ಸಾರಾಂಶ
ಇತ್ತೀಚೆಗೆ ಶಿವಮೊಗ್ಗದಲ್ಲಿ ಜರುಗಿದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ನಗರದ ಜವಾನ್ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಗಂಗಾವತಿ
ಇತ್ತೀಚೆಗೆ ಶಿವಮೊಗ್ಗದಲ್ಲಿ ಜರುಗಿದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ನಗರದ ಜವಾನ್ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.11 ವರ್ಷದ ವಯೋಮಿತಿ ಸ್ಪರ್ಧೆಯಲ್ಲಿ ಹೇವಾನಿಕ ಕುಮಿತೆ (ಫೈಟ್)ವಿಭಾಗದಲ್ಲಿ ಪ್ರಥಮ, ಕಟ ವಿಭಾಗದಲ್ಲಿ ದ್ವಿತೀಯ ಸ್ಥಾನ, 12 ವರ್ಷದ ಬಾಲಕಿಯರ ಕರಾಟೆ ಕುಮಿತೆ, ಕಟ ವಿಭಾಗದಲ್ಲಿ ನಿಶಾ ಫಾತಿಮಾ ಪ್ರಥಮ ಸ್ಥಾನ, 12 ವರ್ಷದ ಬಾಲಕರ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ನಿಹಾಲ್ ಪಿ.ಎನ್. ಕುಮಿತೆ (ಫೈಟ್) ವಿಭಾಗದಲ್ಲಿ ಪ್ರಥಮ ಸ್ಥಾನ ಕಟ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, 11 ವರ್ಷದ ಬಾಲಕರ ಕಲರ್ ಬೆಲ್ಟ್ ಕಟ ವಿಭಾಗದಲ್ಲಿ ವಿದ್ಯಾರ್ಥಿ ವಿಲೇಶ್ ದ್ವಿತೀಯ ಸ್ಥಾನ, 14ವರ್ಷದ ಬಾಲಕರ ಬ್ರೌನ್ ಬೆಲ್ಟ್ ವಿಭಾಗದ ಕುಮಿತೆ ವಿಭಾಗದಲ್ಲಿ ಅಫ್ಫನ್ ಪ್ರಥಮ ಸ್ಥಾನ. 18 ವರ್ಷದ ಬಾಲಕರ ಬ್ಲಾಕ್ ಬೆಲ್ಟ್ ಕುಮಿತೆ ವಿಭಾಗದಲ್ಲಿ ಸೈಯದ್ ಯಾಸಿನ್ ಪ್ರಥಮ ಸ್ಥಾನ, 30 ವರ್ಷದ 30 ವರ್ಷದ ಬಾಲಕರ ಕಲರ್ ಬೆಲ್ಟ್ ವಿಭಾಗದಲ್ಲಿ ಕುಮಿತೆ ವಿಭಾಗದಲ್ಲಿ ಅರ್ಫಾನ್ ಪ್ರಥಮ ಸ್ಥಾನ ಪಡೆದುಕೊಂಡಿದ್ದು, 7 ಬಂಗಾರ, 2 ಬೆಳ್ಳಿ ಪದಕಗಳು ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ಶ್ರೀಲಂಕಾದ ರನ್ಸಿ ಮಾಧು ಜಿ. ಲುಪ್ಪಲ್ಲೇ, ನೇಪಾಳ ಶಿಹಾನ್ ಸುರೇಂದ್ರ ಕುಮಾರ್, ಭೂತಾನ್ ಶಿಹಾನ್ ರಾಕೇಶ್ ಶೆರಿಷಾತ್, ದುಬೈ ಯುಎಇ ಶಿಹಾನ್ ಸೈಯದ್ ಉಸುಫ್ ಹಾಗೂ ಆಯೋಜಕ ಶಿಹಾನ್ ಎ ಝೆಡ್ ಮುಹೀಬ್ ವಿದ್ಯಾರ್ಥಿಗಳಿಗೆ ಮೆಡಲ್ ಹಾಗೂ ಟ್ರೋಫಿ ನೀಡಿ ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಹಿರಿಯ ತರಬೇತಿ ಅನ್ವರ್ ಪಾಷಾ, ಕರಾಟೆ ಸ್ಪೋರ್ಟ್ಸ್ ಅಧ್ಯಕ್ಷ ಜವಾನ್, ತರಬೇತಿದಾರರಾದ ಸಯ್ಯದ್ ಬಿಲಾಲ್, ಪಾಲಕರಾದ ಅಪೂರ್ವ, ಪ್ರಶಾಂತ್, ಝಾನ್ಸಿ ಲಕ್ಷ್ಮಿ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸಿದ್ದಾರೆ.