ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ 2006-2007ನೇ ಸಾಲಿನಲ್ಲಿ ಜಾರಿಗೊಂಡಿತ್ತು. ಈಗ 18 ವರ್ಷ ಪೂರ್ಣಗೊಂಡ ಹೆಣ್ಣು ಮಕ್ಕಳಿಗೆ ಹಣ ಪಾವತಿಸಲಾಗುತ್ತಿದೆ.
ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸಲು ಮತ್ತು ಅವರ ಸ್ಥಾನಮಾನವನ್ನು ಸುಧಾರಿಸುವ ಧ್ಯೇಯೋದ್ದೇಶದಿಂದ ಜಾರಿಗೊಳಿಸಲಾಗಿದ್ದ ''''''''ಭಾಗ್ಯಲಕ್ಷ್ಮಿ'''''''' ಯೋಜನೆಯಡಿ ಜಿಲ್ಲೆಯಲ್ಲಿ ಮೊದಲ ಬಾರಿಗೆ 4,357 ಯುವತಿಯರು ಫಲಾನುಭವಿಗಳಾಗಿದ್ದಾರೆ.
ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ 2006-2007ನೇ ಸಾಲಿನಲ್ಲಿ ಜಾರಿಗೊಂಡಿತ್ತು. ಈಗ 18 ವರ್ಷ ಪೂರ್ಣಗೊಂಡ ಹೆಣ್ಣು ಮಕ್ಕಳಿಗೆ ಹಣ ಪಾವತಿಸಲಾಗುತ್ತಿದೆ. 2024ರಲ್ಲಿ ಅವಧಿ ಮುಗಿದಿರುವ ಒಟ್ಟು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ಪ್ರಕ್ರಿಯೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪ್ರಾರಂಭಿಸಿದೆ. ಇದು ಫಲಾನುಭವಿಗಳಿಗೆ ಶಿಕ್ಷಣ ಸೇರಿದಂತೆ ಹಲವು ಬರುತ್ತಿದೆ.18 ವರ್ಷಗಳ ಹಿಂದೆ ರಾಜ್ಯದಲ್ಲಿ ಜಾರಿಗೊಳಿಸಿದ್ದ ಈ ಯೋಜನೆಯ ಲಾಭ ಬರುವುದಕ್ಕೆ ಈಗ ಆರಂಭವಾಗಿದೆ. ಆಗ ತಮ್ಮ ಹೆಣ್ಣು ಮಕ್ಕಳ ಕುರಿತು ನೋಂದಣಿ ಮಾಡಿಸಿ ಬಾಂಡ್ ಪಡೆದಿದ್ದವರು ಪ್ರಯೋಜನ ಗಳಿಸುತ್ತಿದ್ದಾರೆ. 4357 ಯುವತಿಯರು ಪರಿಪಕ್ವ ಹಣವನ್ನು ತಮ್ಮದಾಗಿಸಿ ಕೊಳ್ಳುತ್ತಿದ್ದಾರೆ.
ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ:ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯು ಫಲಾನುಭವಿಗಳಿಗೆ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿಸುತ್ತಿದೆ. ಆಗ ಬಾಂಡ್ ಪಡೆದಿದ್ದವರಿಗೆ ಮೊದಲಿಗೆ 32 ಸಾವಿರವನ್ನು ಪಾವತಿಸಲಾಗುತ್ತಿದೆ. ಎಲ್ಲರ ಮಾಹಿತಿಯನ್ನೂ ಸಂಗ್ರಹಿಸಿ ದಾಖಲೆಗಳ ಸಹಿತ ನಿಗದಿತ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ.
ಇನ್ನು 2007-08ನೇ ಸಾಲಿನ ಸುಮಾರು 900 ಮಂದಿಯ ಮಾಹಿತಿಯನ್ನು ದಾಖಲಿಸಲಾಗಿದೆ. ಅವರಿಗೆ ಪರಿಪಕ್ವ ಹಣ ಸಂದಾಯ ಆಗಬೇಕಾಗಿದೆ. ಉಳಿದವರಿಗೂ ಹಂತ-ಹಂತವಾಗಿ ಹಣ ದೊರೆಯಲಿದೆ .ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ, ಕುಟುಂಬ ಮತ್ತು ಸಮಾಜದಲ್ಲಿ ಹೆಣ್ಣು ಮಗುವಿನ ಘನತೆ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಿದ್ದರು. 2006-07ರಲ್ಲಿ ನೋಂದಣಿ ಮಾಡಿಸಿದವರಿಗೆ 18 ವರ್ಷ ಪೂರೈಸಿದ ನಂತರ 32,351 ರು. ದೊರೆಯಲಿದೆ. 2008ರ ಆ.1ರಿಂದ 2020ರ ಮಾರ್ಚ್ ಅಂತ್ಯದವರೆಗಿನ ಅವಧಿಯಲ್ಲಿ ನೋಂದಾಯಿಸಿದವರಿಗೆ ಸಿಗುವ ಅಂದಾಜು ಮೊತ್ತವನ್ನು 1 ಲಕ್ಷಕ್ಕೆ ಏರಿಕೆ ಮಾಡಲಾಯಿತು. ಅದು ಪರಿಪಕ್ವಗೊಂಡಾಗ ಫಲಾನುಭವಿಗಳಿಗೆ ಹಣ ದೊರೆಯುತ್ತದೆ.
