ಭಗತ್ ಸಿಂಗ್ ಧೈರ್ಯ ಯುವಕರಿಗೆ ಮಾದರಿ: ಪೂಜಾರ್‌

| Published : Mar 24 2024, 01:31 AM IST

ಸಾರಾಂಶ

ಪರಕೀಯರಿಂದ ನಲುಗಿದ ದೇಶದ ಜನರ ವಿಮೋಚನೆಗೆ ಹೋರಾಟ ನಡೆಸುವ ಮೂಲಕ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಸೇನಾನಿ ಭಗತ್‌ಸಿಂಗ್‌ ಅವರು ರಾಜಿರಹಿತ ಹೋರಾಟದ ಮೇರು ಪರ್ವತ ಎಂದು ಗೌರವಾಧ್ಯಕ್ಷ ನಾಗರಾಜ ಪೂಜಾರ್ ಹೇಳಿದರು.

ಸಿಂಧನೂರು: ಪರಕೀಯರಿಂದ ನಲುಗಿದ ದೇಶದ ಜನರ ವಿಮೋಚನೆಗೆ ಹೋರಾಟ ನಡೆಸುವ ಮೂಲಕ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಸೇನಾನಿ ಭಗತ್‌ಸಿಂಗ್‌ ಅವರು ರಾಜಿರಹಿತ ಹೋರಾಟದ ಮೇರು ಪರ್ವತ ಎಂದು ಗೌರವಾಧ್ಯಕ್ಷ ನಾಗರಾಜ ಪೂಜಾರ್ ಹೇಳಿದರು.

ನಗರದ ಗಾಂಧಿ ವೃತ್ತದಲ್ಲಿ ಭಗತ್ ಸಿಂಗ್ ಆಟೋ ಚಾಲಕರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಭಗತ್‌ಸಿಂಗ್‌, ಸುಖದೇವ್‌, ರಾಜಗುರು ಅವರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಖದೇವ್ ಹಾಗೂ ರಾಜಗುರು ಅವರಂಥ ದಿಟ್ಟ ಯುವಕರ ಕೆಚ್ಚೆದೆಯ ಹೋರಾಟ ಬ್ರಿಟಿಷರ ಗುಂಡಿಗೆಯನ್ನೇ ನಡುಗಿಸಿತ್ತು. ಗೊಡ್ಡು ಬೆದರಿಕೆಗಳಿಗೆ ಹೆದರದೆ, ಯಾವುದೇ ರಾಜಿಗಳಿಗೆ ಒಳಗಾಗದೇ ಬ್ರಿಟಿಷರಿಗೆ ಸೆಡ್ಡು ಹೊಡೆದ ಭಗತ್ ಸಿಂಗ್ ಮತ್ತವರ ಸ್ನೇಹಿತರ ಧೈರ್ಯ ಯುವಜನತೆಗೆ ಮಾದರಿಯಾಗಿದೆ ಎಂದರು.

ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಮಾತನಾಡಿದರು. ಸಿಪಿಐಎಂಎಲ್ ಲಿಬರೇಶನ್ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಮುಖಂಡ ಆರ್.ಎಚ್.ಕಲಮಂಗಿ, ಆಟೋ ಚಾಲಕರ ಸಂಘದ ಸದಸ್ಯರಾದ ಶೇಕ್ಷಾವಲಿ, ನಾಗಪ್ಪ ಬಿಂಗಿ, ದುರುಗಪ್ಪ, ಶಿವರಾಜ್, ಬಾಬು, ರಶೀದ್, ಬಾಬರ್, ರಾಜ, ರಾಜಪ್ಪ, ಶರಣಬಸವ, ಆನಂದ ಸ್ವಾಮಿ, ನಾಗರಾಜ, ಖಾಜಾಹುಸೇನ್, ಮಂಜು, ಮುರುಗೇಶ್ ಇದ್ದರು.