* ತರೀಕೆರೆ ಎಲ್ಲಾ ಹಳ್ಳಿಗಳಿಗೆ ಭದ್ರಾ ಡ್ಯಾಂ ನೀರು: ಜಿ.ಎಚ್.ಶ್ರೀನಿವಾಸ್

| Published : Mar 16 2024, 01:48 AM IST

* ತರೀಕೆರೆ ಎಲ್ಲಾ ಹಳ್ಳಿಗಳಿಗೆ ಭದ್ರಾ ಡ್ಯಾಂ ನೀರು: ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ ಪಟ್ಟಣ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಭದ್ರಾ ಡ್ಯಾಂನಿಂದ ೨೪ x೭ ಮಾದರಿಯಲ್ಲಿ ಶುದ್ದ ಕುಡಿಯುವ ನೀರು ದೊರೆಯಲಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ನೀರು ಶುದ್ದೀ ಕರಣ ಘಟಕ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ತರೀಕೆರೆ ಪಟ್ಟಣ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಭದ್ರಾ ಡ್ಯಾಂನಿಂದ ೨೪ x೭ ಮಾದರಿಯಲ್ಲಿ ಶುದ್ದ ಕುಡಿಯುವ ನೀರು ದೊರೆಯಲಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಲಕ್ಕವಳ್ಳಿ ಸಮೀಪ ತರೀಕೆರೆ ಮತ್ತು ಅಜ್ಜಂಪುರ ಪಟ್ಟಣ ಸೇರಿ ಅಜ್ಜಂಪುರ ತಾಲೂಕಿನ ೧೭೨ ಗ್ರಾಮಗಳಿಗೆ, ಹೊಸದುರ್ಗ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಶುದ್ಧ ನೀರು ಪೂರೈಸುವ ಒಟ್ಟು ೨೪೯ ಕೋಟಿ ವೆಚ್ಚದ ನೀರು ಶುದ್ದೀ ಕರಣ ಘಟಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಭದ್ರಾ ಜಲಾಶಯದಲ್ಲಿ ಕುಡಿವ ನೀರಿನ ಯೋಜನೆಗೆ ಒಂದೂವರೆ ಟಿಎಂಸಿ ನೀರನ್ನು ಮೀಸಲಿರಿಸಲಾಗಿದೆ. ಕಾಮಗಾರಿ ಜೂನ್ ೨೫ಕ್ಕೆ ಮುಕ್ತಾಯವಾಗಲಿದೆ. ಮೊದಲನೇ ಹಂತದಲ್ಲಿ ೫೫ ಓವರ್ ಹೆಡ್ ಟ್ಯಾಂಕ್, ಎರಡನೇ ಹಂತದಲ್ಲಿ ೫೫ ಓವರ್ ಹೆಡ್ ಟ್ಯಾಂಕ್‌ಗಳನ್ನು ನೂತನವಾಗಿ ನಿರ್ಮಿಸಲಾಗುವುದು. ಮೊದಲು ನಮ್ಮ ಭಾಗಕ್ಕೆ ನೀರು ಕೊಟ್ಟು ನಂತರ ಬೇರೆ ತಾಲೂಕುಗಳ ಗ್ರಾಮಗಳಿಗೆ ನೀರು ಪೂರೈಕೆಯಾಗಲಿದೆ ಎಂದು ಹೇಳಿದರು.ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಈ ಯೋಜನೆ ಕಳೆದ ಬಾರಿ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಮಂಜೂರಾಗಿದೆ. ಹೊಸದುರ್ಗ ಭಾಗದ ಜನತೆಗೆ ಕುಡಿಯುವ ನೀರು ಸಿಗಲು ಜನರ ಸಹಕಾರ ಅಗತ್ಯ. ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ಶಾಸಕರು ಸಭೆ ನಡೆಸಿ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಮುಕ್ತಾಯಗೊಳ್ಳಲು ಇರುವ ತೊಡಕುಗಳನ್ನು ನಿವಾರಿಸಲು ಚಿಂತಿಸಲಾಗಿದೆ ಎಂದು ಹೇಳಿದರು.

ಅಂತರ್ಜಲ ಕುಸಿದಿದ್ದು, ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ನಮ್ಮ ಭಾಗದ ಜನತೆಗೆ ಜೀವಜಲ ಕೊಡಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ, ಭದ್ರಾ ಜಲಾಶಯದ ತಟದಲ್ಲಿರುವ ಲಕ್ಕವಳ್ಳಿ ಹೋಬಳಿಯ ಜನತೆಗೆ ಸುಮಾರು ೫೦ ವರ್ಷಗಳಿಂದ ಶುದ್ದ ಕುಡಿಯುವ ನೀರು ದೊರಕಿಲ್ಲ. ನಮಗೆ ನೀರು ಕೊಟ್ಟು ನೀವೂ ನೀರು ತೆಗೆದುಕೊಂಡು ಹೋಗಿ ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ ಎಂದರು.

ಲಕ್ಕವಳ್ಳಿ ಗ್ರಾ.ಪಂ. ಅಧ್ಯಕ್ಷೆ ಮುಬೀನ್‌ತಾಜ್, ತರೀಕೆರೆ ಪುರಸಭೆ ಅಧ್ಯಕ್ಷ ಪರಮೇಶ್, ಕೆಪಿಸಿಸಿ ಸದಸ್ಯ ನಟರಾಜ್, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಸದಸ್ಯರಾದ ಲೋಕೇಶ್, ರಂಗನಾಥ್, ಕುಮಾರ್, ಕಾಂಗ್ರೆಸ್ ಮುಖಂಡರಾದ ರವಿಕಿಶೋರ್, ಎಚ್.ಯು. ಫಾರುಕ್, ದಯಾನಂದ್, ಎಚ್.ಎನ್.ಮಂಜುನಾಥ್, ಗುರುಮೂರ್ತಿ, ಅನ್ಬು, ರಾಘವೇಂದ್ರ, ರಾಮಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.

15ಕೆಟಿಆರ್.ಕೆ.2ಃ

ತರೀಕೆರೆ ತಾಲೂಕಿನ ತಾಲೂಕಿನ ಲಕ್ಕವಳ್ಳಿ ಸಮೀಪ ೨೪೯ ಕೋಟಿ ವೆಚ್ಚದ ನೀರು ಶುದ್ದೀಕರಣ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ - ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ನೆರವೇರಿಸಿದರು.