ಕಾರು ಚಲಾಯಿಸುವಾಗ ಲ್ಯಾಪ್‌ಟಾಪ್‌ ಬಳಕೆ - ವಿಡಿಯೋ ವೈರಲ್‌ ಬೆನ್ನಲ್ಲೇ ಮಹಿಳೆಗೆ ದಂಡ

| N/A | Published : Feb 14 2025, 08:07 AM IST

traffic police

ಸಾರಾಂಶ

ರಾಜಧಾನಿಯಲ್ಲಿ ಕಾರು ಚಾಲನೆ ಮಾಡುತ್ತಲೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಿದ ಮಹಿಳೆಗೆ ಸಂಚಾರ ಉತ್ತರ ವಿಭಾಗದ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರು  : ರಾಜಧಾನಿಯಲ್ಲಿ ಕಾರು ಚಾಲನೆ ಮಾಡುತ್ತಲೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಿದ ಮಹಿಳೆಗೆ ಸಂಚಾರ ಉತ್ತರ ವಿಭಾಗದ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

ಇತ್ತೀಚೆಗೆ ಮಹಿಳೆಯೊಬ್ಬರು ಕಾರು ಚಾಲನೆ ಮಾಡುತ್ತಲೇ ತೊಡೆಯ ಮೇಲೆ ಲ್ಯಾಪ್‌ಟಾಪ್‌ ಇರಿಸಿಕೊಂಡು ಕೆಲಸ ಮಾಡುವುದನ್ನು ಮತ್ತೊಂದು ಕಾರಿನ ಪ್ರಯಾಣಿಕರು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು. ಇದರ ಬೆನ್ನಲ್ಲೇ ಈ ವಿಡಿಯೋ ವೈರಲ್‌ ಆಗಿತ್ತು. ಈ ಮಹಿಳೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಸಂಚಾರ ಪೊಲೀಸರನ್ನು ಆಗ್ರಹಿಸಿದ್ದರು. ಈ ವೈರಲ್‌ ವಿಡಿಯೋ ನೋಡಿದ ಸಂಚಾರ ಉತ್ತರ ವಿಭಾಗದ ಪೊಲೀಸರು, ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಮಹಿಳೆಯನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ.

ಮಹಿಳೆಗೆ ಕಾರು ಚಲಾಯಿಸುತ್ತಲೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ಮತ್ತು ಆ ಮಹಿಳೆಗೆ ದಂಡ ವಿಧಿಸಿರುವ ಫೋಟೋವನ್ನು ಸಂಚಾರ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ವರ್ಕ್‌ ಫ್ರಮ್‌ ಹೋಮ್‌ ನಾಟ್‌ ಫ್ರಮ್‌ ಕಾರು ವೈಲ್‌ ಡ್ರೈವಿಂಗ್‌’ ಎಂದು ಬರೆದಿದ್ದಾರೆ.