ಸಾರಾಂಶ
ಶ್ರೀ ಭಗೀರಥ ಮಹರ್ಷಿಗಳು ಭೂಮಿಗೆ ಗಂಗೆಯನ್ನು ಕರೆತಂದಿದ್ದನ್ನು ನಾನು ಬಾಲ್ಯದಲ್ಲಿದ್ದಾಗ ಕಥೆ ಹೇಳುತ್ತಿದ್ದರು. ಇಂತಹ ಮಹನೀಯರ ಜಯಂತಿಯನ್ನು ಆಚರಿಸುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ ಎಂದು ಪುರಸಭೆ ಅಧ್ಯಕ್ಷ ಎಚ್.ಕೆ.ಪ್ರಸನ್ನ ತಿಳಿಸಿ, ಉಪ್ಪಾರ ಸಮಾಜದವರಿಗೆ ಶುಭಕೋರಿದರು. ಮಹರ್ಷಿ ಭಗೀರಥ ಅವರ ಜಯಂತಿಯನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ಈ ಜಯಂತಿ ಪ್ರಯುಕ್ತ ನಮ್ಮ ಸಮಾಜದ ಎಲ್ಲ ಗಣ್ಯರುಗಳು ಒಂದಡೆ ಸೇರಿ, ಜಯಂತಿಯನ್ನು ಆಚರಿಸಲಾಗುತ್ತಿದೆ. ಜಯಂತಿ ಪ್ರಯುಕ್ತ ಈ ದಿನ ಸಾರ್ವಜನಿಕರಿಗೆ ಅನ್ನ ಪ್ರಸಾದವನ್ನು ವಿತರಿಸಲಾಗುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಶ್ರೀ ಭಗೀರಥ ಮಹರ್ಷಿಗಳು ಭೂಮಿಗೆ ಗಂಗೆಯನ್ನು ಕರೆತಂದಿದ್ದನ್ನು ನಾನು ಬಾಲ್ಯದಲ್ಲಿದ್ದಾಗ ಕಥೆ ಹೇಳುತ್ತಿದ್ದರು. ಇಂತಹ ಮಹನೀಯರ ಜಯಂತಿಯನ್ನು ಆಚರಿಸುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ ಎಂದು ಪುರಸಭೆ ಅಧ್ಯಕ್ಷ ಎಚ್.ಕೆ.ಪ್ರಸನ್ನ ತಿಳಿಸಿ, ಉಪ್ಪಾರ ಸಮಾಜದವರಿಗೆ ಶುಭಕೋರಿದರು.ಪಟ್ಟಣದ ಹೂವಿನ ಮಾರುಕಟ್ಟೆ ಆವರಣದಲ್ಲಿ ಶ್ರೀ ಭಗೀರಥ ಉಪ್ಪಾರರ ಸಂಘದ ಆಶ್ರಯದಲ್ಲಿ ಸಂಭ್ರಮ ಹಾಗು ವೈಭವದಿಂದ ಆಚರಿಸಿದ ಶ್ರೀ ಭಗೀರಥ ಮಹರ್ಷಿಗಳ ಜಯಂತಿಯಲ್ಲಿ ಭಾಗಿಯಾಗಿ ಮಾತನಾಡಿದರು. ಪೂಜ್ಯರ ಆದರ್ಶ ಹಾಗೂ ಅವರ ಜನಪರ ಕಾಳಜಿಯನ್ನು ಎಲ್ಲರೂ ಮೈಗೂಡಿಸಿಕೊಂಡು ಸಾಗಬೇಕಿದೆ ಎಂದರು.
ಉಪ್ಪಾರ ಸಮಾಜದ ಮುಖಂಡ ಕಿಟ್ಟಿ ಅವರು ಮಾತನಾಡಿ, ನಮ್ಮ ಸಮಾಜದ ಮಹರ್ಷಿ ಭಗೀರಥ ಅವರ ಜಯಂತಿಯನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ಈ ಜಯಂತಿ ಪ್ರಯುಕ್ತ ನಮ್ಮ ಸಮಾಜದ ಎಲ್ಲ ಗಣ್ಯರುಗಳು ಒಂದಡೆ ಸೇರಿ, ಜಯಂತಿಯನ್ನು ಆಚರಿಸಲಾಗುತ್ತಿದೆ. ಜಯಂತಿ ಪ್ರಯುಕ್ತ ಈ ದಿನ ಸಾರ್ವಜನಿಕರಿಗೆ ಅನ್ನ ಪ್ರಸಾದವನ್ನು ವಿತರಿಸಲಾಗುತ್ತಿದೆ ಎಂದರು.ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಹಾಗೂ ರಾಷ್ಟ್ರೀಯ ಪತ್ರಕರ್ತರ ಸಂಘದ ಸದಸ್ಯ ಎಚ್.ವಿ.ಸುರೇಶ್ ಕುಮಾರ್ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಗಣ್ಯರುಗಳು ಕೇಕ್ ಕತ್ತರಿಸಿ ಸಂಭ್ರಮಿಸಸುವ ಜತೆಗೆ ಹಿರಿಯರಾದ ಎಕ್ಕಪ್ಪ ಮತ್ತು ತಂಗ್ಯಮ್ಮ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಗೀರಥ ಉಪ್ಪಾರರ ಸಂಘದ ಮುಖಂಡರುಗಳಾದ ಪುರುಷೋತ್ತಮ, ಮುತ್ತುರಾಜ್, ಕೃಷ್ಣ, ಗಣೇಶ, ನರೇಂದ್ರಬಾಬು, ಮಂಜುನಾಥ್, ರವಿ, ಚಂದ್ರು, ಪ್ರಸನ್ನ, ಎಚ್.ಪಿ.ರಘು, ಗಣೇಶ, ಜಯಮ್ಮ, ಭಾಗ್ಯಮ್ಮ, ಲತ, ಶೀಲ, ಇತರರು ಭಾಗವಹಿಸಿದ್ದರು.