2029ಕ್ಕೆ ಸಂಘಟನೆಗೆ ಸುವರ್ಣ ಮಹೋತ್ಸವ ಸಂಭ್ರಮಕನ್ನಡಪ್ರಭ ವಾರ್ತೆ ಉಡುಪಿ
ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಸಾಯಿ ರೆಡ್ಡಿ ಅವರು ಉಡುಪಿಗೆ ಭೇಟಿ ನೀಡಿ ಸಂಘಟನೆಯ ಜಿಲ್ಲಾ ಸ್ತರದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಭಾರತೀಯ ಕಿಸಾನ್ ಸಂಘವು ಅಖಿಲ ಭಾರತ ಮಟ್ಟದ ರೈತ ಸಂಘಟನೆಯಾಗಿದ್ದು, 2029ಕ್ಕೆ ಭಾರತೀಯ ಕಿಸಾನ್ ಸಂಘ ಪ್ರಾರಂಭವಾಗಿ 50 ವರ್ಷ ಪೂರ್ಣಗೊಳ್ಳಲಿದೆ. ಪ್ರಸ್ತುತ ದೇಶಾದ್ಯಂತ ಸುಮಾರು 82,000 ಗ್ರಾಮಗಳಲ್ಲಿ ಸಮಿತಿಯನ್ನು ಹೊಂದಿ, ರಾಷ್ಟ್ರ ಮಟ್ಟದ ಅತಿ ದೊಡ್ಡ ರೈತ ಸಂಘಟನೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.ಸಂಘಟನೆಯ ಬೇರು ಗ್ರಾಮದಲ್ಲಿದೆ. ಗ್ರಾಮಗಳಲ್ಲಿ ರೈತರು ಸಂಘಟಿತರಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು ಸ್ವಾವಲಂಭಿಗಳಾಗಿ ಅರ್ಥಿಕ ಪ್ರಗತಿಯನ್ನು ಹೊಂದಿದಾಗ ಮಾತ್ರ ಈ ದೇಶ ಸಂಪದ್ಬರಿತವಾಗಲು ಸಾಧ್ಯ. ದೇಶದ ಬೆನ್ನೆಲುಬು ಆಗಿರುವ ಕೃಷಿಯನ್ನ ಮತ್ತೊಮ್ಮೆ ಎತ್ತರದಕ್ಕೆ ಕೊಂಡೊಯ್ಯುವ ಹೊಣೆ ನಮ್ಮೆಲ್ಲ ಕಾರ್ಯಕರ್ತರ ಮೇಲಿದೆ ಎಂದು ಅವರು ತಿಳಿಸಿದರು.ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆ, ಕಾಡ ಪ್ರಾಣಿಗಳ ಸಮಸ್ಯೆ, ಭೂಮಿಯ ಫಲವತ್ತತೆ ಇಳಿಕೆ, ಕಾರ್ಮಿಕರ ಕೊರತೆ ಹಾಗೂ ಕಾರ್ಮಿಕರ ದುಬಾರಿ ವೇತನದ ಕಾರಣಕ್ಕೆ ಕೃಷಿ ಬಹಳ ಹಿನ್ನಡೆಯಾಗುತ್ತಿದೆ. ಈ ಸಮಸ್ಯೆಗಳಿಗೆ ಪರ್ಯಾಯ ಮಾರ್ಗೋಪಾಯವನ್ನು ರೈತರು, ವಿಜ್ಞಾನಿಗಳು ಹಾಗೂ ಸರಕಾರಗಳು ಜೊತೆಯಾಗಿ ಕಂಡುಕೊಳ್ಳಬೇಕಾಗಿದೆ ಎಂದು ಅವರು ಕರೆ ನೀಡಿದರು. ಈ ಸಂದರ್ಭ ಭಾ.ಕಿ.ಸಂ. ದಕ್ಷಿಣ ಪ್ರಾಂತ್ಯ ಅಧ್ಯಕ್ಷ ರಮೇಶ್ ರಾಜು, ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಜಿಲ್ಲಾ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಜೈನ್, ಉಪಾಧ್ಯಕ್ಷ ಶ್ರೀನಿವಾಸ ಭಟ್, ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಸ್ವಾಗತಿಸಿ, ಜಿಲ್ಲೆಯಲ್ಲಿ ಸಂಘಟನೆಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು. ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿಯವರು ವಂದಿಸಿದರು.ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ರಾಷ್ಟ್ರೀಯ ಅಧ್ಯಕ್ಷರು ನಂತರದಲ್ಲಿ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದ ಗ್ರಾಮ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ, ಮಾರ್ಗದರ್ಶನ ನೀಡಿದರು. ಅಲ್ಲಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮುಂದಿನ ಪ್ರವಾಸ ಕೈಗೊಂಡರು.ಉಡುಪಿ ಜಿಲ್ಲೆಗೆ ಭಾಕಿಸಂ ರಾಷ್ಟ್ರೀಯ ಅಧ್ಯಕ್ಷ ಸಾಯಿ ರೆಡ್ಡಿ ಭೇಟಿ
ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಸಾಯಿ ರೆಡ್ಡಿ ಅವರು ಉಡುಪಿಗೆ ಭೇಟಿ ನೀಡಿ ಸಂಘಟನೆಯ ಜಿಲ್ಲಾ ಸ್ತರದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.