ಸಾರಾಂಶ
ಪುರಸಭೆ ಸಭಾಂಗಣದಲ್ಲಿ ಆಯವ್ಯಯ-ಸಾಮಾನ್ಯ ಸಭೆ
ಕನ್ನಡಪ್ರಭ ವಾರ್ತೆ, ಬೀರೂರು.ಕಳೆದ 20 ದಿನಗಳಿಂದ ಪಟ್ಟಣದಲ್ಲಿ ಸಾರ್ವಜನಿಕರಿಗೆ ಭದ್ರಾ ಕುಡಿಯುವ ನೀರು ಸರಬರಾಜಲ್ಲಿ ವ್ಯತ್ಯಯವಾಗಿದ್ದರೂ ಮುಖ್ಯಾಧಿಕಾರಿಗಳಾಲಿ, ಪುರಸಭೆ ಇಂಜಿನಿಯರ್ ಮಾಹಿತಿ ನೀಡದ ಪರಿಣಾಮ ನಾಗರಿಕರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಹಿರಿಯ ಸದಸ್ಯ ಬಿ.ಕೆ.ಶಶಿಧರ್ ಆರೋಪಿಸಿದರು. ಪುರಸಭೆಯಲ್ಲಿ ಗುರುವಾರ ನಡೆದ ಬಜೆಟ್ ಮತ್ತು ಸಾಮಾನ್ಯ ಸಭೆ ಆರಂಭದಲ್ಲಿ ಮಾತನಾಡಿ, 20 ದಿನಗಳಿಂದ ಕುಡಿಯುವ ನೀರಿಲ್ಲದೆ ಜನ ಪರಿತಪಿಸುತ್ತಿದ್ದರೂ ಪುರಸಭೆ ತಲೆಕೆಡಿಸಿಕೊಂಡಿಲ್ಲ ಯಾಕೆ?, ದುಗ್ಲಾಪುರದ ಬಳಿ ಪಕ್ಕದ ಹೊಸದುರ್ಗಕ್ಕೆ ನೀರು ತೆಗೆದುಕೊಂಡು ಹೋಗಲು ನಡೆಯುತ್ತಿರುವ ಪೈಪ್ ಲೈನ್ ಕಾಮಗಾರಿ ಭದ್ರಾ ಕುಡಿಯುವ ನೀರಿನ ಪೈಪ್‌ಲೈನ್ ಪಕ್ಕ ದಲ್ಲೇ 1ಅಡಿ ಜಾಗದಲ್ಲಿ ಹಾದು ಹೋಗಿದ್ದು ಅಧಿಕಾರಿಗಳು ಸ್ಥಳ ಪರಿಶೀಲಿಸದ ಪರಿಣಾಮ ಕಾಮಗಾರಿ ಸಂದರ್ಭದಲ್ಲಿ ಈ ಪೈಪ್ ಲೈನ್ ಹೊಡೆದು ಹೋಗಿದೆ ನಿಮ್ಮ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಆಕ್ಷೇಪಿಸಿದರು.ಕಡೂರು-ಬೀರೂರು ಪೈಪ್ ಲೈನ್ ಹಾದುಹೋದ ಅಕ್ಕ-ಪಕ್ಕದ ಸುಮಾರು 1 ಮೀಟರ್ ಜಾಗದಲ್ಲಿ ಯಾವುದೇ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವಂತಿಲ್ಲ. ಹಾಗಿದ್ದೂ ಈ ಬಗ್ಗೆ ಎಚ್ಚೆತ್ತು ಕೊಳ್ಳದೇ ನೀವು ಸದಸ್ಯರನೆಲ್ಲ ಬಲಿಕೊಡಲು ಕಾಯುತ್ತಿದ್ದೀರಾ ಎಂದು ಕಿಡಿಕಾರಿದರು.ಮುಖ್ಯಾಧಿಕಾರಿ ಪ್ರಕಾಶ್ ಉತ್ತರಿಸಿ, ಹೊಸದುರ್ಗ ಪೈಪ್ ಲೈನ್ ಕಾಮಗಾರಿ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮಗೆ ಕುಡಿಯುವ ತೊಂದರೆ ಯಾದರೆ ಕಾಮಗಾರಿ ನಿಲ್ಲಸುತ್ತೇವೆ ಎಂದರು.