ಸಾರಾಂಶ
ನವರಾತ್ರಿ ಪ್ರಯುಕ್ತ ಪ್ರತಿವರ್ಷವೂ ಈ ಕ್ಷೇತ್ರದಲ್ಲಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿಜಯದಶಮಿದಿನದಂದು ಮಂಗಳ ಕಾರ್ಯದೊಂದಿಗೆ ಶ್ರೀ ನಾಗ ದೇವರಿಗೆ ಪ್ರಿಯವಾದ ರಂಗ ಪೂಜೆ, ಮಹಾಪೂಜೆಯೊಂದಿಗೆ ಅನ್ನಸಂತರ್ಪಣೆ ನಡೆಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ವಿಬುಧಪ್ರಿಯನಗರದ ಶ್ರೀ ನಾಗ ಕ್ಷೇತ್ರದಲ್ಲಿ ವಿಜಯದಶಮಿಯಂದು 21ನೇ ವರ್ಷದ ಭಜನಾ ಮಂಗಳ ಮಹೋತ್ಸವ ವಿಜೃಂಬಣೆಯಿಂದ ನಡೆಯಿತು.ನವರಾತ್ರಿ ಪ್ರಯುಕ್ತ ಪ್ರತಿವರ್ಷವೂ ಈ ಕ್ಷೇತ್ರದಲ್ಲಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿಜಯದಶಮಿದಿನದಂದು ಮಂಗಳ ಕಾರ್ಯದೊಂದಿಗೆ ಶ್ರೀ ನಾಗ ದೇವರಿಗೆ ಪ್ರಿಯವಾದ ರಂಗ ಪೂಜೆ, ಮಹಾಪೂಜೆಯೊಂದಿಗೆ ಅನ್ನಸಂತರ್ಪಣೆ ನಡೆಸಲಾಗುತ್ತಿದೆ.ಭಜನಾ ಮಂಗಳ ಮಹೋತ್ಸವದಲ್ಲಿ ಪೆರ್ಣಂಕಿಲ ಮಹಿಳಾ ಭಜನಾ ಮಂಡಳಿ, ಇಂದ್ರಾಳಿ ನವದುರ್ಗ ಕುಣಿತ ಭಜನಾ ತಂಡ, ಪೆಲತ್ತೂರು ಮಹಾಲಿಂಗೇಶ್ವರ ಭಜನಾ ಮಂಡಳಿ, ಇಂದ್ರಾಳಿ ಶ್ರೀ ಮಹಿಷಮರ್ದಿನಿ ಮಹಿಳಾ ಭಜನಾ ಮಂಡಳಿ, ಇಂದ್ರಾಳಿ ಶ್ರೀ ಮುಖ್ಯಪ್ರಾಣ ಭಜನಾ ಮಂಡಳಿಗಳು ಭಾಗವಹಿಸಿ ಸೇವೆಯನ್ನು ನೀಡಿದವು.ಶ್ರೀ ನಾಗಕ್ಷೇತ್ರ ಭಜನಾ ಮಂಡಳಿ ವಿಬುಧಪ್ರಿಯ ನಗರ ನೇತೃತ್ವ ವಹಿಸಿದ್ದರು. ಆಡಳಿತ ಮಂಡಳಿಯ ಸಮನ್ವಯಕಾರರಾದ ಬಾಬು ಮಣಿಪಾಲ ಸಹಕಾರ ನೀಡಿದರು.ಆರ್ಥಿಕವಾಗಿ ಬಲಿಷ್ಠವಲ್ಲದಿದ್ದರು, ಈ ಕ್ಷೇತ್ರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯಾವುದೇ ಕೊರತೆ ಇಲ್ಲ. ಇಂತಹ ಪುಣ್ಯ ಕಾರ್ಯಗಳಿಗೆ ಶ್ರೀ ನಾಗ ದೇವರ ಭಕ್ತರು, ದಾನಿಗಳು ಈ ಕ್ಷೇತ್ರದತ್ತ ಗಮನ ಹರಿಸಬೇಕು ಎಂದು ಆಡಳಿತ ಮಂಡಳಿ ವಿನಂತಿಸುತ್ತಿದೆ.