ಸಾರಾಂಶ
ತರೀಕೆರೆ, ತ್ಯಾಜ್ಯ ಪದಾರ್ಥಗಳನ್ನು ವೈಜ್ಞಾನಿಕ ಪದ್ಧತಿಯಿಂದ ಮರು ಬಳಕೆ ಮಾಡಿ ಅವುಗಳಿಂದ ಉತ್ತಮ ಗುಣ ಮಟ್ಟದ ಗೊಬ್ಬರ ತಯಾರಿಸಲಾಗುತ್ತಿದೆ. ಇದರಿಂದ ಪುರಸಭೆಗೆ ಒಳ್ಳೆಯ ಆದಾಯ ಬರುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ತಿಳಿಸಿದರು.
- ಪುರಸಭೆಯಿಂದ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪರಿಸರ ದಿನಾಚರಣೆ
ಕನ್ನಡಪ್ರಭ ವಾರ್ತೆ, ತರೀಕೆರೆತ್ಯಾಜ್ಯ ಪದಾರ್ಥಗಳನ್ನು ವೈಜ್ಞಾನಿಕ ಪದ್ಧತಿಯಿಂದ ಮರು ಬಳಕೆ ಮಾಡಿ ಅವುಗಳಿಂದ ಉತ್ತಮ ಗುಣ ಮಟ್ಟದ ಗೊಬ್ಬರ ತಯಾರಿಸಲಾಗುತ್ತಿದೆ. ಇದರಿಂದ ಪುರಸಭೆಗೆ ಒಳ್ಳೆಯ ಆದಾಯ ಬರುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ತಿಳಿಸಿದರು. ಪುರಸಭಾ ಕಾರ್ಯಾಲಯದಿಂದ ಗುರುವಾರ ಪಟ್ಟಣದ ಹೊರವಲಯದ ಪುರಸಭೆಯ ವಿಶಾಲವಾದ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ, ಪುರಸಭೆ ಸದಸ್ಯರು ವಿವಿಧ ಯಂತ್ರೋಪಕರಣಗಳ ಕಾರ್ಯ ಪರಿಶೀಲನೆ, ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಜಾತಿಯ ಗಿಡ ನೆಡುವಿಕೆ ಹಾಗೂ ಸಾರ್ವಜನಿಕರ ಸೇವಗೆ ಎರಡು ನೂತನ ಟಿಪ್ಪರ್ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪುರಸಭೆ ಸದಸ್ಯರು ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ, ಘಟಕದ ವಿವಿಧ ಯಂತ್ರೋಪಕರಣಗಳ ಕಾರ್ಯ ಪರಿಶೀಲಿಸಿರುವುದು, ಸಾರ್ವಜನಿಕರ ಸೇವೆಗೆ ನೂತನ ಟಿಪ್ಪರ್ ನೀಡಿರುವುದು ಎಲ್ಲರಿಗೂ ಸಂತೋಷ ತಂದಿದೆ. ಪುರಸಭೆ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಪೌರಕಾರ್ಮಿಕರ ಶ್ರಮದಿಂದ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಿ ಉತ್ತಮ ಪರಿಸರ ಕಾಪಾಡಿಕೊಳ್ಳಲಾಗಿದೆ. ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ವಾಸ ಮಾಡಲು ಅನುಕೂಲ ಕಲ್ಪಿಸಲಾಗಿದೆ. ತ್ಯಾಜ್ಯ ಪದಾರ್ಥಗಳನ್ನು ವೈಜ್ಞಾನಿಕ ರೀತಿಯ ಮರು ಬಳಕೆಯಿಂದ ಉತ್ತಮ ಗುಣಮಟ್ಟದ ಗೊಬ್ಬರ ತಯಾರಿಸ ಲಾಗುತ್ತಿದೆ. ಇದರಿಂದ ಪುರಸಭೆಗೂ ಆದಾಯ ಸಿಗಲಿದೆ ಎಂದರು.ಪುರಸಭೆ ಸದಸ್ಯ ಪರಮೇಶ್ ಮಾತನಾಡಿ, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಅವರು ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಉತ್ತಮವಾದ ಪರಿಸರ ಇದೆ ಎಂದು ತಿಳಿಸಿದರು.