ಸಾರಾಂಶ
ಭಯ ಬಿಟ್ಟು ಆರ್ಥ ಮಾಡಿಕೊಂಡು ಓದಬೇಕು. ಓದಿಗಿಂತ ಬರವಣಿಗೆ ಹೆಚ್ಚು ಕಾಲ ಓದಿರುವುದನ್ನು ನೆನಪಿನಲ್ಲಿಟ್ಟಿಕೊಳ್ಳಲು ಸಾಧ್ಯ. ಕ್ಲಿಷ್ಟ, ಅರ್ಥವಾಗದ ವಿಷಯಗಳನ್ನು ಪಟ್ಟಿ ಮಾಡಿಕೊಂಡು ಶಿಕ್ಷಕರಲ್ಲಿ ಕೇಳಿ ಪರಿಹರಿಸಿಕೊಳ್ಳಬೇಕು. ಸಣ್ಣ ಟಿಪ್ಪಣಿ ಮಾಡಿಕೊಂಡು ಓದುವ ಅಭ್ಯಾಸ ಮಾಡಿಕೊಳ್ಳಿ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಗಡಿಭಾಗದ ಮಾದಾಪುರ ಗ್ರಾಮಕ್ಕೆ ಬಿಇಒ ವೈ.ಕೆ.ತಿಮ್ಮೇಗೌಡ ದಿಢೀರ್ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷೆ ಸಿದ್ಧತೆ ಕುರಿತು ಪೋಷಕರೊಂದಿಗೆ ಚರ್ಚಿಸಿದರು.ಈ ವೇಳೆ ಮಾತನಾಡಿದ ಅವರು, ಪರೀಕ್ಷೆ ಎನ್ನುವುದು ವರ್ಷ ಪೂರ್ತಿ ಓದಿ ತಿಳಿದಿರುವುದನ್ನು ಬರೆಯುವುದಾಗಿದೆ. ಇದರಲ್ಲಿ ಅತಂಕ, ಭಯ ಬಿಟ್ಟು ಹಬ್ಬದಂತೆ ಸಂಭ್ರಮದಿಂದ ಸ್ವಾಗತಿಸುವುದನ್ನು ಮಕ್ಕಳು ಕಲಿಯಬೇಕು ಎಂದರು.
ಪರೀಕ್ಷೆ ಮಕ್ಕಳ ಭವಿಷ್ಯದ ತಿರುವಿನ ಘಟ್ಟ. ಟಿವಿ, ಮೊಬೈಲ್‌ಗಳಿಗೆ ಕಡಿವಾಣ ಹಾಕಿ. ನಿತ್ಯ ಸ್ನಾನ, ಲಘು ಉಪಹಾರ, ಆಹಾರ ಸೇವನೆ, ಯೋಗ, ಧ್ಯಾನದಂತಹ ಕಡೆಗೆ ತುಸು ವಿಶೇಷ ಗಮನಹರಿಸಿ ಎಂದರು.ಭಯ ಬಿಟ್ಟು ಆರ್ಥ ಮಾಡಿಕೊಂಡು ಓದಬೇಕು. ಓದಿಗಿಂತ ಬರವಣಿಗೆ ಹೆಚ್ಚು ಕಾಲ ಓದಿರುವುದನ್ನು ನೆನಪಿನಲ್ಲಿಟ್ಟಿಕೊಳ್ಳಲು ಸಾಧ್ಯ. ಕ್ಲಿಷ್ಟ, ಅರ್ಥವಾಗದ ವಿಷಯಗಳನ್ನು ಪಟ್ಟಿ ಮಾಡಿಕೊಂಡು ಶಿಕ್ಷಕರಲ್ಲಿ ಕೇಳಿ ಪರಿಹರಿಸಿಕೊಳ್ಳಬೇಕು. ಸಣ್ಣ ಟಿಪ್ಪಣಿ ಮಾಡಿಕೊಂಡು ಓದುವ ಅಭ್ಯಾಸ ಮಾಡಿಕೊಳ್ಳಿ ಎಂದರು.
ನಿದ್ದೆಗೆಟ್ಟು ಓದುವುದು ಬೇಡ. ಓದಿರುವುದನ್ನು ನೆನಪು ಮಾಡಿಕೊಂಡು ಬೇಗ ಮಲಗಿ ಬೆಳಗ್ಗಿನ ಜಾವ ಓದು ಹೆಚ್ಚು ಕಾಲ ಮನಸ್ಸಿನಲ್ಲಿ ಉಳಿಯಲಿದೆ. ಹಬ್ಬ, ಹರಿದಿನದ ಊಟ, ಖರೀದ ಪದಾರ್ಥ ಸೇವನೆಗೆ ಕಡಿವಾಣ ಹಾಕಬೇಕು. ಸೊಪ್ಪು, ತರಕಾರಿ, ಹಣ್ಣಿನಂತಹ ಪೌಷ್ಟಿಕಾಂಶ ಭರಿತ ಆಹಾರ ಸೇವಿಸಿ. ಹೆಚ್ಚು ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.ಪೋಷಕರು ತಮ್ಮ ಶಿಕ್ಷಕರ ಮೊಬೈಲ್ ನಂಬರ್ ಪಡೆದುಕೊಂಡು ಮಕ್ಕಳಿಗೆ ಗೊಂದಲ ಇರುವ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು. ಸಾನಿಕ, ಯಶಸ್ವಿನಿ ಮತ್ತಿತರ ವಿದ್ಯಾರ್ಥಿಗಳ ಮನೆಗೆ ಅಧಿಕಾರಿಗಳೊಂದಿಗೆ ತೆರಳಿ ಮಕ್ಕಳಿಗೆ ಧೈರ್ಯ ತುಂಬಿದರು. ಇಸಿಒ ಮೋಹನಕುಮಾರ್, ನವೀನ್, ಶ್ರೀನಿವಾಸ್, ಸಿಆರ್‌ಪಿ ಆಶಾರಾಣಿ ಇದ್ದರು.