ನಿಜಗಲ್ ಬೆಟ್ಟದಲ್ಲಿ ಅದ್ಧೂರಿ ಹನುಮ ಜಯಂತಿದಾಬಸ್ಪೇಟೆ: ಹಿಂದೂ, ಮುಸ್ಲಿಮರ ಧಾರ್ಮಿಕ ಭಾವೈಕ್ಯತೆಯ ತಾಣವಾದ ಸೋಂಪುರ ಹೋಬಳಿಯ ನಿಜಗಲ್ ಸಿದ್ದರಬೆಟ್ಟದಲ್ಲಿ ಶುಕ್ರವಾರ ವಿಜೃಂಭಣೆಯ ಹನುಮ ಜಯಂತಿಯಲ್ಲಿ ಸಾವಿರಕ್ಕೂ ಅಧಿಕ ಹನುಮ ಮಾಲಾಧಾರಿಗಳು ಜಡಿ ಮಳೆಯನ್ನು ಲೆಕ್ಕಿಸದೇ ನೆಲಮಂಗಲದಿಂದ 30 ಕಿ.ಮೀ ಪಾದಾಯಾತ್ರೆ ಮಾಡಿ ಬೆಟ್ಟ ಹತ್ತಿ ಹನುಮ ಹಾಗೂ ಕ್ಷೇತ್ರದ ಆರಾಧ್ಯದೈವ ಸಿದ್ದಪ್ಪ ದೇವರ ದರ್ಶನ ಪಡೆದು ಪುನೀತರಾದರು.