ಭಕ್ತಿ ಪೂರಕವಾಗಿ ನಡೆದ ಬೆಟ್ಟದರಸಮ್ಮನ ಜಾತ್ರಾ ಮಹೋತ್ಸವ

| Published : Mar 27 2024, 01:04 AM IST / Updated: Mar 27 2024, 01:05 AM IST

ಭಕ್ತಿ ಪೂರಕವಾಗಿ ನಡೆದ ಬೆಟ್ಟದರಸಮ್ಮನ ಜಾತ್ರಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿವಾಳ ಹಾಸಿದ ಮಡಿಯ ಮೇಲೆ ದೇವರ ಕರಗ ಹೊರಟು ಬೆಟ್ಟದ ತಪ್ಪಲಿನಲ್ಲಿರುವ ದೇವಸ್ಥಾನ ತಲಿಪಿದಾಗ ಸಂಜೆ 6 ಗಂಟೆ ಸಮೀಪಿಸಿತ್ತು. ಅರಕೆ ಹೊತ್ತು ಕೊಂಡಿದ್ದವರು ಎತ್ತಿನ ಗಾಡಿಯಲ್ಲಿ ಬ್ಯೇಲದ ಹಣ್ಣಿನ ಪಾನಕ, ಮಜ್ಜಿಗೆ, ಹೆಸರು ಬೇಳೆ ಮಾಡಿಕೊಂಡು ಜಾತ್ರೆಗೆ ಬಂದಿದ್ದ ಭಕ್ತಾದಿಗಳಿಗೆ ನೀಡುತ್ತಿದ್ದರು. ಬೀಸಿಲಿನ ತಾಪಕ್ಕೆ ಅವರು ನೀಡುವ ಮಜ್ಜಿಗೆ ಪಾನಕ ಭಕ್ತಾದಿಗಳಿಗೆ ತಂಪನ್ನು ನೀಡಿತು. ದೇವಸ್ಥಾನದ ಆವರಣದಲ್ಲಿ ಮುತ್ತೈದೆಯರು ಪರಸ್ಪರ ಅರಿಶಿನ ಕುಂಕುಮ ನೀಡಿ ತಾಂಬೂಲ ನೀಡಿದ್ದರು.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಗುಂಡಾಪುರದ ಬೆಟ್ಟದರಸಮ್ಮನ ಜಾತ್ರೆಯು ಸಹಸ್ರಾರು ಭಕ್ತಾದಿಗಳೊಂದಿಗೆ ಭಕ್ತಿ ಪೂರ್ವಕವಾಗಿ ನೆರವೇರಿತು.

ಹಲಗೂರು ಸೇರಿದಂತೆ ಸುತ್ತಮುತ್ತಲಿನ ದಳವಾಯಿಕೋಡಿಹಳ್ಳಿ, ನಂದೀಪುರ, ಕೆಂಪಯ್ಯನ ದೊಡ್ಡಿ, ಎಚ್.ಬಸವಾಪುರ, ಬಾಳೆ ಹೊನ್ನಿಗ, ದೇವಿರಹಳ್ಳಿ, ಹೊನ್ನಗನ ಹಳ್ಳಿ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಸಾಹಸ್ರರು ಭಕ್ತರು ದೇವರ ಮೆರವಣಿಗೆಯಲ್ಲಿ ಭಕ್ತರು ಪಾಲ್ಗೊಂಡು ಪೂಜೆ ಸಲ್ಲಿಸಿ ಪುನೀತರಾದರು.

ಮಧ್ಯಾಹ್ನ ಗುಂಡಾಪುರ ಗ್ರಾಮದ ಮಧ್ಯ ಭಾಗದಲ್ಲಿರುವ ಕರಗದ ಮನೆಯಲ್ಲಿ ದೇವರ ಕರಗಕ್ಕೆ ವಿವಿಧ ಪುಷ್ಟಗಳಿಂದ ಅಲಂಕಾರಿಸಿ ಹೆಬ್ಬಾರೆಗೆ ಪೂಜೆ ಸಲ್ಲಿಸಿದ ನಂತರ ದೇವರ ಗುಡ್ಡರು ಹೆಬ್ಬಾರೆ ಹೊತ್ತು ಕೆಲವು ಮನೆಗಳಿಗೆ ಹೋದರು. ಮನೆಯವರು ಹೆಬ್ಬಾರೆಗೆ ಪೂಜೆ ಸಲ್ಲಿಸಿ ಅಚ್ಚೆಂದ ನೀಡುತ್ತಾರೆ. ಅದನ್ನು ಪಡೆದ ದೇವರು ಗುಡರು ಹೆಬ್ಬಾರೆಯನ್ನು ದೇವಸ್ಥಾನಕ್ಕೆ ತಂದರು.

