ಸಾರಾಂಶ
ಕಳಪೆ ಕಾಮಗಾರಿಯಿಂದ ಅಣೆಕಟ್ಟೆ ಗೇಟ್‌ಗೆ ಹಾನಿ । ಅಧಿಕಾರಿ, ಸಲಹೆಗಾರರ ಅಮಾನತ್ತಿಗೆ ಆಗ್ರಹ
ಕನ್ನಡಪ್ರಭ ವಾರ್ತೆ, ತರೀಕೆರೆರೈತರ ಜೀವನ ನಾಡಿ ಕುಡಿಯುವ ನೀರಿನ ಅಕ್ಷಯ ಭದ್ರ ಡ್ಯಾಮ್ ನಲ್ಲಿ ಡ್ರಿಪ್ ಯೋಜನೆಯಡಿ ಕೈಗೊಂಡ ಕಳಪೆ ಕಾಮಗಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಣೆಕಟ್ಟೆ ಗೇಟ್ ಹಾಕಲಾಗದೆ ನೀರು ವ್ಯರ್ಥವಾಗುತ್ತಿದ್ದು, ಮುಂದಿನ ದಿನಗಳಲ್ಲಿ ರೈತರು ಹಾಗೂ ಕುಡಿಯುವ ನೀರಿಗೆ ಆತಂಕ ಎದುರಾಗಿದೆ. ಈ ಸಂಬಂಧ ಅಧಿಕಾರಿ ಹಾಗೂ ಸಲಹೆಗಾರ ಸದಸ್ಯರನ್ನು ಅಮಾನತ್ತು ಮಾಡಿ ವಿಚಾರಣೆಗೆ ಒಳಪಡಿಸುವಂತೆ ತರೀಕೆರೆ ಜೆಡಿಎಸ್ ಅಧ್ಯಕ್ಷ, ಭದ್ರ ಹಿತರಕ್ಷಣ ಸಮಿತಿ ಸದಸ್ಯ ಎಂ. ನರೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ
ಶುಕ್ರವಾರ ಜೆಡಿಎಸ್ ಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದು ಅಣೆಕಟ್ಟೆಯ ತೆಗೆದ ಗೇಟ್ ಹಾಕಲು ಬಾರದ ಪರಿಸ್ಥಿತಿಗೆ ತಲುಪಿದೆ. ಇದಕ್ಕೆ ಡ್ರಿಪ್ ಯೋಜನೆ ಅಡಿ ಕೈಗೊಂಡ ಕಳಪೆ ಕಾಮಗಾರಿ ಸಾಕ್ಷಿ. ಬೇಸಿಗೆಯಲ್ಲಿ ಇವುಗಳನ್ನು ಪರೀಕ್ಷಿಸಿ ಸರಿ ಮಾಡಿಕೊಳ್ಳ ಬೇಕಾದ ಅಧಿಕಾರಿಗಳು. ಮಳೆಗಾಲದಲ್ಲಿ ಹಾಗೂ ನದಿಗೆ ಒಳಹರಿವು ಬರುವ ಸಂದರ್ಭದಲ್ಲಿ ಪರೀಕ್ಷಿಸಲು ಹೋಗಿ ಗೇಟ್ ಹಾಕಲು ಆಗದೆ ನೀರು ಪೋಲಾಗುತ್ತಿದೆ ಎಂದರು.ಇದರಿಂದ ಪ್ರತಿದಿನ ನಾಲ್ಕು ಸಾವಿರ ಕ್ಯೂಸೆಕ್ಸ್ ನೀರು ನದಿಯಿಂದ ಹೊರಹರಿಯುತ್ತಿದ್ದು, ಮುಂದಿನ ದಿನಗಳಲ್ಲಿ ರೈತರ ಬೆಳೆಗಳಿಗೆ ಕುಡಿಯುವ ನೀರಿಗೂ ತೊಂದರೆ ಎದುರಾಗಲಿದೆ. ಈ ನಡುವೆ ಸರಾಸರಿ ಮಳೆಯಲ್ಲೂ ಕೊರತೆ ಇದೆ ಎಂದರುಭದ್ರ ಹಿತರಕ್ಷಣ ಸಮಿತಿಯಿಂದ ಸೆಂಟ್ರಲ್ ವಾಟರ್ ಬೋರ್ಡ್ ಕಮಿಷನ್, ಕರ್ನಾಟಕ ರಾಜ್ಯ ಅರಣ್ಯ ಸಂರಕ್ಷಣಾ ಸಮಿತಿ, ಮುಖ್ಯಮಂತ್ರಿ ಹಾಗೂ ನೀರಾವರಿ ಮಂತ್ರಿಗಳಿಗೂ ದೂರು ನೀಡಿ. ಸಂಬಂಧಪಟ್ಟ ಕಾಮಗಾರಿ ಬಿಲ್ ಪಾವತಿಸದಂತೆ ಮನವಿ ಮಾಡಲಾಗಿತ್ತು. ಆದರೆ, ಭದ್ರಾ ಡ್ಯಾಮ್ ಸಲಹೆಗಾರರಾಗಿ ನಿಯೋಜಿಸಿರುವ ನಿವೃತ್ತ ಚೀಫ್ ಇಂಜಿನಿಯರ್ ಮಾಧವ ಅವರ ಸಲಹೆ ಮೇರೆಗೆ ಗುತ್ತಿಗೆದಾರರಿಗೆ ಬಿಲ್ ಮೊತ್ತವನ್ನು ಪಾವತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಕ್ಷಣ ಈ ಸಲಹೆ ನೀಡಿದ ಮಾದವ ಅವರನ್ನು ಬಂಧಿಸಬೇಕು. ಬಿಲ್ ನೀಡಿದ ಸಿಇಒ ಎಸ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ಕಾಶಯ್ಯ, ತಾಪಂ ಮಾಜಿ ಅಧ್ಯಕ್ಷ ವಿಜಯ ನಾಯಕ್. ಡಿಎಸ್ಎಸ್ ಸಂಚಾಲಕ ರಾಮಚಂದ್ರ, ಮುಖಂಡರಾದ ಜಯರಾಮಣ್ಣ ಉಪಸ್ಥಿತರಿದ್ದರು.
5ಕೆಟಿಆರ್.ಕೆ.8ಃತರೀಕೆರೆಯಲ್ಲಿ ಜೆಡಿಎಸ್ ಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಹಾಗೂ ಭದ್ರ ಹಿತರಕ್ಷಣ ಸಮಿತಿ ಸದಸ್ಯ ಎಂ ನರೇಂದ್ರ ಮಾತನಾಡಿದರು. ಮಂಜುನಾಥ್ ಕಾಶಯ್ಯ ಬಿಜೆಪಿ ಮುಖಂಡ ವಿಜಯ ನಾಯಕ್, ಎಸ್ಎಸ್ ಸಂಚಾಲಕ ರಾಮಚಂದ್ರ ಮತ್ತಿತರರು ಇದ್ದರು.