ಸಾರಾಂಶ
ರಾಜ್ ಬಿ ಶೆಟ್ಟಿ ನಿರ್ಮಾಣದಲ್ಲಿ ಜೆ ಪಿ ತುಮಿನಾಡು ನಿರ್ದೇಶನ ಮಾಡಿರುವ ‘ಸು ಪ್ರಂ ಸೋ’ ಸಿನಿಮಾ ನಾಲ್ಕನೇ ವಾರಕ್ಕೆ ಸೆಂಚುರಿ ಕ್ಲಬ್ ಸಮೀಪಿಸಿದೆ.
ಸಿನಿವಾರ್ತೆ
ರಾಜ್ ಬಿ ಶೆಟ್ಟಿ ನಿರ್ಮಾಣದಲ್ಲಿ ಜೆ ಪಿ ತುಮಿನಾಡು ನಿರ್ದೇಶನ ಮಾಡಿರುವ ‘ಸು ಪ್ರಂ ಸೋ’ ಸಿನಿಮಾ ನಾಲ್ಕನೇ ವಾರಕ್ಕೆ ಸೆಂಚುರಿ ಕ್ಲಬ್ ಸಮೀಪಿಸಿದೆ.
ರಜನಿಕಾಂತ್, ಹೃತಿಕ್, ಜೂ. ಎನ್‌ಟಿಆರ್ ಅವರಂಥಾ ದೈತ್ಯ ನಟರ ಸಿನಿಮಾಕ್ಕೇ ಎದಿರೇಟು ನೀಡುವ ಮೂಲಕ, ಸ್ಟಾರ್‌ಗಿರಿಗಿಂತಲೂ ಮನರಂಜನೆ, ತಲ್ಲೀನಗೊಳಿಸುವ ಅನುಭವವೇ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದೆ.
ಶುಕ್ರವಾರ ಸ್ವಾತಂತ್ರ್ಯೋತ್ಸವ ರಜೆ, ವೀಕೆಂಡ್ ಒಟ್ಟೊಟ್ಟಿಗೇ ಬಂದಿರುವುದು ಸಿನಿಮಾಕ್ಕೆ ಪಾಸಿಟಿವ್ ಆಗಿದೆ. ಬೆಂಗಳೂರಿನ ಬಹುತೇಕ ಥೇಟರ್‌ಗಳಲ್ಲಿ ನಾಲ್ಕನೇ ವಾರವೂ ಈ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿರುವುದು ವಿಶೇಷವಾಗಿತ್ತು. ಗಂಟೆ 7 ಸಾವಿರದ ಲೆಕ್ಕದಲ್ಲಿ ಟಿಕೆಟ್ ಬುಕಿಂಗ್ ಆಗುತ್ತಿತ್ತು.
ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರಿರುವ ಬಗ್ಗೆ ಚಿತ್ರತಂಡ ಅಧಿಕೃತ ಪ್ರಕಟಣೆ ನೀಡದಿದ್ದರೂ, ತಜ್ಞರ ಪ್ರಕಾರ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಸಿನಿಮಾ ಕಲೆಕ್ಷನ್ 97. 6 ಕೋಟಿ ದಾಖಲಾಗಿತ್ತು. ಕರ್ನಾಟಕದಲ್ಲಿ 75 ಕೋಟಿಗಳಷ್ಟು ಗಳಿಕೆಯಾದರೆ, ಹೊರದೇಶಗಳಲ್ಲಿ 12.5 ಕೋಟಿ, ಹೊರ ರಾಜ್ಯಗಳಲ್ಲಿ 10.1 ಕೋಟಿಗಳಷ್ಟು ಕಲೆಕ್ಷನ್ ಆಗಿದೆ ಎನ್ನಲಾಗಿದೆ.
ರಾತ್ರಿ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಸಿನಿಮಾ ನೂರರ ಗಡಿ ದಾಟಿರುವುದು ಬಹುತೇಕ ಖಚಿತವಾಗಿದೆ.
ಜೆ ಪಿ ತುಮಿನಾಡು, ಶನೀಲ್ ಗೌತಮ್, ಸಂಧ್ಯಾ ಅರೆಕರೆ, ರಾಜ್ ಬಿ ಶೆಟ್ಟಿ ಮುಖ್ಯಪಾತ್ರಗಳಲ್ಲಿದ್ದಾರೆ.