ಬಾಳೆಹೊನ್ನಿಗ ಗ್ರಾಮಸ್ಥರು ಪರದೇಶಿ ಕುಣಿತದಲ್ಲಿ ಬೇವಿನ ಸೊಪ್ಪನ್ನು ಹಿಡಿದು ಕುಣಿದು ಕುಪ್ಪಳಿಸುತ್ತಾ ಹರಿದ ಗೋಣಿ ಚೀಲದ ಬಟ್ಟೆಗಳನ್ನು ತೊಟ್ಟು, ಕರಡಿ ವೇಷ, ಕಾಡು ಮನುಷ್ಯ, ಮಹಿಳೆಯ ವಸ್ತ್ರಗಳನ್ನು ತೊಟ್ಟು ಕರಗದ ಮನೆಗೆ ಬಂದಾಗ ದೇವರ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಮಹಾ ಮಂಗಳಾರತಿ ನಂತರ ದೇವರ ಕರಗವನ್ನು ಬೆಟ್ಟದ ತಪ್ಪಲಿನಲ್ಲಿರುವ ದೇವಸ್ಥಾನಕ್ಕೆ ಹೊತ್ತ ಅರ್ಚಕರಾದ ವೀರಭದ್ರಪ್ಪ, ಅವರ ಜೊತೆ ಪ್ರಧಾನ ಅರ್ಚಕ ವೀರತಪ್ಪ, ಇವರು ಹೊರಟಾಗ ದೇವರಿಗೆ ಚಾಮರ ಬೀಸುತ್ತಾ ಛತ್ರಿ ಹಿಡಿದು ಜೋಡಿ ಬಸವಗಳ ಜೊತೆ ಹರಕೆ ಹೊತ್ತ ಬಾಯಿ ಬೀಗದವರು ಕಳಸ ಹೊತ್ತ ಮುತ್ತೈದೆಯವರು ಹೊರಟರು.

ಮಡಿವಾಳ ಹಾಸಿದ ಮಡಿಯ ಮೇಲೆ ದೇವರ ಕರಗ ಹೊರಟು ಬೆಟ್ಟದ ತಪ್ಪಲಿನಲ್ಲಿರುವ ದೇವಸ್ಥಾನ ತಲಿಪಿದಾಗ ಸಂಜೆ 6 ಗಂಟೆ ಸಮೀಪಿಸಿತ್ತು. ಅರಕೆ ಹೊತ್ತು ಕೊಂಡಿದ್ದವರು ಎತ್ತಿನ ಗಾಡಿಯಲ್ಲಿ ಬ್ಯೇಲದ ಹಣ್ಣಿನ ಪಾನಕ, ಮಜ್ಜಿಗೆ, ಹೆಸರು ಬೇಳೆ ಮಾಡಿಕೊಂಡು ಜಾತ್ರೆಗೆ ಬಂದಿದ್ದ ಭಕ್ತಾದಿಗಳಿಗೆ ನೀಡುತ್ತಿದ್ದರು.

ಬೀಸಿಲಿನ ತಾಪಕ್ಕೆ ಅವರು ನೀಡುವ ಮಜ್ಜಿಗೆ ಪಾನಕ ಭಕ್ತಾದಿಗಳಿಗೆ ತಂಪನ್ನು ನೀಡಿತು. ದೇವಸ್ಥಾನದ ಆವರಣದಲ್ಲಿ ಮುತ್ತೈದೆಯರು ಪರಸ್ಪರ ಅರಿಶಿನ ಕುಂಕುಮ ನೀಡಿ ತಾಂಬೂಲ ನೀಡಿದ್ದರು. ಮುಂಜಾಗ್ರತೆ ಕ್ರಮವಾಗಿ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಹಲಗೂರು ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಿದ್ದರು.