲಿಗರು 40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಸಾಲ ಮಾಡಿ ಒಟ್ಟಾರೆ 35 ಲಕ್ಷ ಕೊಟ್ಟಿದ್ದೇನೆ. ಆದರೆ, ಕೆಲಸ ಖಾಯಂ ಆಗಿಲ್ಲ. ಈಗ ಹಣ ವಾಪಸ್‌ ಕೇಳಿದರೆ ಕೊಡುತ್ತಿಲ್ಲ. ಸಾಲಗಾರರ ಕಾಟ ತಡೆಯಲಾರದೆ ಆತ್ಮ*ತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಮೃತರ ಪತ್ನಿ ಶಿಲ್ಪ ನೀಡಿರುವ ದೂರಿನಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸಂಸದ ಡಾ.ಕೆ.ಸುಧಾಕರ್, ಚಿಕ್ಕಕಾಡಿಗೇನಹಳ್ಳಿ ನಾಗೇಶ್, ಮಂಜುನಾಥ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

Read more Articles on