ಪುರಸಭೆ ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ ಪಟ್ಟಣದ ಎಲ್ಲ ವಾರ್ಡುಗಳಲ್ಲಿ ವಾತಾವರಣಕ್ಕೆ ಪೂರಕ ಗಿಡಗಳನ್ನು ಬೆಳೆಸಬೇಕು ಎಂದರು.ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಜಗತ್ತು ಇಂದು ಹವಾಮಾನದ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ದೆಹಲಿ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಬಿಸಿಗಾಳಿಗೆ ಸಾವು ಸಂಭವಿಸುತ್ತಿದೆ. ಪ್ಲಾಸ್ಟಿಕ್.ನ ಹಾನಿಕಾರಕ ಅನಿಲಗಳು ಗಾಳಿಯಲ್ಲಿ ಸೇರಿ, ಹಸಿರು ಮನೆ ಹಾನಿಕಾರಕರ ಅನಿಲಗಳ ಹೊರ ಸೂಸುತ್ತಿದೆ. ಪರಿಸರ ಅನೈರ್ಮಲ್ಯಗೊಂಡಿದೆ, ರಾಷ್ಟ್ರೀಯ ಅರಣ್ಯ ನೀತಿ ಅನ್ವಯ ಹಸಿರು ಉಳಿದಿಲ್ಲ, ಮುಂಬರುವ ದಿನಗಳಲ್ಲಿ ಮಾನವ ಸ್ವಾಸ್ಥ್ಯ ಇನ್ನು ಹದಗೆಡಲಿದೆ. ಪುರಸಭೆ ಸಣ್ಣ ಪ್ರಯತ್ನದಿಂದ ಘನತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದರು.ಪುರಸಭೆ ಸದಸ್ಯೆ ಆಶಾ ಆರುಣ್ ಕುಮಾರ್ ಮಾತನಾಡಿ ಇಲ್ಲಿ ಸಭೆ ಸೇರಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.ಪರಿಸರ ಅಭಿಯಂತರರಾದ ತಾಹಿರಾ ತಸ್ತೀಮ್ ಮಾತನಾಡಿ ಪುರಸಭೆಯಿಂದ ಸ್ಥಳೀಯ ಸಂಸ್ಥೆಗಳಲ್ಲಿ ರಾಜ್ಯದ ಮೊಟ್ಟ ಮೊದಲ ಬಾರಿಗೆ ಕಪ್ಪು ಸೈನಿಕ ಹುಳಗಳ ಲಾರ್ವ ಉತ್ಪಾದನಾ ಘಟಕವನ್ನು ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸ್ಥಾಪಿಸಲಾಗಿದ್ದು ಇದರ ನಿರ್ವಹಣೆಗೆ ಸಾರ್ವಜನಿಕರು ಕಸದ ಮೂಲದಲ್ಲೇ ವಿಂಗಡಿಸಿ ಟಿಪ್ಪರ್ ಗಳಿಗೆ ನೀಡಿದಲ್ಲಿ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬಹುದು ಎಂದು ವಿನಂತಿಸಿದರು.ಪುರಸಭೆ ಸದಸ್ಯರು, ಪುರಸಭೆ ಹಿರಿಯ ಆರೋಗ್ಯಾಧಿಕಾರಿ ಮಹೇಶ್ವರಪ್ಪ, ಪುರಸಭೆ ವ್ಯವಸ್ಥಾಪಕರಾದ ವಿಜಯಕುಮಾರ್, ಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.20ಕೆಟಿಆರ್.ಕೆ.4ಃ
ತರೀಕೆರೆಯಲ್ಲಿ ಪುರಸಭಾ ಕಾರ್ಯಾಲಯದಿಂದ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಏರ್ಪಡಿಸಿದ್ದ ಪರಿಸರ ದಿನಾಚರಣೆಯಲ್ಲಿ ವಿವಿಧ ಗಿಡಗಳನ್ನು ನೆಡಲಾಯಿತು. ಪುರಸಭೆ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ , ಪರಿಸರ ಅಬಿಯಂತರರಾದ ತಾಹಿರಾ ತಸ್ನೀಮ್, ಹಿರಿಯ ಆರೋಗ್ಯಾಧಿಕಾರಿ ಮಹೇಶ್ವರಪ್ಪ, ಪುರಸಭೆ ವ್ಯವಸ್ಥಾಪಕ ವಿಜಯಕುಮಾರ್ ಮತ್ತಿತರರು ಇದ್ದರು.