ನೋಂದಣಿಯಾದ ಹೆಣ್ಣುಮಕ್ಕಳು ಕಡ್ಡಾಯವಾಗಿ 9ನೇ ತರಗತಿವರೆಗೆ ಶಿಕ್ಷಣ ಪಡೆದಿರಬೇಕು. ಬಾಲಕಾರ್ಮಿಕರಾಗಿರಬಾರದು, ಬಾಲ್ಯವಿವಾಹ ಆಗಿರಬಾರದು, ಪಾಲಕರು ಕಡ್ಡಾಯವಾಗಿ ಎರಡು ಮಕ್ಕಳನ್ನು ಮಾತ್ರ ಹೊಂದಿರಬೇಕು. ಹೆಚ್ಚು ಮಕ್ಕಳು ಇದ್ದಲ್ಲಿ ಅವರು ಯೋಜನೆಯಿಂದ ವಂಚಿತರಾಗುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಜೆ.ಆರ್.ದಿನೇಶ್ ''''''''ಕನ್ನಡಪ್ರಭ''''''''ಕ್ಕೆ ಪ್ರತಿಕ್ರಿಯೆ ನೀಡಿದರು....ಬಾಕ್ಸ್....
ಏನಿದು ಯೋಜನೆ?ಹೆಣ್ಣುಭ್ರೂಣ ಹತ್ಯೆ ತಡೆಯಲು, ಬಾಲ್ಯವಿವಾಹ ಪದ್ಧತಿ ನಿಯಂತ್ರಿಸಲು, ಹೆಣ್ಣು ಮಗುವಿನ ಶಿಕ್ಷಣ, ಲಿಂಗಾನುಪಾತ ಉತ್ತಮಪಡಿಸಲು, ಆರೋಗ್ಯಮಟ್ಟ ಉತ್ತಮಪಡಿಸಿ ಹೆಣ್ಣುಮಕ್ಕಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿತ್ತು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಸಿದ ಇಬ್ಬರು ಹೆಣ್ಣುಮಗುವಿಗೆ ಸರ್ಕಾರವು ನಿಶ್ಚಿತ ಠೇವಣಿ ಹೂಡಿ ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಪರಿಪಕ್ವ ಹಣ ನೀಡುವ ಉದ್ದೇಶದಿಂದ ಯೋಜನೆ ಆರಂಭಿಸಿತ್ತು.2006-07ರಲ್ಲಿ ನೋಂದಾಯಿಸಿದ್ಧವರ ವಯಸ್ಸು ಈಗ 18 ವರ್ಷ ಪೂರ್ಣಗೊಂಡಿರುವುದರಿಂದ ಎಲ್‌ಐಸಿಯಿಂದ ಪರಿಪಕ್ವ ಮೊತ್ತ ಮಂಜೂರಾಗಿದೆ. 2020-2021 ರಿಂದ ''''''''ಭಾಗ್ಯಲಕ್ಷ್ಮಿ'''''''' ಯೋಜನೆಯು ''''''''ಸುಕನ್ಯಾ ಸಮೃದ್ಧಿ ಯೋಜನೆ''''''''ಯಾಗಿ ರೂಪಾಂತರಗೊಂಡಿತು. ಇದರಲ್ಲಿ ಖಾತೆ ತೆರೆದವರಿಗೆ 21 ವರ್ಷ ನಂತರ ಅಂದಾಜು 1.27 ಲಕ್ಷ ದೊರೆಯಲಿದೆ.
...ಬಾಕ್ಸ್ ...ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಖಾತೆ ಯೋಜನೆ (2020-21) 2006-07 ರಿಂದ 2019-20 ನೇ ಸಾಲಿನವರೆಗೆ ಭಾರತೀಯ ಜೀವ ವಿಮಾ ನಿಗಮವು ಪಾಲುದಾರ ಹಣಕಾಸುಸಂಸ್ಥೆಯಾಗಿದ್ದು, 2020-21ನೇ ಸಾಲಿನಿಂದ ಆಡಳಿತಾತ್ಮಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಯೋಜನೆಯನ್ನು ಸರ್ಕಾರದ ಆದೇಶದಂತೆ ಅಂಚೆ ಯೋಜನೆಯ ಮೂಲಕ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಅನುಷ್ಠಾನಗೊಳಿಲಾಗಿದೆ.
ಈ ಯೋಜನೆಯಡಿ ಬಿಪಿಎಲ್ ಕುಟುಂಬದ 2 ಹೆಣ್ಣು ಮಕ್ಕಳಿಗೆ ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕ 3 ಸಾವಿರ ರು. ನಂತೆ 15 ವರ್ಷಗಳವರೆಗೆ ಒಟ್ಟು 45 ಸಾವಿರ ರು.ಗಳನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಠೇವಣಿ ಹೂಡಲಾಗುತ್ತದೆ. 21 ವರ್ಷ ಅವಧಿ ಪೂರ್ಣಗೊಂಡ ನಂತರ ಅಂದಾಜು ಪರಿಪಕ್ಷ ಮೊತ್ತ 1.27 ಲಕ್ಷ ರು. ನೀಡಲಾಗುತ್ತದೆ. 10 ನೇ ತರಗತಿ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಖಾತೆಯಲ್ಲಿರುವ ಮೊತ್ತದ ಶೇ. 50ರಷ್ಟು ಭಾಗವನ್ನು ಹಿಂಪಡೆಯಲು ಯೋಜನೆಯಡಿ ಅವಕಾಶವಿರುತ್ತದೆ....ಬಾಕ್ಸ್ ....
2006 ಏಪ್ರಿಲ್ 1 ರಿಂದ 2025ರ ಡಿ.17ರವರೆಗೆ ಫಲಾನುಭವಿಗಳ ನೊಂದಣಿ ವಿವರತಾಲೂಕುಫಲಾನುಭವಿಗಳ ಸಂಖ್ಯೆ
ಚನ್ನಪಟ್ಟಣ21,322ಹಾರೋಹಳ್ಳಿ5,843
ಕನಕಪುರ16,408ಮಾಗಡಿ13,278
ರಾಮನಗರ18,537ಒಟ್ಟು75,388