ಪುರಸಭೆ ಅಧ್ಯಕ್ಷರ ಗಮನಕ್ಕೆ ತಾರದೇ ಅಧಿಕಾರಿಗಳು ಕಾಲಹರಣ ಮಾಡಿ, ಸಾರ್ವಜನಿಕರಿಗೆ ವಂಚಿಸಿದ್ದೀರಿ. ನೀವು ಪಡೆಯುವ ಸಂಬಳಕ್ಕಾದರೂ ನಿಯತ್ತಾಗಿ ಕೆಲಸ ಮಾಡಿ. ಪುರಸಭೆ ವ್ಯಾಪ್ತಿಯಲ್ಲಿ ಎಷ್ಟು ಕೊಳವೆ ಬಾವಿಗಳಿವೆ ಎನ್ನುವ ಮಾಹಿತಿಯೇ ಇಲ್ಲದೇ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಬೀರೂರು ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಉತ್ತರ ನೀಡಿ, ಮತದಾರರಿಗೆ ಮುಖ ತೋರಿಸ ದಂತೆ ಮಾಡಿದ್ದೀರಾ ಎಂದು ಸದಸ್ಯ ಶಶಿಧರ್ ಗರಂ ಆದರು. ಸದಸ್ಯ ಬಿ.ಆರ್.ಮೋಹನ್ ಕುಮಾರ್, ಪುರಸಭೆಯಲ್ಲಿ ಸದಸ್ಯರಿಗೆ ಗೌರವವಿಲ್ಲ, ದಲ್ಲಾಳಿಗಳ ಕೆಲಸ ಮಾಡುತ್ತೀರಿ. ಎಂದಾಗ ಧ್ವನಿಗೂಡಿಸಿದ ಸದಸ್ಯೆ ಜ್ಯೋತಿ ವೆಂಕಟೇಶ್ ಅಧಿಕಾರಿಗಳು ದಲ್ಲಾಳಿಗಳಾಗಿದ್ದಾರೆ. ಅವರಿಗೆ ಬೇಕಾದವರಿಗೆ ಕೆಲಸ ಮಾಡಿ ಕೊಡುವಾಗ ಪುರಸಭೆ ಹೇಗೆ ಉದ್ದಾರವಾಗುತ್ತದೆ. ಮೊದಲು ಇಂತಹ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣಹಾಕಬೇಕು ಎಂದರು.ಪುರಸಭೆ ಸದಸ್ಯ ಲೋಕೇಶಪ್ಪ ಮಾತನಾಡಿ, ಪುರಸಭೆ ಇಂಜಿನಿಯರ್ ಕೇಂದ್ರ ಸ್ಥಾನದಲ್ಲಿ ಇದುವರೆಗು ಇಲ್ಲ, ಯಾವುದೇ ಕಾಮಗಾರಿ ಮಾಹಿತಿಯನ್ನು ಸದಸ್ಯರಿಗೆ ತಿಳಿಸೋದಿಲ್ಲ, ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರು.ಸದಸ್ಯ ಜಿಮ್ ರಾಜು ಮಾತನಾಡಿ, ಪುರಸಭೆಯಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಬರುವುದಿಲ್ಲ. ಕೆಲವೊಮ್ಮೆ ನಾಗರಿಕರು ಪುರಸಭೆ ಕೆಲಸಗಳಿಗಾಗಿ ಕಾದು ಹೈರಾಣಾಗಿ ಹೋಗುತ್ತಿದ್ದಾರೆ ಎಂದು ದೂರಿದರು. ಪುರಸಭೆ ಆಸ್ತಿಯಾದ ಮಾರ್ಗದ ಕ್ಯಾಂಪಿನಲ್ಲಿ ಎಸ್.ಎಂ.ಕೃಷ್ಣ ಸಮುದಾಯ ಭವನದ ಆದಾಯದ ಲೆಕ್ಕವನ್ನುಹಿರಿಯ ಆರೋಗ್ಯ ನೀರಿಕ್ಷಕರು 2016ರಿಂದಲೂ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಆರೋಗ್ಯ ನಿರೀಕ್ಷಕ ಲಕ್ಷ್ಮಣ್ 4ವರ್ಷದ ಮಾಹಿತಿ ಇದೆ. ಉಳಿದಿದೆಲ್ಲಾವನ್ನು ಪುರಸಭೆ ನಿಧಿಗೆ ಜಮೆ ಮಾಡಲಾಗಿದೆ ಎಂದರು.