ಭಾಲ್ಕಿಯಿಂದ ಹುಮನಾಬಾದ್‌ವರೆಗೆ ರಸ್ತೆ ಮಾಡಿಸಿದ್ದೇ ನಾನು: ಭಗವಂತ ಖೂಬಾ

| Published : Feb 22 2024, 01:50 AM IST

ಭಾಲ್ಕಿಯಿಂದ ಹುಮನಾಬಾದ್‌ವರೆಗೆ ರಸ್ತೆ ಮಾಡಿಸಿದ್ದೇ ನಾನು: ಭಗವಂತ ಖೂಬಾ
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ ಕೆಲಸ ಶೂನ್ಯ ಎಂದ ಸಚಿವ ಖಂಡ್ರೆ ವಿರುದ್ಧ ಸಚಿವ ಭಗವಂತ ಖೂಬಾ ಕಿಡಿಕಾರಿದರು. ಹುಮನಾಬಾದ್‌ ಥೇರ್‌ ಮೈದಾನದಲ್ಲಿ ಬಿಜೆಪಿ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಯಿತು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ಭಾಲ್ಕಿಯಿಂದ ಹುಮನಾಬಾದ್‌ಗೆ ಬರುವ ರಸ್ತೆಯನ್ನು ಮೋದಿ ಸರ್ಕಾರದಲ್ಲಿ ನಾನು ಮಾಡಿಸಿದ್ದೇನೆ. ಜಿಲ್ಲೆಯ ಉಸ್ತುವಾರಿ ಸಚಿವರ ಕಾರ್ಯ ಸೊನ್ನೆ ಎಂದು ಕೇಂದ್ರ ಸಚಿವ ಹಾಗೂ ಬೀದರ್‌ ಸಂಸದ ಭಗವಂತ ಖೂಬಾ ಆರೋಪಿಸಿದರು.

ಪಟ್ಟಣದ ಥೇರ್‌ ಮೈದಾನದಲ್ಲಿ ಬುಧವಾರ ಬಿಜೆಪಿ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಡಿದ ವರು, ಮಲ್ಲಿಕಾರ್ಜುನ ಖರ್ಗೆ ಬೀದರ್‌-ಬೆಂಗಳೂರು ಮಧ್ಯೆ ರೈಲು ಸಂಚಾರ ಮಾಡಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ, ನಾನು 18 ರೈಲುಗಳನ್ನು ಪ್ರಾರಂಭಿಸಿದ್ದೇನೆ. ಔರಾದ್‌ನಲ್ಲಿ ವಿದ್ಯುತ್ ಸೇರಿದಂತೆ ‌ಅನೇಕ ನೀರಾವರಿ ಯೋಜನೆ ಜಾರಿಗೆ ತಂದಿದ್ದೇನೆ. ಆದರೆ ಭಾಲ್ಕಿಯಲ್ಲಿ ಸಚಿವ ಖಂಡ್ರೆಗೆ ಒಂದು ಕ್ರೀಡಾಂಗಣ ನಿರ್ಮಾಣ ಮಾಡಲು ಆಗಿಲ್ಲ. 371 (ಜೆ) ಜಾರಿಗೆ ತಂದ ಶ್ರೇಯಸ್ಸು ಬಿಜೆಪಿಗೆ ಸಿಗಬೇಕೆ ವಿನಾ ಕಾಂಗ್ರೆಸ್‌ಗೆ ಅಲ್ಲ ಎಂದು ಖೂಬಾ ನುಡಿದರು.

ಎಲ್ಲರು ಕೂಡಿ ಮೋದಿಯವರ ಕೈ ಗಟ್ಟಿ ಪಡಿಸೋಣ:

ಔರಾದ್ ಶಾಸಕ ಪ್ರಭು ಚವ್ಹಾಣ್‌ ಮಾತನಾಡಿ, ಮೂರನೇ ಬಾರಿ ಮೋದಿಗೆ ಕೆಂಪು ಕೋಟೆಯ ಮೇಲೆ ಕೂರಿಸಲು ಶಿವರಾಜಸಿಂಗ ಚವ್ಹಾಣ ಅವರು ನಮ್ಮ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಮೋದಿಯವರ ಕೈ ಗಟ್ಟಿ ಮಾಡಲಾಗುತ್ತಿದೆ.

ಹತ್ತು ವರ್ಷಗಳಲ್ಲಿ ದೇಶದ ಪ್ರಗತಿ ಕುರಿತು ಕಾರ್ಯಕರ್ತರು ಮನೆ ಮನೆಗೆ ತೆರಳಿ ತಿಳಿಸಬೇಕು ಎಂದು ಕರೆ ನೀಡಿದರು.

ಮುಂಬರುವ ದಿನಗಳಲ್ಲಿ ಭಾರತ ಹಿಂದು ದೇಶ ಆಗಲಿದೆ. ದೇಶದಲ್ಲಿ ಕಾಂಗ್ರೆಸ್ ಲೂಟಿ ಮಾಡಿದೆ. ನಮ್ಮ ಕಾರ್ಯಕರ್ತರಿಗೆ ನ್ಯಾಯ, ಆತ್ಮಬಲ ಸೀಗಬೇಕು ಎಂದು ಹೇಳಿದರು.

ಮಧ್ಯ ಪ್ರದೇಶ ಮಾದರಿಯಲ್ಲಿ ಎಲ್ಲರ ಏಳಿಗೆ:

ಹುಮನಾಬಾದ್ ಶಾಸಕ ಡಾ. ಸಿದ್ದಲಿಂಗಪ್ಪಾ ಪಾಟೀಲ್ ಮಾತನಾಡಿ, 2024 ರ ಲೋಕಸಭಾ ಚುನಾವಣೆ ಪ್ರಯುಕ್ತ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶ ದೇಶವ್ಯಾಪಿ ಹಮ್ಮಿಕೊಳ್ಳಲಾಗಿದೆ. ಮಧ್ಯ ಪ್ರದೇಶ ಮಾದರಿಯಂತೆ ಪ್ರತಿಯೊಂದು ಜನಾಂಗದವರ ಏಳಿಗೆಗೆ ಬಿಜೆಪಿ ಶ್ರಮಿಸಲಿದೆ ಎಂದರು.

ಅಯೋಧ್ಯೆಯಲ್ಲಿನ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನವರಲ್ಲಿ ನಡುಕ ಹುಟ್ಟಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ಇತ್ತು. ಇದೀಗ ಹಿಂದೆ ‌ಸರಿಯುತ್ತಿದ್ದಾರೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಕೇಂದ್ರದ ಯೋಜನೆಗಳನ್ನು ಮನೆಗೆ ತಲುಪಿಸುವ ಕೆಲಸ ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡುವುದು ಅವಶ್ಯಕವಾಗಿದೆ ಎಂದರು.