ಸಾರಾಂಶ
ಶೃಂಗೇರಿ, ಭಗವದ್ಗೀತೆಯಲ್ಲಿರುವ ಸಂದೇಶಗಳು ಕೇವಲ ಹಿಂದೂ ಧರ್ಮಕ್ಕೆ ಸೀಮಿತವಾಗಿರದೇ ಇಡಿ ಮಾನವ ಕುಲಕ್ಕೆ ಅನ್ವಯಿಸಿದೆ. ಜೀವನ ಮೌಲ್ಯ ನೀಡುವ ಶ್ರೇಷ್ಠ ಗ್ರಂಥವಾಗಿದೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.
- ಚಾತುರ್ಮಾಸ ನಿರತ ಜಗದ್ಗುರುಗಳ ದರ್ಶನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಶೃಂಗೇರಿಭಗವದ್ಗೀತೆಯಲ್ಲಿರುವ ಸಂದೇಶಗಳು ಕೇವಲ ಹಿಂದೂ ಧರ್ಮಕ್ಕೆ ಸೀಮಿತವಾಗಿರದೇ ಇಡಿ ಮಾನವ ಕುಲಕ್ಕೆ ಅನ್ವಯಿಸಿದೆ. ಜೀವನ ಮೌಲ್ಯ ನೀಡುವ ಶ್ರೇಷ್ಠ ಗ್ರಂಥವಾಗಿದೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.
ಶ್ರೀ ಮಠದ ನರಸಿಂಹವನದ ಗುರುಭವನದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾದಿಂದ ಆಯೋಜಿಸಿದ್ದ ಚಾತುರ್ಮಾಸ ನಿರತ ಜಗದ್ಗುರುಗಳ ದರ್ಶನ ಕಾರ್ಯಕ್ರಮದಲ್ಲಿ ಆಶೀ ರ್ವಚನ ನೀಡಿದರು. ಚಿಕ್ಕ ವಿಷಯದಿಂದ ಎಲ್ಲಾ ವಿಚಾರಗಳನ್ನೊಳಗೊಂಡ ಶ್ರೇಷ್ಠ ಗ್ರಂಥವಾಗಿದೆ. ಇದು ಸಂಸ್ಕ್ರತದಲ್ಲಿದ್ದರೂ ಇದನ್ನು ಓದಿದಾಗ ಮನಸ್ಸಿಗೆ ಮುದ ನೀಡುವುದಲ್ಲದೇ ಉತ್ತಮ ಸಂಸ್ಕಾರ ಕಲಿಸುತ್ತದೆ ಎಂದರು.ಭಗವಂತನೇ ನೇರವಾಗಿ ಉಪದೇಶ ನೀಡಿರುವ ಸಾರವೇ ಭಗವದ್ಗೀತೆ. ನಾವೇಲ್ಲರು ಜಾತಿ ಬೇಧವಿಲ್ಲದೇ ಪ್ರತಿ ದಿನ ಪಠಣ ಮಾಡಬೇಕು. ನಾವು ಆಚರಿಸಿಕೊಂಡು ಬಂದಿರುವ ಧರ್ಮಾಚಾರಣೆಯನ್ನು ಕೈಬಿಡಬಾರದು. ಧರ್ಮವನ್ನು ನಾವು ಪಾಲಿಸಿದರೆ ಉಳಿದೆಲ್ಲ ಸಂಪತ್ತು ಬರುತ್ತದೆ. ಭಗವದ್ಗೀತೆಯಲ್ಲಿ ತಿಳಿಸಿ ದಂತೆ ಜೀವನದಲ್ಲಿ ಯಾವುದೇ ಕೆಲಸ ಮಾಡಿದರೂ ಅದನ್ನು ಪ್ರಾಮಾಣಿಕತೆ, ಶ್ರದ್ಧೆಯಿಂದ ಮಾಡಬೇಕು ಎಂದು ಹೇಳವಾಗಿದೆ. ಕೆಲಸ ಮಾಡುವ ಮೊದಲು ಫಲವನ್ನು ನಿರೀಕ್ಷೆ ಮಾಡಬಾರದು. ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಿದ ಕೆಲಸಕ್ಕೆ ಶ್ರೇಷ್ಠ ಫಲ ಸಿಕ್ಕೇ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಹಾಸಭಾದ ವಿಜಯರಂಗ ಕೋಟೆ ತೋಟ,ಶಂಕರನಾರಾಯಣ, ಭವಾನಿ ಹೆಬ್ಬಾರ್, ಗೋಪಾಲಕೃಷ್ಣ, ಹೆಬ್ಬಿಗೆ ಗಣೇಶ್, ಶಿವಶಂಕರ್ ಮತ್ತಿತರರು ಇದ್ದರು.30 ಶ್ರೀ ಚಿತ್ರ 4-
ಶೃಂಗೇರಿ ಶ್ರೀ ಮಠದ ಗುರುಭವನದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ ವತಿಯಿಂದ ಸಾಮೂಹಿಕ ಗುರುದರ್ಶನ ಮಾಡಿದರು.