ವೈಯುಕ್ತಿಕ ಚರ್ಚೆ ಬೇಡಾ: ನಮ್ಮ ವಾರ್ಡಿನಲ್ಲಿ ಪುರಸಭೆ ಸದಸ್ಯೆಯೊಬ್ಬರು ಪುರಸಭೆ ಜಾಗದಲ್ಲಿ ಕೊಳವೆ ಬಾವಿ ಕೊರೆಸಿದ್ದಾರೆ. ಜೊತೆಗೆ ಚರಂಡಿ ಜಾಗದಲ್ಲಿ ಹೊಸದಾಗಿ ಮನೆಕಟ್ಟಿಸಿ ಅದನ್ನು ಮುಚ್ಚಿರುವ ಪರಿಣಾಮ ನೀರು ಹರಿಯಲು ತೊಂದರೆ ಯಾಗಿರುವ ವಿಚಾರವನ್ನು ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ ಎಂದು 19ನೇ ವಾರ್ಡ ಸದಸ್ಯೆ ಜ್ಯೋತಿ ವೆಂಕಟೇಶ್ ಪ್ರಶ್ನಿಸಿದರು.ಈ ವಿಚಾರವಾಗಿ ನೀವು ಕೋರ್ಟ ಮೆಟ್ಟಲೇರಿದ್ದೀರಾ, ಕೋರ್ಟ ಗೆ ಬೇಕಾದ ದಾಖಲೆ ಪತ್ರ ಪುರಸಭೆ ಒದಗಿಸುತ್ತದೆ. ಕಟ್ಟಿರುವವ ಮಾಲೀಕರು ಪುರಸಭೆಗೆ 2 ಪಟ್ಟು ಹಣ ಕಟ್ಟಿರುವ ಪರಿಣಾಮ ನಾವು ಮೂಲಭೂತ ಸೌಕರ್ಯ ಪತ್ರಿಯೊಬ್ಬ ಪ್ರಜೆಗೆ ನೀಡಬೇಕಾಗುತ್ತದೆ ಎಂದು ಮುಖ್ಯಾಧಿಕಾರಿ ಪ್ರಕಾಶ್ ಉತ್ತರಿಸಿದರು.ಈ ಹಂತದಲ್ಲಿ ಧ್ವನಿಗೂಡಿಸಿದ ಸದಸ್ಯ ಶಶಿಧರ್, ನಿಮ್ಮ ವೈಯಕ್ತಿಕ ವಿಚಾರಗಳನ್ನು ಸಭೆಯಲ್ಲಿ ಮಂಡಿಸಿ ಸಭೆ ಸಮಯ ಯಾರು ಹಾಳು ಮಾಡುವಂತಿಲ್ಲ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಾನಿಕ್ ಭಾಷ, ರವಿಕುಮಾರ್, ಭಾಗ್ಯಲಕ್ಷ್ಮಿ ಮೋಹನ್, ಸಮಿಉಲ್ಲ, ಸುಮಿತ್ರಾ ಕೃಷ್ಣಮೂರ್ತಿ, ಮಾಜಿ ಉಪಾಧ್ಯಕ್ಷೆ ಮೀನಾಕ್ಷಮ್ಮ, ನಂದಿನಿ ರುದ್ರೇಶ್, ಶಾರದ ರುದ್ರಪ್ಪ, ಜ್ಯೋತಿಕುಮಾರ್ ಸೇರಿದಂತೆ ಮತ್ತಿತರ ಸದಸ್ಯರು ಇದ್ದರು.20 ಬೀರೂರು 2ಕಡೂರು -ಬೀರೂರು ಗೆ ಭದ್ರಾ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್‌ಗೆ ಅಡ್ಡಾಲಾಗಿ ಹೋಗಿರುವ ಹೊಸದುರ್ಗ ಪೈಪ್ ಲೈನ್ 20 ಬೀರೂರು 3ಕಳೆದ 22 ದಿನಗಳಿಂದ ಭದ್ರಾ ಕುಡಿಯುವ ನೀರಿನ ಯೋಜನೆ ಪೈಪ್ ತರೀಕೆರೆ ತಾಲೂಕು ದುಗ್ಲಾಪುರದ ಬಳಿ ಹೊಡೆದು ಹೋಗಿ ರಿಪೇರಿ ಮಾಡುತ್ತಿರುವುದು.