ಸಾರಾಂಶ
ಸ್ಫೂರ್ತಿ ಸೊಸೈಟಿ 5 ಸಾವಿರಕ್ಕೂ ಹೆಚ್ಚು ಷೇರುದಾರರನ್ನು ಹೊಂದಿದೆ. 2 ಕೋಟಿಗೂ ಹೆಚ್ಚು ಹಣವನ್ನು ಸದಸ್ಯರಿಂದ ಠೇವಣಿ ಇಡಲಾಗಿದೆ. 760 ಸದಸ್ಯರಿಗೆ 3 ಕೋಟಿಗೂ ಹೆಚ್ಚು ವ್ಯಾಪಾರ ಸಾಲವನ್ನು ನೀಡಲಾಗಿದೆ. ಸಂಘದ ಉತ್ತಮ ಆಡಳಿತ ಕಂಡು ಹೆಚ್ಚುವರಿ ಷೇರು ಹಣವನ್ನು ಕಟ್ಟಲು ಬಂದಿದ್ದೇನೆ. ಸಂಘದ ಅಧ್ಯಕ್ಷ ಕೆ.ಎಲ್.ಶಿವರಾಮು ಅಧ್ಯಕ್ಷತೆಯಲ್ಲಿ ಮತ್ತಷ್ಟು ಅಭಿವೃದ್ದಿಗೊಳ್ಳಲಿ.
ಕನ್ನಡಪ್ರಭ ವಾರ್ತೆ ಭಾರತೀನಗರ
ಸ್ಫೂರ್ತಿ ಪತ್ತಿನ ಸಹಕಾರ ಸಂಘ ಉತ್ತಮ ಆಡಳಿತ ನೀಡುತ್ತಿರುವ ಹಿನ್ನೆಲೆಯಲ್ಲಿ ನಾನು ಒಬ್ಬ ಷೇರುದಾರನಾಗಿದ್ದೇನೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಸಂಘದ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಂಘ 5 ಸಾವಿರಕ್ಕೂ ಹೆಚ್ಚು ಷೇರುದಾರರನ್ನು ಹೊಂದಿದೆ. 2 ಕೋಟಿಗೂ ಹೆಚ್ಚು ಹಣವನ್ನು ಸದಸ್ಯರಿಂದ ಠೇವಣಿ ಇಡಲಾಗಿದೆ. 760 ಸದಸ್ಯರಿಗೆ 3 ಕೋಟಿಗೂ ಹೆಚ್ಚು ವ್ಯಾಪಾರ ಸಾಲವನ್ನು ನೀಡಲಾಗಿದೆ ಎಂದರು.ಸಂಘದ ಉತ್ತಮ ಆಡಳಿತ ಕಂಡು ಹೆಚ್ಚುವರಿ ಷೇರು ಹಣವನ್ನು ಕಟ್ಟಲು ಬಂದಿದ್ದೇನೆ. ಸಂಘದ ಅಧ್ಯಕ್ಷ ಕೆ.ಎಲ್.ಶಿವರಾಮು ಅಧ್ಯಕ್ಷತೆಯಲ್ಲಿ ಮತ್ತಷ್ಟು ಅಭಿವೃದ್ದಿಗೊಳ್ಳಲಿ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಕೆ.ಎಲ್.ಶಿವರಾಮು ಮಾತನಾಡಿದರು. ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆಸ್ತೂರು ಬಿಳಿಯಪ್ಪ, ಕೆ.ಟಿ.ಸುರೇಶ್, ಸಂಘದ ಉಪಾಧ್ಯಕ್ಷ ರವೀಂದ್ರ, ಸಿಇಒ ಕೆ.ಎಸ್.ಅಜಯ್‌ಕುಮಾರ್, ನಿರ್ದೇಶಕ ವಿನಯ್‌ಕುಮಾರ್, ಸಿಬ್ಬಂದಿ ಕುಮಾರ್, ಜ್ಯೋತಿ, ಶಾರದ, ರಶ್ಮಿ, ಸುನಿಲ್‌ಕುಮಾರ್, ರಮೇಶ್, ರವಿ, ಆನಂದ್‌ಕುಮಾರ್, ಹನುಮಂತು ಇದ್ದರು.26 ರಂದು ಶ್ರೀಕೃಷ್ಣವೇಷ ಸ್ಪರ್ಧೆ: ಮಾಯಪ್ಪ
ಭಾರತೀನಗರ: ಭಾರತವಿಕಾಸ ಪರಿಷದ್ ಬೌದ್ಧಯಾನ ಶಾಖೆ ಹಾಗೂ ಶ್ರೀಜಯಮ್ಮ ಮಾರೇಗೌಡ ಕನ್ವೆನ್ಷನ್ ಹಾಲ್ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆ.26 ರಂದು ಶ್ರೀಕೃಷ್ಣವೇಷ ಸ್ಪರ್ಧೆಯನ್ನು ಶ್ರೀಜಯಮ್ಮ ಮಾರೇಗೌಡ ಕನ್ವೆನ್ಷನ್ ಹಾಲ್‌ನಲ್ಲಿ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು 5 ವರ್ಷದೊಳಗಿರಬೇಕು, ವಿಜೇತರಿಗೆ 5 ಬಹುಮಾನಗಳನ್ನು ನೀಡಲಾಗುವುದು. ಜೊತೆಗೆ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹ ಬಹುಮಾನ ವಿತರಿಸಲಾಗುವುದು. ಭಾಗವಹಿಸುವ ಮಕ್ಕಳ ಪೋಷಕರು ಲೋಕೇಶ್ ಸ್ಪುಡಿಯೋ ಮೊ-9740505345, ಭಾರತವಿಕಾಸ ಪರಿಷದ್‌ನ ಅಧ್ಯಕ್ಷ ಶಿವಮಾದೇಗೌಡ ಮೊ- 9900631469 ಅವರನ್ನು ಸಂಪರ್ಕಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದೆಂದು ಭಾರತ ವಿಕಾಸ ಪರಿಷದ್‌ನ ಮೈಸೂರು ಪ್ರಾಂತ ಉಪಾಧ್ಯಕ್ಷ ಎಂ.ಮಾಯಪ್ಪ ತಿಳಿಸಿದರು. ಪರಿಷದ್ ಅಧ್ಯಕ್ಷ ಶಿವಮಾದೇಗೌಡ, ಕಾರ್ಯದರ್ಶಿ ಶಿವರಾಮು, ವೈ.ಬಿ.ಶ್ರೀಕಂಠಸ್ವಾಮಿ, ಉಪಾಧ್ಯಕ್ಷ ನಾಗರಾಜು ಇದ್ದರು.