ಸಾರಾಂಶ
ತರೀಕೆರೆ, ಲಕ್ಕವಳ್ಳಿ ಬಳಿಯ ಭದ್ರಾ ಅಣೆಕಟ್ಟಿಯಲ್ಲಿ ಜಖಂ ಆಗಿದ್ದ ರಿವರ್ ಗೇಟ್ ನ್ನು ದುರಸ್ತಿ ಪಡಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ಭದ್ರಾ ಜಲಾಶಯದ ಇ.ಇ.ರವಿಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಭದ್ರಾ ಅಣೆಕಟ್ಟು ಗೇಟ್‌ಗೆ 30 ಜನ ತಜ್ಞರಿಂದ ದುರಸ್ತಿ ಕಾಮಗಾರಿ
ಕನ್ನಡಪ್ರಭ ವಾರ್ತೆ, ತರೀಕೆರೆಲಕ್ಕವಳ್ಳಿ ಬಳಿಯ ಭದ್ರಾ ಅಣೆಕಟ್ಟಿಯಲ್ಲಿ ಜಖಂ ಆಗಿದ್ದ ರಿವರ್ ಗೇಟ್ ನ್ನು ದುರಸ್ತಿ ಪಡಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ಭದ್ರಾ ಜಲಾಶಯದ ಇ.ಇ.ರವಿಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಕೆಟ್ಟಿದ್ದ ಗೇಟ್ ನ್ನು ಮುಚ್ಚಲು ಅಗತ್ಯ ದುರಸ್ತಿ ಮಾಡಲಾಗುತ್ತಿದೆ. ಇದರಿಂದ ನದಿಗೆ ನೀರು ಹರಿದುಹೋಗುತ್ತಿರುವುದನ್ನು ತಡೆಗಟ್ಟಲಾಗುವುದು ಎಂದ ಅವರು, ರಾಜ್ಯದ ವಿವಿಧ ಬಾಗಗಳಿಂದ ಸುಮಾರು 30 ಜನ ಅಣೆಕಟ್ಟು ತಜ್ಞರಿಂದ ಗೇಟ್ ಮುಚ್ಚುವ ಕಾಮಗಾರಿ ಕಾರ್ಯ ನಿರ್ವಹಿಸುತ್ತಿದ್ದು ಶೇ.98 ರಷ್ಟು ಗೇಟ್ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.ಗೇಟ್ ಸಂಪೂರ್ಣ ಮುಚ್ಚಲಾಗದೆ ಸುಮಾರು 8 ರಿಂದ 9 ಇಂಚು ಅಂತರವಿದ್ದು, ಇದನ್ನು ಬಂದ್ ಮಾಡುವ ಕಾಮಗಾರಿ ಯೂ ಶೀಘ್ರದಲ್ಲಿಯೇ ಮುಗಿಯಲಿದ್ದು ನೀರು ನದಿಗೆ ಹರಿದುಹೋಗುವುದನ್ನು ತಡೆಯಲಾಗುವುದು ಎಂದು ವಿವರಿಸಿದರು.
ಅಣೆಕಟ್ಟು ರಿವರ್ ಗೇಟ್ ಜಖಂ ಆಗಿ ನೀರು ಪೋಲಾಗಿ ಹೊಳೆಗೆ ಹರಿಯುತ್ತಿದ್ದುದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ನೀರು ವ್ಯರ್ಥವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಡಿಸಿ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡು ಕೂಡಲೇ ಜಖಂ ಗೇಟನ್ನು ದುರಸ್ತಿ ಪಡಿಸಬೇಕೆಂದು ಆಗ್ರಹಿಸಿದ್ದರು.6ಕೆಟಿಆರ್.ಕೆ.10ಃ
ತರೀಕೆರೆ ಸಮೀಪದ ಲಕ್ಕವಳ್ಳಿ ಬಳಿಯ ಭದ್ರಾ ಅಣೆಕಟ್ಟೆಯಲ್ಲಿ ಜಖಂ ಆದ ಗೇಟ್.ನ್ನು ಅಣೆಕಟ್ಟು ತಜ್ಞರು ದುರಸ್ತಿ ಪಡಿಸುತ್ತಿರುವುದು.