ಸಾರಾಂಶ
ಚಳ್ಳಕೆರೆ ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿ ಬೆಸ್ಕಾಂ ಇಲಾಖೆ ಸಿಬ್ಬಂದಿ ಹಮ್ಮಿಕೊಂಡಿದ್ದ ಪವರ್‌ಮ್ಯಾನ್ ದಿನಾಚರಣೆ ಕಾರ್ಯಕ್ರಮವನ್ನು ಶಿವಪ್ರಸಾದ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆ ನಗರದ ಬೆಸ್ಕಾಂ ಕಚೇರಿ ಸೇರಿದಂತೆ ತಾಲೂಕಿನಾದ್ಯಂತ ವಿವಿಧಡೆ ಕಾರ್ಯ ನಿರ್ವಹಿಸುವ ಬೆಸ್ಕಾಂ ಲೈನ್‌ಮ್ಯಾನ್, ಸಾರ್ವಜನಿಕರ ಹಿತರಕ್ಷಣೆಯ ಜೊತೆಗೆ ನಿಗದಿತ ಅವಧಿಯಲ್ಲಿ ವಿದ್ಯುತ್ ವಿತರಣೆ ಮಾಡುವ ಮೂಲಕ ಎಲ್ಲಾ ವರ್ಗಕ್ಕೂ ಸಹಾಯ ನೀಡುತ್ತಾ ಬಂದಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಶಿವಪ್ರಸಾದ್ ತಿಳಿಸಿದರು.ಬುಧವಾರ ಕಚೇರಿ ಆವರಣದಲ್ಲಿ ಬೆಸ್ಕಾಂ ಇಲಾಖೆ ಸಿಬ್ಬಂದಿ ಹಮ್ಮಿಕೊಂಡಿದ್ದ ಪವರ್‌ಮ್ಯಾನ್ ದಿನಾಚರಣೆ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಉದ್ಘಾಟಿಸಿದ ಅವರು, ಬೆಸ್ಕಾಂ ಸಿಬ್ಬಂದಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಾಕಷ್ಟು ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಅಪಾಯದ ಅರಿವಿದ್ದರೂ ಜನಸೇವೆಗಾಗಿ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಬೆಸ್ಕಾಂ ಇಲಾಖೆ ಸಿಬ್ಬಂದಿ ವರ್ಗವನ್ನು ಅಭಿನಂದಿಸುವುದಾಗಿ ತಿಳಿಸಿದರು.
ಈ ವೇಳೆ ಚಿತ್ರದುರ್ಗ ಮತ್ತು ಹಿರಿಯೂರು ವಿಭಾಗ ವ್ಯಾಪ್ತಿಯ ಬೆಸ್ಕಾಂ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಂಜಿನಿಯರ್ ಡಿ.ದೇವರಾಜ್, ಪ್ರಾಥಮಿಕ ಸಮಿತಿ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ದುರುಗೇಶ್, ಸಿ.ನಾಗರಾಜು, ಅಜ್ಜಯ್ಯ, ವೆಂಕಟೇಶ್, ಬಾಲು, ನಾಗರಾಜು, ಚಂದ್ರಶೇಖರ್, ಲಕ್ಷ್ಮಿ, ಪದ್ಮ, ವೀಣಾ, ಕಿರಣ್‌ಕುಮಾರ್ ಮುಂತಾದವರು ಉಪಸ್ಥಿತರಿದ್ದರು.