ಭಾಗ್ಯಲಕ್ಷ್ಮಿ ಬಾಂಡ್ : ಹಣ ಪಡೆಯಲು ಮನವಿ

| N/A | Published : May 10 2025, 01:11 AM IST / Updated: May 10 2025, 02:01 PM IST

ಸಾರಾಂಶ

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸುಮಾರು 1000 ಹೆಣ್ಣು ಮಕ್ಕಳಿಗೆ ಈ ಭಾಗ್ಯ ಲಭಿಸಿದ್ದು, ಪ್ರಾರಂಭದಲ್ಲಿ ನೋಂದಣಿ ಮಾಡಿಸಿದ ಹೆಣ್ಣು ಮಕ್ಕಳಿಗೆ ಹದಿನೆಂಟು ವರ್ಷ ಮುಕ್ತಾಯಕೊಂಡಿದ್ದು, ಆ ವರ್ಷದ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ 31,650 ರು.ಗಳು ಅವರ ಖಾತೆಗೆ ಜಮೆ 

  ಚಿಕ್ಕಬಳ್ಳಾಪುರ : ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆಂದು ರಾಜ್ಯ ಸರ್ಕಾರ 2006- 07ರಲ್ಲಿ ಪ್ರಾರಂಭಿಸಿದ ಭಾಗ್ಯಲಕ್ಷ್ಮೀ ಬಾಂಡ್ ಈಗ ಮೆಚೂರಿಟಿ ಆಗಿದೆ. ತಾಲೂಕಿನಲ್ಲಿ ಸುಮಾರು ಒಂದು ಸಾವಿರ ಹೆಣ್ಣು ಮಕ್ಕಳಿಗೆ ಇದರ ಪ್ರಯೋಜನ ಸಿಗುತ್ತಿದೆ ಎಂದು ಸಮಗ್ರ ಮಹಿಳಾ ಮತ್ತು ಮಕ್ಕಳ ತಾಲೂಕು ಯೋಜನಾ ಅಭಿವೃದ್ಧಿ ಅಧಿಕಾರಿ ಗಂಗಾಧರಯ್ಯ ತಿಳಿಸಿದರು.

ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾ ಇಲಾಖೆಯ ತಾಲೂಕು ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೆಚೂರಿಟಿ ಆಗಿರುವ ಭಾಗ್ಯಲಕ್ಷ್ಮೀ ಬಾಂಡ್‌ನಲ್ಲಿ ಇರುವ ಕೆಲವರ ವಿಳಾಸವೇ ಪತ್ತೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ.1000 ಹೆಣ್ಣು ಮಕ್ಕಳಿಗೆ ಭಾಗ್ಯ

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸುಮಾರು 1000 ಹೆಣ್ಣು ಮಕ್ಕಳಿಗೆ ಈ ಭಾಗ್ಯ ಲಭಿಸಿದ್ದು, ಪ್ರಾರಂಭದಲ್ಲಿ ನೋಂದಣಿ ಮಾಡಿಸಿದ ಹೆಣ್ಣು ಮಕ್ಕಳಿಗೆ ಹದಿನೆಂಟು ವರ್ಷ ಮುಕ್ತಾಯಕೊಂಡಿದ್ದು, ಆ ವರ್ಷದ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ 31,650 ರು.ಗಳು ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. 2006- 07ನೇ ಸಾಲಿನಲ್ಲಿ ಜನಿಸಿದ ಹೆಣ್ಣು ಮಕ್ಕಳ ಹೆಸರಿನಲ್ಲಿ ಭಾಗ್ಯಲಕ್ಷ್ಮಿ ಬಾಂಡುಗಳನ್ನು ಪಡೆದಿರುವ ಪೋಷಕರು ಕೂಡಲೇ ಬಂದು ತಮ್ಮ ಬ್ಯಾಂಕ್ ಖಾತೆ ಹಾಗೂ ಭಾಗ್ಯಲಕ್ಷ್ಮಿ ಬಾಂಡುಗಳನ್ನು ನಿಮಗೆ ಪರಿಚಯ ಇರುವ ಅಂಗನವಾಡಿ ಕೇಂದ್ರಗಳು ಅಥವಾ ನೇರವಾಗಿ ನಗರದ ವಾಪಸಂದ್ರ ಬಡಾವಣೆಯಲ್ಲಿರುವ ಸಿಡಿಪಿಒ ಕಚೇರಿಗೆ ತಲುಪಿಸಿದರೆ ಮೆಚೂರಿಟಿ ಹಣವನ್ನು ಅವರ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದರು

ಪ್ರಾರಂಭದ ವರ್ಷಗಳಲ್ಲಿ ನೋಂದಣಿಯಾದ ಹೆಣ್ಣುಮಕ್ಕಳಿಗೆ 31,650 ರು.ಗಳು ಮಾತ್ರ ಜಮೆಯಾಗುತಿದ್ದು, ನಂತರದ ದಿನಗಳಲ್ಲಿ ನೋಂದಣಿಯಾದ ಹೆಣ್ಣುಮಕ್ಕಳಿಗೆ ಒಂದು ಲಕ್ಷ ರು. ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.